ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಪ್ರಭುಲಿಂಗ ನಾವದಗಿ, ಎಎಜಿಗಳಾದ ಧ್ಯಾನ್‌ ಚಿನ್ನಪ್ಪ, ಅರುಣ ಶ್ಯಾಮ್ ರಾಜೀನಾಮೆ

ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ವೇಳೆ 2019ರ ಜುಲೈನಲ್ಲಿ ನಾವದಗಿ ಅವರನ್ನು ಅಡ್ವೊಕೇಟ್‌ ಜನರಲ್‌ ಆಗಿ ನೇಮಿಸಲಾಗಿತ್ತು. ಆನಂತರ ಬೊಮ್ಮಾಯಿ ಅವರ ಸರ್ಕಾರದಲ್ಲೂ ನಾವದಗಿ ಅವರು ಮುಂದುವರಿದಿದ್ದರು.
Advocate General of Karnataka, Senior Advocate Prabhuling K Navadgi
Advocate General of Karnataka, Senior Advocate Prabhuling K Navadgi

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸೋಲನುಭವಿಸಿದ ಬೆನ್ನಿಗೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಾಗಿದ್ದ ಧ್ಯಾನ್‌ ಚಿನ್ನಪ್ಪ, ಅರುಣ ಶ್ಯಾಮ್‌ ಅವರು ಭಾನುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ವೇಳೆ 2019ರ ಜುಲೈನಲ್ಲಿ ನಾವದಗಿ ಅವರನ್ನು ಅಡ್ವೊಕೇಟ್‌ ಜನರಲ್‌ ಆಗಿ ನೇಮಿಸಲಾಗಿತ್ತು. ಆನಂತರ ಬೊಮ್ಮಾಯಿ ಅವರ ಸರ್ಕಾರದಲ್ಲೂ ನಾವದಗಿ ಅವರು ಮುಂದುವರಿದಿದ್ದರು.

ಹಿಜಾಬ್‌, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಜಾತಿಯಾಧಾರಿತ ನಿಗಮ ಮಂಡಳಿಗಳ ಸೃಷ್ಟಿ, ಲೋಕಾಯುಕ್ತದಿಂದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರತ್ಯೇಕಗೊಳಿಸುವಿಕೆ, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಹೀಗೆ ಹಲವು ಪ್ರಮುಖ ಪ್ರಕರಣಗಳಲ್ಲಿ ತಮ್ಮ ಅವಧಿಯಲ್ಲಿ ನಾವದಗಿ ಅವರು ಸರ್ಕಾರದ ಪರ ಬಲವಾಗಿ ವಾದ ಮಂಡಿಸಿದ್ದರು.

Also Read
ಆಡಳಿತ ಪಕ್ಷ ಬದಲಾದರೆ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅಗತ್ಯವಿಲ್ಲ: ಕರ್ನಾಟಕ ಎಜಿ ಪ್ರಭುಲಿಂಗ ನಾವದಗಿ

ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಿಂದ ನಾವದಗಿ ಅವರು ಪದವಿ ಪಡೆದಿದ್ದರು. ಐದು ವರ್ಷಗಳ ಪದವಿಯಲ್ಲಿ ನಾವದಗಿ ಅವರು ಪ್ರಥಮ ಸ್ಥಾನಗಳಿಸಿದ್ದರು. ಪ್ರಭುಲಿಂಗ ನಾವದಗಿ ಅವರು ನಿವೃತ್ತ ನ್ಯಾಯಾಧೀಶರಾದ ಕೆ ಬಿ ನಾವದಗಿ ಅವರ ಪುತ್ರ. ನಿವೃತ್ತ ನ್ಯಾ. ಕೆ ಬಿ ನಾವದಗಿ ಅವರು 27 ವರ್ಷಗಳ ಕಾಲ ನ್ಯಾಯಾಂಗ ಸೇವೆ ಸಲ್ಲಿಸಿದ್ದಾರೆ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಯಡಿಯೂರಪ್ಪ ಸರ್ಕಾರ 2011ರಲ್ಲಿ ನಾವದಗಿ ಅವರನ್ನು ನೇಮಕ ಮಾಡಿತ್ತು. 2014ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಅವರಿಗೆ ಪದೋನ್ನತಿ ದೊರೆತಿತ್ತು. 2015ರಲ್ಲಿ ನಾವದಗಿ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕ ಮಾಡಲಾಗಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.
Kannada Bar & Bench
kannada.barandbench.com