ವಂಚನೆ ಪ್ರಕರಣ: ತನ್ನ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದರ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋದ ಅಲಿಬಾಬಾ.ಕಾಂ

ಪ್ರತಿವಾದಿ ಸಂಸ್ಥೆಯೊಂದಿಗೆ ಆಲಿಬಾಬಾ ಯಾವುದೇ ಸಂಬಂಧ ಹೊಂದಿರದಿದ್ದರೂ ಪೊಲೀಸರು ಬೇಕಾಬಿಟ್ಟಿಯಾಗಿ ತನ್ನ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಚೀನಾ ಮೂಲದ ಆನ್‌ಲೈನ್‌ ಸಗಟು ಮಾರುಕಟ್ಟೆ ದೈತ್ಯ ವಾದಿಸಿದೆ.
alibaba.com with Bombay High Court

alibaba.com with Bombay High Court

ಹಾಂಕಾಂಗ್‌ ಶಾಂಘೈ ಬ್ಯಾಂಕಿಂಗ್‌ ಕಾರ್ಪೊರೇಷನ್‌ನಲ್ಲಿರುವ (ಎಚ್‌ಎಸ್‌ಬಿಸಿ) ತನ್ನ ಖಾತೆಯನ್ನು ಮಹಾರಾಷ್ಟ್ರ ಪೊಲೀಸರು ಸ್ಥಗಿತಗೊಳಿಸುವುದನ್ನು ಪ್ರಶ್ನಿಸಿ ಆನ್‌ಲೈನ್‌ ಸಗಟು ಮಾರುಕಟ್ಟೆ ದೈತ್ಯ ಆಲಿಬಾಬಾ ಡಾಟ್‌ ಕಾಂ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದೆ [ಆಲಿಬಾಬಾ.ಕಾಂ ಇ-ಕಾಮರ್ಸ್‌ ಇಂಡಿಯಾ ಪ್ರೈ ಲಿ., ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ತನಿಖೆಯ ನೆಪದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 91ರ ಅಡಿ ತನ್ನ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ ಪ್ರತಿವಾದಿ ಸಂಸ್ಥೆ ಅಲಿಬಾಬಾ ಕ್ಲೌಡ್‌ ಇಂಡಿಯಾ ಎಲ್‌ಎಲ್‌ಪಿಯೊಂದಿಗೆ ತಾನು ಯಾವುದೇ ಸಂಬಂಧ ಹೊಂದಿರದಿದ್ದರೂ ಪೊಲೀಸರು ಯಾವುದೇ ತನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಅಲಿಬಾಬಾ.ಕಾಂ ಹೇಳಿದೆ. ಸಿರಿಲ್‌ ಅಮರ್‌ಚಂದ್‌ ಮಂಗಲ್‌ದಾಸ್‌ ಕಾನೂನು ಸಂಸ್ಥೆಯ ಮೂಲಕ ಅದು ಮನವಿ ಸಲ್ಲಿಸಿದೆ.

Also Read
ಅಮೆಜಾನ್‌ ಮತ್ತು ಫ್ಯೂಚರ್‌ ನಡುವಿನ ಕಾನೂನು ಹೋರಾಟದಲ್ಲಿ ಯಾರೂ ಗೆಲ್ಲುತ್ತಿಲ್ಲ: ಸುಪ್ರೀಂ ಮುಂದೆ ಸಾಳ್ವೆ ಅಭಿಪ್ರಾಯ

ಅಲಿಬಾಬಾ.ಕಾಂನ ವಾಣಿಜ್ಯ ಅಂಗಸಂಸ್ಥೆಯಾದ ಅಲಿಬಾಬಾ ಕ್ರೌಡ್‌ ಇಂಡಿಯಾ ಎಲ್‌ಎಲ್‌ಪಿ ವ್ಯಕ್ತಿಗಳನ್ನು ವಂಚಿಸುವುದಕ್ಕಾಗಿ ರೂಪಿಸಿದ್ದ ಮೊಬೈಲ್‌ ಅಪ್ಲಿಕೇಷನ್‌ನ ಡೌನ್‌ಲೋಡ್‌ ಕೊಂಡಿಯನ್ನು ಹೋಸ್ಟ್‌ ಮಾಡುತ್ತಿತ್ತು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಿದ್ದ ಪೊಲೀಸರು ಅಲಿಬಾಬಾ.ಕಾಂನ ಬಾಂಕ್‌ ಖಾತೆಯನ್ನು ಸ್ಥಗಿತಗೊಳಿಸುವಂತೆ ಎಚ್‌ಎಸ್‌ಬಿಸಿಗೆ ನೋಟಿಸ್‌ ನೋಡಿದ್ದರು.

ಆಕರ್ಷಕ ರಿಟರ್ನ್‌ ದೊರೆಯುತ್ತದೆ ಎಂದು ಮೊಬೈಲ್‌ ಅಪ್ಲಿಕೇಷನ್‌ ಹೇಳಿದ್ದರಿಂದ ತಾವು ₹ 65,000 ಪಾವತಿಸಿದ್ದಾಗಿ ಹಣಕಳೆದುಕೊಂಡ ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ ಈ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

Related Stories

No stories found.
Kannada Bar & Bench
kannada.barandbench.com