ಅಪಾಯಕಾರಿ ಸಂಖ್ಯೆಯಲ್ಲಿ ಸಂಸತ್, ವಿಧಾನಸಭೆ ಪ್ರವೇಶಿಸುತ್ತಿರುವ ಅಪರಾಧಿಗಳು: ಅಲಾಹಾಬಾದ್ ಹೈಕೋರ್ಟ್

ಅಪರಾಧಿಗಳನ್ನು ರಾಜಕೀಯದಿಂದ ದೂರ ಇಡಬೇಕು, ಕ್ರಿಮಿನಲ್ ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಅಪವಿತ್ರ ಮೈತ್ರಿ ಮುರಿಯಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸಂಸತ್ತು ಮತ್ತು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ತಿಳಿಸಿದೆ.
BSP MP Atul Rai
BSP MP Atul Rai Facebook

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಎದುರು ಅತ್ಯಾಚಾರ ಸಂತ್ರಸ್ತೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌ಪಿ ಸಂಸದ ಅತುಲ್ ರಾಯ್‌ಗೆ ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಜಾಮೀನು ನಿರಾಕರಿಸಿದೆ [ಅತುಲ್‌ ಕುಮಾರ್‌ ಸಿಂಗ್‌ ಅಲಿಯಾಸ್‌ ಅತುಲ್‌ ರಾಯ್‌ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅಪಾಯಕಾರಿ ಸಂಖ್ಯೆಯಲ್ಲಿ ಅಪರಾಧಿಗಳು ಸಂಸತ್‌ ಹಾಗೂ ವಿಧಾನಸಭೆ ಪ್ರವೇಶಿಸುತ್ತಿರುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದು ಜಾಮೀನು ಅರ್ಜಿಯನ್ನು ನಿರಾಕರಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದರು.

Also Read
ಪರಮ್ ಬೀರ್ ಸಿಂಗ್ 'ಘೋಷಿತ ಅಪರಾಧಿ' ಎಂದು ಪ್ರಕಟಿಸಲು ಕೋರಿ ಮುಂಬೈ ನ್ಯಾಯಾಲಯದ ಮೊರೆ ಹೋದ ಪೊಲೀಸರು

ಅಪರಾಧಿಗಳನ್ನು ರಾಜಕೀಯದಿಂದ ದೂರ ಇಡಬೇಕು, ಕ್ರಿಮಿನಲ್‌ ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಅಪವಿತ್ರ ಮೈತ್ರಿ ಮುರಿಯಲು ಸಂಸತ್ತು ಮತ್ತು ಚುನಾವಣಾ ಆಯೋಗ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಏಕಸದಸ್ಯ ಪೀಠ ತಿಳಿಸಿದೆ.

ರಾಯ್‌ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ 24 ವರ್ಷದ ಯುವತಿ ಮತ್ತು ಆಕೆಯ ಸ್ನೇಹಿತ ಬೆಂಕಿ ಹಚ್ಚಿಕೊಂಡಿದ್ದರು. ಕೆಲ ದಿನಗಳ ನಂತ ಆಕೆ ಸಾವನ್ನಪ್ಪಿದ್ದರು. ರಾಯ್‌ ವಿರುದ್ಧ ಈವರೆಗೆ 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ಅಪಹರಣ, ಕೊಲೆ, ಅತ್ಯಾಚಾರ ಇತರೆ ಅಪರಾಧಗಳು ಇದರಲ್ಲಿ ಸೇರಿವೆ ಎಂದು ನ್ಯಾಯಾಲಯ ಗಮನಿಸಿದೆ.

Related Stories

No stories found.
Kannada Bar & Bench
kannada.barandbench.com