ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಆರೋಪಿಗಳಿಬ್ಬರಿಗೆ ಜಾಮೀನು ನೀಡಿದ್ದ ನ್ಯಾಯಮೂರ್ತಿಗಳ ಬದಲು ಬೇರೆ ನ್ಯಾಯಮೂರ್ತಿಗಳೆದುರು ಆ ಪ್ರಕರಣ ಪಟ್ಟಿ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದೆ [ಹಿಮಾಂಶು ಶರ್ಮಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಸಾಮಾನ್ಯ ಸಂದರ್ಭಗಳಲ್ಲಿ, ಜಾಮೀನು ರದ್ದುಗೊಳಿಸುವ ಮನವಿಯನ್ನು ಜಾಮೀನು ನೀಡಿದ ಅದೇ ನ್ಯಾಯಮೂರ್ತಿಗಳೆದುರು ಪಟ್ಟಿ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನುಡಿಯಿತು.
ಆದ್ದರಿಂದ ಹೈಕೋರ್ಟ್‌ನ ಏಕಸದಸ್ಯ ಪೀಠವೊಂದು ನೀಡಿದ್ದ ಜಾಮೀನನ್ನು ಮತ್ತೊಂದು ಏಕಸದಸ್ಯ ಪೀಠ ರದ್ದುಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಇಂತಹ ಕ್ರಮ ಸಂಪೂರ್ಣ ಕಾನೂನುಬಾಹಿರ ಮತ್ತು ಅನೌಪಚಾರಿಕತೆಗೆ ಸಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದ್ದರಿಂದ, ಹೈಕೋರ್ಟ್‌ನ ಏಕಸದಸ್ಯ ಪೀಠವೊಂದು ನೀಡಿದ ಜಾಮೀನನ್ನು ಮತ್ತೊಂದು ಏಕಸದಸ್ಯ ಪೀಠ ರದ್ದುಪಡಿಸಿದ್ದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಕೃತ್ಯವು ಸಂಪೂರ್ಣ ಕಾನೂನುಬಾಹಿರ ಮತ್ತು ಅನೌಪಚಾರಿಕತೆಗೆ ಸಮನಾಗಿದೆ ಎಂದು ಅದು ತಿಳಿಸಿದೆ.
"ಜಾಮೀನು ರದ್ದುಗೊಳಿಸುವಂತೆ ಕೋರಿದ ಅರ್ಜಿಯನ್ನು ಮೇಲ್ಮನವಿದಾರರಿಗೆ ಜಾಮೀನು ನೀಡಿದ ಏಕಸದಸ್ಯ ಪೀಠದ ಬದಲಿಗೆ ಬೇರೊಂದು ಏಕಸದಸ್ಯ ಪೀಠದೆದುರು ಹೇಗೆ ಪಟ್ಟಿ ಮಾಡಲಾಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ... ಹೀಗೆ ಮಾಡುವುದು ಸಂಪೂರ್ಣ ಅನೌಪಚಾರಿಕತೆಗೆ ಸಮ" ಎಂದು ಪೀಠ ನುಡಿದಿದೆ.
ಆದ್ದರಿಂದ, ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದ ಏಕಸದಸ್ಯ ನ್ಯಾಯಮೂರ್ತಿ ಆನಂದ್ ಪಾಠಕ್ ಅವರು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗೆ ಸರಿಸಿತು.
ಜಾಮೀನು ರದ್ದುಗೊಳಿಸಿದ್ದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಜಾಮೀನು ರದ್ದತಿ ಅರ್ಜಿಯನ್ನು ಪಟ್ಟಿ ಮಾಡಿರುವುದೇ ಅಚ್ಚರಿದಾಯಕವಾಗಿದೆ ಎಂದು ಅದು ಹೇಳಿತು.
ಸಾಮಾನ್ಯ ಸಂದರ್ಭಗಳಲ್ಲಿ, ಜಾಮೀನು ನಿಯಮಗಳ ಉಲ್ಲಂಘನೆಯ ಬದಲು ಅರ್ಹತೆಯ ಆಧಾರದ ಮೇಲೆ ಸಲ್ಲಿಸಲಾದ ಜಾಮೀನು ರದ್ದತಿ ಕೋರಿಕೆ ಅರ್ಜಿಗಳನ್ನು ಆರೋಪಿಗಳಿಗೆ ಜಾಮೀನು ನೀಡಿದ ಅದೇ ಏಕಸದಸ್ಯ ಪೀಠದ ಮುಂದೆ ಇಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ ಅವರಿಗೆ ಜಾಮೀನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]