ಫ್ಯೂಚರ್ ಜೊತೆಗಿನ ಒಪ್ಪಂದ ವಿವಾದ: ಸಿಸಿಐ ಆದೇಶ ಪ್ರಶ್ನಿಸಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಅಮೆಜಾನ್

ಫ್ಯೂಚರ್ ಜೊತೆಗಿನ ಒಪ್ಪಂದ ವಿವಾದ: ಸಿಸಿಐ ಆದೇಶ ಪ್ರಶ್ನಿಸಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಅಮೆಜಾನ್

ನಿರ್ಧಾರದ ವಿರುದ್ಧ ಎನ್‌ಸಿಎಲ್‌ಎಟಿಯಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ಮುಂದಿನ ವಾರ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.

ಫ್ಯೂಚರ್ ಗ್ರೂಪ್‌ನೊಂದಿಗೆ ತಾನು 2019ರಲ್ಲಿ ಮಾಡಿಕೊಂಡಿದ್ದ ಒಪ್ಪಂದ ಅಮಾನತುಗೊಳಿಸಿ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಹೊರಡಿಸಿದ ಆದೇಶದ ವಿರುದ್ಧ ಅಮೇರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್‌ ಡಾಟ್‌ ಕಾಂ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಮೊರೆ ಹೋಗಿದೆ. ಮೂಲಗಳ ಪ್ರಕಾರ ಮುಂದಿನ ವಾರ ಮೇಲ್ಮನವಿಯನ್ನು ಎನ್‌ಸಿಎಲ್‌ಎಟಿ ಆಲಿಸುವ ಸಾಧ್ಯತೆಗಳಿವೆ.

ಎರಡೂ ಕಂಪೆನಿಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆಜಾನ್‌ ಹೂಡಿದ್ದ ಪ್ರಕರಣವನ್ನು ಸಿಂಗಪುರದ ಮಧ್ಯಸ್ಥಿಕೆ ನ್ಯಾಯಮಂಡಳಿ ವಿಚಾರಣೆ ನಡೆಸುತ್ತು. ಆಗ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಫ್ಯೂಚರ್ ರೀಟೇಲ್‌ನ ಆಸ್ತಿ ಮಾರಾಟ ಮಾಡದಂತೆ ತಡೆದು ಮಧ್ಯಂತರ ಆದೇಶ ಜಾರಿಗೊಳಿಸಿತ್ತು.

Also Read
ಅಮೆಜಾನ್-ಫ್ಯೂಚರ್ ಗ್ರೂಪ್ ವಿವಾದ: ಸಿಂಗಪುರ ಮಧ್ಯಸ್ಥಿಕೆ ನ್ಯಾಯಮಂಡಳಿಯ ವಿಚಾರಣೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್

ಕಳೆದ ತಿಂಗಳು ಸಿಸಿಐ ಈ ಒಪ್ಪಂದವನ್ನು ಅಮಾನತುಗೊಳಿಸಿದ್ದು ಸ್ಪರ್ಧಾ ಕಾಯಿದೆ-2002ರ ಸೆಕ್ಷನ್ 6(2) ಅಡಿಯಲ್ಲಿ ಫ್ಯೂಚರ್‌ ಕೂಪನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಪಾಲು ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾಹಿತಿ ಹಂಚಿಕೊಳ್ಳಲು ಅಮೆಜಾನ್‌ ವಿಫಲವಾಗಿದೆ ಎಂದಿತ್ತು. ಅಲ್ಲದೆ ಅಮೆಜಾನ್‌ಗೆ ₹202 ಕೋಟಿ ದಂಡವನ್ನೂ ವಿಧಿಸಿತ್ತು.

Also Read
ಅಮೆಜಾನ್‌ಗೆ ₹202 ಕೋಟಿ ದಂಡ ವಿಧಿಸಿದ ಸಿಸಿಐ; ಅಮೆಜಾನ್‌-ಫ್ಯೂಚರ್‌ ಒಪ್ಪಂದ ತಾತ್ಕಾಲಿಕವಾಗಿ ಅಮಾನತು

ಸಿಸಿಐ ಆದೇಶದಿಂದ ಪ್ರೇರಿತವಾದ ಫ್ಯೂಚರ್‌ ಗ್ರೂಪ್‌ನ ಎರಡು ಕಂಪೆನಿಗಳು ಬಳಿಕ ಆಯೋಗದ ಆದೇಶವನ್ನು ಉಲ್ಲೇಖಿಸಿ ನ್ಯಾಯಮಂಡಳಿಯಲ್ಲಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದವು. ಅನುಮದೋದನೆಯನ್ನು ಸಿಸಿಐ ಅಮಾನತುಗೊಳಿಸಿದ್ದು ಎರಡೂ ಕಂಪೆನಿಗಳ ಒಪ್ಪಂದ ನಿಲ್ಲುವುದಿಲ್ಲ. ಹೀಗಾಗಿ ಈ ಒಪ್ಪಂದದ ಕುರಿತು ನಡೆಯುತ್ತಿರುವ ಮಧ್ಯಸ್ಥಿಕೆ ಕೂಡ ಕಾನೂನುಬಾಹಿರ ಎಂದು ಮನವಿ ತಿಳಿಸಿತ್ತು.

ಒಂದೆಡೆ ಏಕಸದಸ್ಯ ಪೀಠ ಈ ಅರ್ಜಿಗಳನ್ನು ವಜಾಗೊಳಿಸಿತ್ತು. ಆದರೆ ವಿಭಾಗಿಯ ಪೀಠ ಸಿಂಗಪುರ ನ್ಯಾಯ ಮಂಡಳಿ ಮುಂದೆ ವಿಚಾರಣೆಗೆ ತಡೆ ನೀಡಿತ್ತು. ವಿಚಾರಣೆ ತಡೆಯಲು ಸಿಸಿಐ ಆದೇಶ ಒಂದು ಕಾರಣವಾಗಿದ್ದು ಪ್ರಕ್ರಿಯೆಗಳನ್ನು ತಡೆಯದೇ ಹೋದರೆ ಫ್ಯೂಚರ್‌ ಗ್ರೂಪ್‌ಗೆ ತುಂಬಲಾರದ ನಷ್ಟ ಉಂಟಾಗಲಿದೆ ಎಂದು ಅದು ಹೇಳಿತ್ತು. ಈ ಸಂಬಂಧ ಅಮೆಜಾನ್‌ಗೆ ನೋಟಿಸ್‌ ಕೂಡ ನೀಡಿದ ಪೀಠ ಫೆಬ್ರವರಿ 1ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತ್ತು.

Related Stories

No stories found.
Kannada Bar & Bench
kannada.barandbench.com