ಹೈಕೋರ್ಟ್ ನ್ಯಾಯಮೂರ್ತಿ ಪುತ್ರಿಯೊಂದಿಗೆ ಪ್ರೇಮ, ಆಕ್ಷೇಪಾರ್ಹ ಫೋಟೊ ಸೋರಿಕೆ ಸಿಪ್ಪಿ ಸಿಧು ಹತ್ಯೆಗೆ ಕಾರಣ: ಸಿಬಿಐ

ಆರೋಪಿ ಯುವತಿಯ ಕೆಲ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಸಿಧು, ಆಕೆಯ ಪೋಷಕರಿಗೆ ಮತ್ತು ಸ್ನೇಹಿತರಿಗೆ ಸೋರಿಕೆ ಮಾಡಿದ್ದುಯುವತಿ ಮತ್ತವರ ಕುಟುಂಬಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ ತನಿಖಾ ಸಂಸ್ಥೆ.
ಹೈಕೋರ್ಟ್ ನ್ಯಾಯಮೂರ್ತಿ ಪುತ್ರಿಯೊಂದಿಗೆ ಪ್ರೇಮ, ಆಕ್ಷೇಪಾರ್ಹ ಫೋಟೊ ಸೋರಿಕೆ ಸಿಪ್ಪಿ ಸಿಧು ಹತ್ಯೆಗೆ ಕಾರಣ: ಸಿಬಿಐ
Sidhu Sippy Facebook

ರಾಷ್ಟ್ರಮಟ್ಟದ ಶೂಟಿಂಗ್‌ ಕ್ರೀಡಾಪಟು, ವಕೀಲ ಸಿಪ್ಪಿ ಸಿಧು ಹತ್ಯೆಗೆ ಆತನೊಂದಿಗೆೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಪುತ್ರಿಯೊಬ್ಬರು ಹೊಂದಿದ್ದ ಸಂಬಂಧ ಕಾರಣ ಎಂದು ಚಂಡೀಗಢ ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.

ಆರೋಪಿ ಕಲ್ಯಾಣಿ ಸಿಂಗ್‌ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 167ರ ಅಡಿ ಸಲ್ಲಿಸಲಾದ ಅರ್ಜಿಯಲ್ಲಿ, ಸಿಧು ಮತ್ತು ಆಕೆಯ ನಡುವೆ ಸಂಬಂಧ ಇತ್ತು ಎಂದು ಸಿಬಿಐ ಹೇಳಿದೆ.

Also Read
ಸಿಪ್ಪಿ ಸಿಧು ಹತ್ಯೆ ಪ್ರಕರಣ: ಹಿಮಾಚಲ ಪ್ರದೇಶ ಹೈಕೋರ್ಟ್ ಹಂಗಾಮಿ ಸಿಜೆ ಪುತ್ರಿಯನ್ನು ಬಂಧಿಸಿದ ಸಿಬಿಐ [ಚುಟುಕು]

ಸಿಧುವನ್ನು ಮದುವೆಯಾಗಲು ಕಲ್ಯಾಣಿ ಬಯಸಿದ್ದರು. ಆದರೆ ಸಿಧು ಪೋಷಕರು ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದರು. ಈ ಮಧ್ಯೆ ಕೆಲ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಸಿಧು, ಆಕೆಯ ಪೋಷಕರು ಮತ್ತು ಸ್ನೇಹಿತರಿಗೆ ಸೋರಿಕೆ ಮಾಡಿದ್ದು ಕಲ್ಯಾಣಿ ಮತ್ತವರ ಕುಟುಂಬಕ್ಕೆ ಮುಜುಗರ ಉಂಟುಮಾಡಿತ್ತು.

ನಂತರ ಚಂಡೀಗಢದ ಸೆಕ್ಟರ್ 27ರ ಪಾರ್ಕ್‌ನಲ್ಲಿ ತನ್ನನ್ನು ಭೇಟಿಯಾಗುವಂತೆ ಸಿಧುಗೆ ಆಕೆ ಕೇಳಿಕೊಂಡಳು, ಅಲ್ಲಿ ಮತ್ತೊಬ್ಬ ದುಷ್ಕರ್ಮಿಯೊಂದಿಗೆ ಸೇರಿ ಸೆಪ್ಟೆಂಬರ್ 20, 2015ರಂದು ಆತನನ್ನು ಗುಂಡಿಕ್ಕಿ ಕೊಂದಳು ಎಂದು ಸಿಬಿಐ ಆರೋಪಿಸಿದೆ. ಕಲ್ಯಾಣಿ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಬೀನಾ ಅವರ ಪುತ್ರಿ.

Related Stories

No stories found.
Kannada Bar & Bench
kannada.barandbench.com