ನಾಳೆ 600 ಅರ್ಜಿಗಳನ್ನು ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿ ನಾಗಪ್ರಸನ್ನ

ನ್ಯಾ. ನಾಗಪ್ರಸನ್ನ 2024ರ ಏ.22ರಂದು 608 ಅರ್ಜಿ ಇತ್ಯರ್ಥಪಡಿಸಿದ್ದರು. 2023ರ ಜೂನ್‌ 12ರ ವಿಚಾರಣೆಯಂದು ಭರ್ತಿ 522 ಪ್ರಕರಣ ವಿಚಾರಣೆ ನಡೆಸಿದ್ದರು. ಅದಕ್ಕೂ ಕೆಲವು ತಿಂಗಳ ಹಿಂದೆ 480ಕ್ಕೂ ಅಧಿಕ ಪ್ರಕರಣ ವಿಚಾರಣೆ ನಡೆಸಿದ್ದರು.
Justice M Nagaprasanna
Justice M Nagaprasanna
Published on

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮಂಗಳವಾರ (ಜೂನ್‌ 18) 600 ಅರ್ಜಿಗಳ ವಿಚಾರಣೆ ನಡೆಸಲಿದೆ. ಸುಮಾರು ಎರಡು ತಿಂಗಳ ಹಿಂದೆ 608 ಅರ್ಜಿ ಇತ್ಯರ್ಥಪಡಿಸುವ ಮೂಲಕ ನ್ಯಾ. ನಾಗಪ್ರಸನ್ನ ದಾಖಲೆ ಬರೆದಿದ್ದರು. ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥದ ವಿಚಾರದಲ್ಲಿ ನ್ಯಾ. ನಾಗಪ್ರಸನ್ನ ಅವರು ಅತ್ಯುತ್ತಮ ಸರಾಸರಿ ಹೊಂದಿದ್ದಾರೆ.

ಕೋರ್ಟ್‌ ಹಾಲ್‌ 19ರ ಪೀಠದಲ್ಲಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿಯಲ್ಲಿ ಅಂದರೆ; ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ತಡೆಗಟ್ಟಲು ಅಥವಾ ರಕ್ಷಣೆ ಪಡೆಯಲು ಅಗತ್ಯವಿರುವಂತಹ ಆದೇಶಗಳನ್ನು ಮಾಡುವ ಸಂಬಂಧ ಸಲ್ಲಿಸಲಾಗಿರುವ ಕ್ರಿಮಿನಲ್‌ ಅರ್ಜಿಗಳು ಮತ್ತು ಸಾಮಾನ್ಯವಾದ ವಿವಿಧ ಉಳಿಕೆ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. 

Also Read
ಒಂದೇ ದಿನದಲ್ಲಿ 608 ಅರ್ಜಿಗಳನ್ನು ಇತ್ಯರ್ಥಪಡಿಸಿ ಹೊಸ ದಾಖಲೆ ಬರೆದ ನ್ಯಾಯಮೂರ್ತಿ ನಾಗಪ್ರಸನ್ನ

2024ರ ಏಪ್ರಿಲ್‌ 22ರಂದು 608 ಅರ್ಜಿಗಳನ್ನು ನ್ಯಾ. ನಾಗಪ್ರಸನ್ನ ಅವರು ಇತ್ಯರ್ಥಪಡಿಸಿದ್ದರು. 2023ರ ಜೂನ್‌ 12ರ ವಿಚಾರಣೆಯಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಭರ್ತಿ 522 ಪ್ರಕರಣಗಳನ್ನು ವಿಚಾರಣೆ ನಡೆಸಿದ್ದರು. ಅದಕ್ಕೂ ಕೆಲವು ತಿಂಗಳ ಹಿಂದೆ ಇದೇ ನ್ಯಾಯಮೂರ್ತಿಗಳ ಮುಂದೆ 480ಕ್ಕೂ ಅಧಿಕ ಪ್ರಕರಣಗಳನ್ನು ಪಟ್ಟಿ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರಕರಣಗಳನ್ನು ಅಂದು ನ್ಯಾ. ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದರು.

ನ್ಯಾ. ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.

Kannada Bar & Bench
kannada.barandbench.com