ಎರಡು ಸಭೆಗಳ ಬಳಿಕ ನ್ಯಾ. ವರ್ಮಾರನ್ನು ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ ಕೊಲಿಜಿಯಂ

ಮಾರ್ಚ್‌ 20 ಮತ್ತು ಮಾರ್ಚ್‌ 24ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ನ್ಯಾ. ಯಶವಂತ್‌ ವರ್ಮಾ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ.
Justice Yashwant Varma
Justice Yashwant Varma
Published on

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಮರಳಿ ಅವರ ಮಾತೃ ಸಂಸ್ಥೆಯಾದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧರಿಸಿದೆ.

ನ್ಯಾ.ವರ್ಮಾ ಅವರ ಮನೆಯಲ್ಲಿ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾದ ಬೆನ್ನಿಗೇ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ. ಮಾರ್ಚ್‌ 20 ಮತ್ತು ಮಾರ್ಚ್‌ 24ರಂದು ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವರ್ಮಾ ಅವರ ನಿವಾಸದ ಔಟ್‌ಹೌಸ್‌ನಲ್ಲಿ ಮಾರ್ಚ್‌ 14ರಂದು ಸಂಭವಿಸಿದ್ದ ಅಗ್ನಿ ಆಕಸ್ಮಿಕದ ವೇಳೆ ಬೆಂಕಿ ನಂದಿಸುವಾಗ ಅಗ್ನಿಶಾಮಕ ದಳದ ಸಿಬ್ಬಂದಿಗೆ ನಗದು ಪತ್ತೆಯಾಗಿತ್ತು. ಅರೆಬೆಂದ ನೋಟಿನ ಕಂತೆಗಳ ವಿಡಿಯೋವನ್ನು ದೆಹಲಿ ಪೊಲೀಸ್‌ ಆಯುಕ್ತರು ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೊತೆ ಹಂಚಿಕೊಂಡಿದ್ದರು.

Also Read
ಅಪಾರ ಪ್ರಮಾಣದ ನಗದು ಪತ್ತೆ: ನ್ಯಾ. ಯಶವಂತ್‌ ವರ್ಮಾ ವಿರುದ್ಧ ಆಂತರಿಕ ತನಿಖೆಗೆ ಮುಂದಾದ ಸುಪ್ರೀಂ ಕೋರ್ಟ್‌

ಈ ಸಂದರ್ಭದಲ್ಲಿ ನ್ಯಾ. ವರ್ಮಾ ಅವರು ಮನೆಯಲ್ಲಿರಲಿಲ್ಲ. ದಂಪತಿ ಮಧ್ಯಪ್ರದೇಶ ಪ್ರವಾಸದಲ್ಲಿದ್ದರು. ಬೆಂಕಿ ಹೊತ್ತಿಕೊಂಡಿದ್ದ ಸಂದರ್ಭದಲ್ಲಿ ಮನೆಯಲ್ಲಿ ನ್ಯಾ. ವರ್ಮಾ ಅವರ ಪುತ್ರಿ ಮತ್ತು ವರ್ಮಾ ಅವರ ತಾಯಿ ಮಾತ್ರ ಇದ್ದರು.

ಮಾರ್ಚ್‌ 21ರಂದು ಸಿಜೆಐ ಸಂಜೀವ್‌ ಖನ್ನಾ ಅವರು ತನಿಖೆಗಾಗಿ ಮೂವರು ಸದಸ್ಯರ ಆಂತರಿಕ ಸಮಿತಿ ರಚಿಸಿದ್ದರು. ಈ ಮಧ್ಯೆ, ನ್ಯಾ. ವರ್ಮಾ ಹೇಳಿಕೆಯನ್ನು ಒಳಗೊಂಡು ದೆಹಲಿ ಮುಖ್ಯ ನ್ಯಾಯಮೂರ್ತಿ ನೀಡಿದ ವರದಿಯನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿತ್ತು.

Kannada Bar & Bench
kannada.barandbench.com