
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಕೋಶ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಏಕರೂಪ ನಾಗರಿಕ ಸಂಹಿತೆ: ಸಾಂವಿಧಾನಿಕ ಅವಶ್ಯಕತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ನ್ಯಾಯಾಲಯದ ಆವರಣದಲ್ಲಿರುವ ಗ್ರಂಥಾಲಯ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು. ಹೈಕೋರ್ಟ್‌ನ ಮತ್ತೊಬ್ಬ ಹಾಲಿ ನ್ಯಾಯಮೂರ್ತಿ ದಿನೇಶ್ ಪಾಠಕ್ ವಿಧ್ಯುಕ್ತವಾಗಿ ದೀಪ ಬೆಳಗುವ ಮೂಲಕ ಅಧಿವೇಶನ ಉದ್ಘಾಟಿಸಿದ್ದಾರೆ ಎಂದು ವಿಎಚ್‌ಪಿ ಕಾನೂನು ಘಟಕದ ಕಾರ್ಯಕ್ರಮ ಪಟ್ಟಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ವಕ್ಫ್ ಮಂಡಳಿ ಕಾಯಿದೆ, ಮತಾಂತರಕ್ಕೆ ಕಾರಣಗಳು ಮತ್ತು ಸಂಭಾವ್ಯ ಪರಿಹಾರಗಳು ಎಂಬಂತಹ ಚರ್ಚೆಗಳನ್ನು ಒಳಗೊಂಡಿತ್ತು.
ವಿಎಚ್‌ಪಿ ಜಾಲತಾಣದಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ , ಹಿಂದೂ ಸಮುದಾಯವನ್ನು ಒಗ್ಗೂಡಿಸಲು, ಹಿಂದೂ ಧರ್ಮವನ್ನು ರಕ್ಷಿಸಲು ಮತ್ತು ಹಿಂದೂ ಸಮಾಜಕ್ಕೆ ಸೇವೆ ಸಲ್ಲಿಸಲು ಪರಿಷತ್ 1964ರಲ್ಲಿ ಸ್ಥಾಪನೆಯಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮವೊಂರಲ್ಲಿ ಹೈಕೋ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಭೆಯ ಚಿತ್ರಗಳನ್ನು , ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು.
ದೆಹಲಿ ಹೈಕೋರ್ಟ್‌ನ ಇಬ್ಬರು ಹಾಲಿ ನ್ಯಾಯಮೂರ್ತಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೆಸರು ತಿಳಿಸಲು ಬಯಸದ ವಿಎಚ್‌ಪಿ ಪದಾಧಿಕಾರಿಯೊಬ್ಬರು ʼಬಾರ್ ಅಂಡ್ ಬೆಂಚ್ ವಿವರಿಸಿದ್ದರು. ಆದರೆ ಈ ಸಂಬಂಧ ವಿಎಚ್‌ಪಿ ಅಧ್ಯಕ್ಷರನ್ನು ಅಧಿಕೃತವಾಗಿ ಸಂಪರ್ಕಿಸಿದಾಗ, ನ್ಯಾಯಮೂರ್ತಿಗಳ ಉಪಸ್ಥಿತಿಯನ್ನು ಅವರು ನಿರಾಕರಿಸಿದ್ದರು.
ನ್ಯಾ. ಶೇಖರ್ ಕುಮಾರ್ ಯಾದವ್ ಅವರು 2021 ರಲ್ಲಿ ಗೋವುಗಳು ಮತ್ತು ಭಗವಾನ್ ರಾಮನ ಕುರಿತು ನೀಡಿದ್ದ ಹೇಳಿಕೆಗಳಿಂದಾಗಿ ಗಮನ ಸೆಳೆದಿದ್ದರು.
ಉತ್ತರ ಪ್ರದೇಶದಲ್ಲಿ ಗೋಹತ್ಯೆ ತಡೆ ಕಾಯಿದೆಯಡಿ ಆರೋಪಿಗೆ ಜಾಮೀನು ನಿರಾಕರಿಸಿದ್ದ ಅವರು, ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಅದನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಬೇಕು ಎಂದಿದ್ದರು.
ಅದೇ ವರ್ಷ ಹೊರಡಿಸಿದ ಮತ್ತೊಂದು ಆದೇಶದಲ್ಲಿ ಅವರು ಶ್ರೀರಾಮ , ಶ್ರೀಕೃಷ್ಣ , ರಾಮಾಯಣ , ಭಗವದ್ಗೀತೆ ಹಾಗೂ ಅವುಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರು ದೇಶದ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು ಸಂಸತ್ತು ಕಾನೂನು ಜಾರಿಗೆ ತಂದು ಅವರಿಗೆ ರಾಷ್ಟ್ರೀಯ ಗೌರವ ಸಲ್ಲಿಸಬೇಕು ಎಂದಿದ್ದರು.