ಹೈಕೋರ್ಟ್‌ಗಳಲ್ಲಿ 51 ಲಕ್ಷ, ಕೆಳಹಂತದ ನ್ಯಾಯಾಲಯಗಳಲ್ಲಿ 3 ಕೋಟಿ ಪ್ರಕರಣಗಳು ಬಾಕಿ: ಕೇಂದ್ರ ಸರ್ಕಾರ

ಅಲಹಾಬಾದ್ ಹೈಕೋರ್ಟ್‌ನಲ್ಲಿ 7,46,677 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು ಅಗ್ರಸ್ಥಾನದಲ್ಲಿದೆ. ಪಂಜಾಬ್ ಮತ್ತು ಹರಿಯಾಣ, ಮದ್ರಾಸ್, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳು ನಂತರದ ಸ್ಥಾನಗಳಲ್ಲಿವೆ.
ಸಂಸತ್ ಭವನ
ಸಂಸತ್ ಭವನ
Published on

ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಸೆಪ್ಟೆಂಬರ್ 16ರ ವರೆಗೆ 55 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ವಿವರಿಸಿದೆ. ಅಲಹಾಬಾದ್ ಹೈಕೋರ್ಟ್ ಅಗ್ರಸ್ಥಾನದಲ್ಲಿದ್ದು, ಒಟ್ಟು 7,46,677 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳು
ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳು

ಅಲಹಾಬಾದ್ ಹೈಕೋರ್ಟ್‌ ಬಳಿಕ ಪಂಜಾಬ್ ಮತ್ತು ಹರಿಯಾಣ (6,07,069 ಪ್ರಕರಣ), ಮದ್ರಾಸ್ (5,70,282 ಪ್ರಕರಣ), ರಾಜಸ್ಥಾನ (5,07,749 ಪ್ರಕರಣ) ಮತ್ತು ಮಧ್ಯಪ್ರದೇಶ (3,75,630 ಪ್ರಕರಣ) ಹೈಕೋರ್ಟ್‌ಗಳು ನಂತರದ ಸ್ಥಾನದಲ್ಲಿವೆ.

ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು
ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು

ದೇಶದ ಎಲ್ಲಾ 25 ಹೈಕೋರ್ಟ್‌ಗಳಲ್ಲಿ ಒಟ್ಟಾರೆ 51,52,921 ಪ್ರಕರಣಗಳು ಬಾಕಿ ಇವೆ. ಈ ಪೈಕಿ 36,77,089 ಸಿವಿಲ್ ಮತ್ತು 12,75,832 ಕ್ರಿಮಿನಲ್ ಪ್ರಕರಣಗಳಾಗಿವೆ.

Also Read
ದೇಶದೆಲ್ಲೆಡೆ ಸಂಸದರು, ಶಾಸಕರ ವಿರುದ್ಧ 4442 ಪ್ರಕರಣಗಳು ಬಾಕಿ: ಸುಪ್ರೀಂಗೆ ಅಮಿಕಸ್ ಕ್ಯೂರಿ ಮಾಹಿತಿ

ದೇಶದ ಎಲ್ಲಾ ಜಿಲ್ಲಾ ಮತ್ತು ಸಮಾನ ನ್ಯಾಯಾಲಯಗಳಲ್ಲಿ 3,44,73,068 ಪ್ರಕರಣಗಳು ಬಾಕಿ ಇವೆ. ಈ ಪೈಕಿ 94,49,268 ಸಿವಿಲ್ ಪ್ರಕರಣಗಳಾಗಿದ್ದು, 2,50,53,800 ಕ್ರಿಮಿನಲ್ ಪ್ರಕರಣಗಳಾಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.

ಕರ್ನಾಟಕದ ಹೈಕೋರ್ಟ್‌ನಲ್ಲಿ 1,97,690 ಪ್ರಕರಣಗಳು ಬಾಕಿ

ಕರ್ನಾಟಕ ಹೈಕೋರ್ಟ್‌ನಲ್ಲಿ 1,65,645 ಸಿವಿಲ್ ಮತ್ತು 32,045 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟಾರೆ 1,97,690 ಪ್ರಕರಣಗಳು ಬಾಕಿ ಇವೆ. ಜಿಲ್ಲಾ ಮತ್ತು ಸಮಾನ ನ್ಯಾಯಾಲಯಗಳಲ್ಲಿ 8,13,511 ಸಿವಿಲ್ ಮತ್ತು 9,23,496 ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ ಒಟ್ಟು 17,37,007 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

Kannada Bar & Bench
kannada.barandbench.com