ಜನವರಿಯಿಂದ ಸರ್ಕಾರದ ಎಲ್ಲಾ ಪ್ರಕರಣಗಳು ಇ- ಫೈಲಿಂಗ್ ಮೂಲಕ ದಾಖಲಾಗಲಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಇ- ಸಮಿತಿ ಸೂಚನೆ

ಆ ಬಳಿಕ ಸರ್ಕಾರ ಭೌತಿಕವಾಗಿ ಪ್ರಕರಣ ದಾಖಲಿಸಿದರೆ ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಇ- ಸಮಿತಿ ಅಧ್ಯಕ್ಷ ನ್ಯಾ. ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಜನವರಿಯಿಂದ ಸರ್ಕಾರದ ಎಲ್ಲಾ ಪ್ರಕರಣಗಳು ಇ- ಫೈಲಿಂಗ್ ಮೂಲಕ ದಾಖಲಾಗಲಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಇ- ಸಮಿತಿ ಸೂಚನೆ

ಜನವರಿ 1, 2022 ರಿಂದ ಹೈಕೋರ್ಟ್‌ಗಳಲ್ಲಿ ಸರ್ಕಾರ ಸಲ್ಲಿಸುವ ಎಲ್ಲಾ ಅರ್ಜಿ/ ಪ್ರಕರಣಗಳು ಇ-ಫೈಲಿಂಗ್‌ ಮೂಲಕ ಮಾತ್ರವೇ ಇರುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಇ- ಸಮಿತಿ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

ಆ ಬಳಿಕ ಸರ್ಕಾರ ಭೌತಿಕವಾಗಿ ಪ್ರಕರಣ ದಾಖಲಿಸಿದರೆ ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಇ- ಸಮಿತಿ ಅಧ್ಯಕ್ಷ ನ್ಯಾ. ಡಿ ವೈ ಚಂದ್ರಚೂಡ್‌ ಹೈಕೋರ್ಟ್‌ಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಆದಾಯ, ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ವ್ಯಾಜ್ಯಕ್ಕೆ ಸಂಬಂಧಿಸಿದ ಕೆಲ ವರ್ಗಗಳಲ್ಲಿ ಮತ್ತು ಸಂಬಂಧಪಟ್ಟ ಹೈಕೋರ್ಟ್ ಸೂಕ್ತವೆಂದು ಪರಿಗಣಿಸುವ ಯಾವುದೇ ವರ್ಗಗಳಲ್ಲಿ ಎಲ್ಲಾ ಪಕ್ಷಕಾರರಿಗೆ ಜನವರಿ 1ರಿಂದ ಇ- ಫೈಲಿಂಗ್‌ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯವಾಗಲಿದೆ.

Also Read
ತಮ್ಮ ಆಯ್ಕೆಯ ವಿಡಿಯೋ ಕಾನ್ಫರೆನ್ಸ್‌ ವೇದಿಕೆ ಆರಿಸಿಕೊಳ್ಳಲು ಹೈಕೋರ್ಟ್‌ಗಳಿಗೆ ಅನುಮತಿಸಿದ ಸುಪ್ರೀಂ ಕೋರ್ಟ್‌ ಇ-ಸಮಿತಿ

ಅಧೀನ ನ್ಯಾಯಾಲಯಗಳ ತೀರ್ಪು/ಆದೇಶ ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳು, ಮೇಲ್ಮನವಿಗಳು ಮತ್ತು ಮರುಪರಿಶೀಲನಾ ಅರ್ಜಿಗಳು ಕೂಡ ಜನವರಿ 1, 2022 ರಿಂದ ಇ ಫೈಲಿಂಗ್‌ ವಿಧಾನದಲ್ಲಿಯೇ ಕಡ್ಡಾಯವಾಗಿ ಸಲ್ಲಿಕೆಯಾಗಬೇಕಿದೆ.

ಮೇಲ್ಮನವಿ ಅಥವಾ ಮರುಪರಿಶೀಲನಾ ಅರ್ಜಿಯ ಇ- ಫೈಲಿಂಗ್ ಸಂದರ್ಭದಲ್ಲಿ, ವಿಚಾರಣಾ ನ್ಯಾಯಾಲಯದ ಅಗತ್ಯ ದಾಖಲೆಯನ್ನು ಮೇಲ್ಮನವಿ/ ಮರುಪರಿಶೀಲನಾ ನ್ಯಾಯಾಲಯದೊಂದಿಗೆ ಡಿಜಿಟಲ್ ಲಿಂಕ್ ಮಾಡಬಹುದು ಎಂದು ಇ-ಸಮಿತಿಯ ಪತ್ರ ತಿಳಿಸಿದೆ.

ನೆಗೋಶಿಯಬಲ್‌ ಇನ್ಸ್ಟ್ರುಮೆಂಟ್ಸ್ ಕಾಯಿದೆಯ ಸೆಕ್ಷನ್ 138ರ ಅಡಿಯಲ್ಲಿ ದಾಖಲಾಗುವ ಹಣ ಮರುಪಾವತಿ ದಾವೆ, ದೂರುಗಳು, ಜೀವನಾಂಶ ಅರ್ಜಿಗಳು, ಪರಸ್ಪರ ಸಮ್ಮತಿಯ ವಿಚ್ಛೇದನ ದೂರುಗಳು ಹಾಗೂ ಜಾಮೀನು ಅರ್ಜಿಗಳನ್ನು ಇ- ಫೈಲಿಂಗ್‌ಗೆ ಪರಿಗಣಿಸಬಹುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com