ಸುಪ್ರೀಂ ಮಧ್ಯಪ್ರವೇಶ: ಸಂಗೀತಗಾರ ಡಾಗರ್‌ ಹೆಸರು ಪ್ರದರ್ಶಿಸಲು ಎ ಆರ್‌ ರೆಹಮಾನ್‌ ಸಮ್ಮತಿ

ಹಾಡಿನ ಸಾಹಿತ್ಯ ಭಿನ್ನವಾಗಿದ್ದರೂ ಅದರ ತಾಳ, ಲಯ ಹಾಗೂ ಸಂಗೀತ ರಚನೆಗಳು ಜ್ಯೂನಿಯರ್‌ ಡಾಗರ್‌ ಸಹೋದರರು ವಿಶ್ವಾದ್ಯಂತ ಪ್ರದರ್ಶಿಸಿದ್ದ ಶಿವಸ್ತುತಿಯನ್ನು ಹೋಲುತ್ತವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
AR Rahman and Supreme Court
AR Rahman and Supreme Court
Published on

ತಮಿಳಿನ ಪೊನ್ನಿಯಿನ್ ಸೆಲ್ವನ್ 2 ಚಿತ್ರದ 'ವೀರ ರಾಜ ವೀರ' ಹಾಡಿನ ದೃಶ್ಯಾವಳಿಗಳಲ್ಲಿ ದ್ರುಪದ್‌ ಹಿಂದೂಸ್ತಾನಿ ಸಂಗೀತದ ಗಾಯಕ ಉಸ್ತಾದ್‌ ಎಂ ಫೈಯಾಜುದ್ದೀನ್‌  ಡಾಗರ್ ಹಾಗೂ ಅವರ ಸಂಬಂಧಿ ಉಸ್ತಾದ್‌ ಫಯಾಸ್‌ ವಾಸಿಫುದ್ದೀನ್‌ ಡಾಗರ್‌  ಅವರ ಹೆಸರನ್ನು ಪ್ರದರ್ಶಿಸಲು ತಾವು ಸಮ್ಮತಿಸಿರುವುದಾಗಿ ಸಂಗೀತ ನಿರ್ದೇಶಕ ಎ ಆರ್‌ ರೆಹಮಾನ್‌ ಅವರು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದರು.

“Composition inspired from Dagarwani tradition Dhrupad, first recorded by Late Ustad M Faiyazuddin Dagar and his nephew.” ಎಂಬ ಸಾಲನ್ನು ಒಟಿಟಿ ಮತ್ತಿತರೆ ಆನ್‌ಲೈನ್ ವೇದಿಕೆಗಳಲ್ಲಿ ಹಾಡಿನ ಪ್ರಸರಣದ ವೇಳೆ ಸೌಜನ್ಯಪೂರ್ವಕವಾಗಿ ಪ್ರದರ್ಶಿಸಲಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

Also Read
'ವೀರ ರಾಜ ವೀರ' ಹಾಡಿನ ವಿವಾದ: ಉಸ್ತಾದ್‌ ಡಾಗರ್‌ ಹೆಸರು ಉಲ್ಲೇಖಿಸುವಂತೆ ಎ ಆರ್‌ ರೆಹಮಾನ್‌ಗೆ ಸುಪ್ರೀಂ ಸಲಹೆ

ಈ ವಿಚಾರವನ್ನು  ಸಿಜೆಐ ಸೂರ್ಯಕಾಂತ್‌ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪಿನ್‌ ಪಂಚೋಲಿ ಅವರಿದ್ದ ಪೀಠ ದಾಖಲಿಸಿಕೊಂಡಿತು. ಹೈಕೋರ್ಟ್‌ನಲ್ಲಿ ಡಾಗರ್ ಸಲ್ಲಿಸಿರುವ ದಾವೆ ಅಂತಿಮ ತೀರ್ಪು ಬರುವವರೆಗೆ ಈ ಪರಿಷ್ಕೃತ ಸಾಲನ್ನು 5 ವಾರಗಳೊಳಗೆ ಪ್ರದರ್ಶಿಸಲು ನಿರ್ದೇಶಿಸಿತು.

ರೆಹಮಾನ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ರೆಹಮಾನ್‌ ಅವರು ಈಗಾಗಲೇ ಡಾಗರ್‌ ಅವರನ್ನು ಮೊದಲ ಪ್ರಸ್ತುತಿಕಾರರು ಎಂದು ಒಪ್ಪಿರುವುದಾಗಿ ತಿಳಿಸಿದರು.

Also Read
'ವೀರ ರಾಜ ವೀರ' ಹಾಡಿನ ಹಕ್ಕುಸ್ವಾಮ್ಯ ಪ್ರಕರಣ: ಎ ಆರ್ ರಹಮಾನ್‌ಗೆ ದೆಹಲಿ ಹೈಕೋರ್ಟ್ ಪರಿಹಾರ

ಕೆಲವು ಮಾಧ್ಯಮ ವರದಿಗಳು ರಹಮಾನ್ ಪ್ರಕರಣದಲ್ಲಿ ಸೋತಿದ್ದಾರೆ ಎಂಬ ರೀತಿಯಲ್ಲಿ ಪ್ರಕಟವಾಗಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದಲ್ಲದೆ, ಏಕಸದಸ್ಯ ಪೀಠದ ಆದೇಶದ ಪಾಲನೆಗಾಗಿ ರೆಹಮಾನ್ ಠೇವಣಿ ಇಟ್ಟಿರುವ ₹2 ಕೋಟಿ ಮೊತ್ತವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಸುಪರ್ದಿಯಲ್ಲೇ ಇರಿಸಲು ಸೂಚಿಸಲಾಯಿತು. ಪ್ರಕರಣದ ಅರ್ಹತೆ ವಿಚಾರವಾಗಿ ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಎಲ್ಲಾ ವಿಚಾರಗಳು ಪ್ರಶ್ನಿಸಲು ಮಕ್ತವಾಗಿವೆ ಎಂದು ಅದು ಸ್ಪಷ್ಟಪಡಿಸಿತು. ತನ್ನ ಪ್ರಸ್ತುತ ವಿಚಾರಣೆಯಿಂದ ಪ್ರಭಾವಿತವಾಗದೆ ಹೈಕೋರ್ಟ್‌ ವಿಚಾರನೆ ನಡೆಸಬೇಕು ಎಂದು ಪೀಠ ಹೇಳಿತು.

Kannada Bar & Bench
kannada.barandbench.com