ವಿಮಾನದಲ್ಲಿ ಮೂತ್ರ ವಿಸರ್ಜನೆ: ಅಶಿಸ್ತಿನ ಯಾನಿಗಳ ನಿಯಂತ್ರಣಕ್ಕೆ ಸೃಜನಾತ್ಮಕ ಮಾರ್ಗ ಕಂಡುಕೊಳ್ಳಲು ಸುಪ್ರೀಂ ಸಲಹೆ

ಇತ್ತೀಚೆಗೆ ತಾನು ಪ್ರಯಾಣಿಸಿದ ವಿಮಾನವೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ಇಬ್ಬರು ಪ್ರಯಾಣಿಕರ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ವಿಶ್ವನಾಥನ್ ಅವರು ನೆನೆದರು.
Air India
Air India
Published on

ಅಶಿಸ್ತಿನ ವಿಮಾನ ಪ್ರಯಾಣಿಕರನ್ನು ನಿಭಾಯಿಸುವುದಕ್ಕಾಗಿ ಸೃಜನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಸಲಹೆ ನೀಡಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಮಾರ್ಪಡಿಸುವುದನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಅದು ಸೂಚಿಸಿದೆ  (ಹೇಮಾ ರಾಜಾರಾಮನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಏರ್ ಇಂಡಿಯಾ ವಿಮಾನದಲ್ಲಿ 2022ರಲ್ಲಿ ವ್ಯಕ್ತಿಯೊಬ್ಬ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ 72 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ಸಲಹೆ ನೀಡಿತು.

Also Read
ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಮೇಲ್ಮನವಿ ಸಮಿತಿ ರಚಿಸುವಂತೆ ಡಿಜಿಸಿಎಗೆ ಸೂಚಿಸಿದ ದೆಹಲಿ ಹೈಕೋರ್ಟ್

ಇತ್ತೀಚೆಗೆ ತಾನು ಹಾಗೂ ನ್ಯಾ. ಸೂರ್ಯಕಾಂತ್‌ ಅವರು ಪ್ರಯಾಣಿಸಿದ ವಿಮಾನವೊಂದರಲ್ಲಿ ಕುಡುಕರು ಪ್ರಯಾಣಿಸುತ್ತಿದ್ದುದನ್ನು ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ವಿಶ್ವನಾಥನ್ ಅವರು ನೆನೆದರು.

 ಎಂಟು ವಾರಗಳ ಕಾಲ ಪ್ರಕರಣವನ್ನು ಮುಂದೂಡಿದ ನ್ಯಾಯಾಲಯ ಅಶಿಸ್ತಿನ ಪ್ರಯಾಣಿಕರ ಮೇಲಿನ ಮಾರ್ಗಸೂಚಿಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಲು ಮತ್ತು ಸೂಕ್ತವಾಗಿ ಮಾರ್ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ತಿಳಿಸಿತು.

Kannada Bar & Bench
kannada.barandbench.com