ಅಮೆಜಾನ್- ಫ್ಯೂಚರ್ ಪ್ರಕರಣ: ಪರಿಸಮಾಪ್ತಿ ಅರ್ಜಿ ಆಲಿಸುವಂತೆ ಕೋರಿದ್ದ ಫ್ಯೂಚರ್ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಎರಡೂ ಕಂಪನಿಗಳ ನಡುವಿನ 2019ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್ ವಿರುದ್ಧ ಅಮೆಜಾನ್ ಸಲ್ಲಿಸಿದ್ದ ಅರ್ಜಿಯನ್ನು ಸಿಂಗಪುರದ ಮಧ್ಯಸ್ಥಿಕೆ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ.
ಅಮೆಜಾನ್- ಫ್ಯೂಚರ್ ಪ್ರಕರಣ: ಪರಿಸಮಾಪ್ತಿ ಅರ್ಜಿ ಆಲಿಸುವಂತೆ ಕೋರಿದ್ದ ಫ್ಯೂಚರ್ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ತಮ್ಮ ಪರಿಸಮಾಪ್ತಿ ಅರ್ಜಿಯನ್ನು ಆಲಿಸಲು ಸಿಂಗಪುರ ನ್ಯಾಯಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿ ಫ್ಯೂಚರ್‌ ಗ್ರೂಪ್‌ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ [ಫ್ಯೂಚರ್ ರಿಟೇಲ್ ಲಿಮಿಟೆಡ್ ಮತ್ತು ಎನ್‌ವಿ ಇನ್ವೆಸ್ಟ್‌ಮೆಂಟ್‌ ಹೋಲ್ಡಿಂಗ್‌ ಎಲ್‌ಎಲ್‌ಸಿ ಮತ್ತಿತರರ ನಡುವಣ ಪ್ರಕರಣ].

ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ಮತ್ತು ಫ್ಯೂಚರ್ ಕೂಪನ್ಸ್ ಲಿಮಿಟೆಡ್ (ಎಫ್‌ಸಿಆರ್‌ಎಲ್) ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆಯ ನಂತರ ಮಂಗಳವಾರ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಆದೇಶ ಪ್ರಕಟಿಸಿದರು.

Also Read
ಅಮೆಜಾನ್‌ಗೆ ₹202 ಕೋಟಿ ದಂಡ ವಿಧಿಸಿದ ಸಿಸಿಐ; ಅಮೆಜಾನ್‌-ಫ್ಯೂಚರ್‌ ಒಪ್ಪಂದ ತಾತ್ಕಾಲಿಕವಾಗಿ ಅಮಾನತು

ಎರಡೂ ಕಂಪನಿಗಳ ನಡುವಿನ 2019ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್‌ ವಿರುದ್ಧ ಅಮೆಜಾನ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಂಗಪುರದ ಮಧ್ಯಸ್ಥಿಕೆ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ಗೆ ಫ್ಯೂಚರ್ ರೀಟೇಲ್‌ನ ಆಸ್ತಿ ಮಾರಾಟ ತಡೆಹಿಡಿಯುವ ಮಧ್ಯಂತರ ಆದೇಶವನ್ನು ನ್ಯಾಯಮಂಡಳಿ ಜಾರಿಗೊಳಿಸಿತ್ತು.

ಅಮೆಜಾನ್ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ (CCI) ನೀಡಿದ ತೀರ್ಪಿನ ದೃಷ್ಟಿಯಿಂದ ನ್ಯಾಯಮಂಡಳಿಯಲ್ಲಿ ನಡೆಯಲಿರುವ ವಿಚಾರಣೆ ಕಾನೂನುಬಾಹಿರ ಎಂದು ವಾದಿಸಿ ಫ್ಯೂಚರ್ ರಿಟೇಲ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸ್ಪರ್ಧಾತ್ಮಕ ಕಾಯಿದೆ- 2002ರ ಸೆಕ್ಷನ್ 6(2) ಅಡಿಯಲ್ಲಿ ಅಗತ್ಯವಿರುವಂತೆ, ಅಮೆಜಾನ್ ಭವಿಷ್ಯದಲ್ಲಿ ಶೇ 49ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಕೆಲವು ನಿರ್ಣಾಯಕ ವಿವರಗಳ ಬಗ್ಗೆ ತಿಳಿಸಲು ವಿಫಲವಾಗಿದೆ ಎಂದು ತಿಳಿಸಿ ಒಪ್ಪಂದದ ವಿಲೇವಾರಿಯನ್ನು ಸಿಸಿಐ ಅಮಾನತಿನಲ್ಲಿರಿಸಿತ್ತು. ಹಾಗಾಗಿ, ಅಮೆಜಾನ್‌ಗೆ ₹202 ಕೋಟಿ ದಂಡವನ್ನೂ ಅದು ವಿಧಿಸಿತ್ತು.

ಮಧ್ಯಸ್ಥಿಕೆ ನ್ಯಾಯಮಂಡಳಿಯು ಫ್ಯೂಚರ್‌ ಗ್ರೂಪ್‌ನ ವಾದವನ್ನು ಅಂತಿಮ ವಿಚಾರಣೆಗೆ ಮುನ್ನ ಪರಿಗಣಿಸದಿರಲು ನಿರ್ಧರಿಸಿದೆ. ಇದರಿಂದ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಫ್ಯೂಚರ್‌ ಗ್ರೂಪ್‌ ನ್ಯಾಯಮಂಡಳಿಯು ಹಾನಿಯ ವೆಚ್ಚವನ್ನು ನಿರ್ಧರಿಸುವುದಕ್ಕೂ ಮುನ್ನ ಪರಿಸಮಾಪ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಅದಕ್ಕೆ ನಿರ್ದೇಶಿಸಬೇಕೆಂದು ಕೋರಿತ್ತು. ತಾನು ಪ್ರಕರಣದ ವಿಚಾರಣೆಯನ್ನು ಪರಿಸಮಾಪ್ತಿಗೊಳಿಸಲು ಕೋರುತ್ತಿಲ್ಲ, ಬದಲಿಗೆ ಪ್ರಕರಣದ ಪರಿಸಮಾಪ್ತಿ ಅರ್ಜಿಯ ವಿಚಾರಣೆಯನ್ನು ಹಾನಿಯ ವೆಚ್ಚ ನಿರ್ಧರಿಸುವುದಕ್ಕೂ ಮುನ್ನ ಆಲಿಸುವಂತೆ ಮಂಡಳಿಗೆ ನಿರ್ದೇಶಿಸಲು ಮಾತ್ರವೇ ಕೋರುತ್ತಿದ್ದೇನೆ ಎನ್ನುವುದು ಫ್ಯೂಚರ್‌ ವಾದವಾಗಿತ್ತು.

ಫ್ಯೂಚರ್ ಪರ ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ ಮತ್ತು ಹರೀಶ್‌ ಸಾಳ್ವೆ ಪ್ರತಿನಿಧಿಸಿದ್ದರು. ಅಮೆಜಾನ್‌ ಪರ ಗೋಪಾಲ್‌ ಸುಬ್ರಮಣಿಯಮ್‌ ಮತ್ತು ಅಮಿತ್‌ ಸಿಬಲ್‌ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com