ನ್ಯಾಯಾಂಗ ವ್ಯವಸ್ಥೆ ಸಿಂಹವೊಂದನ್ನು ಕಳೆದುಕೊಳ್ಳುತ್ತಿದೆ: ನಿವೃತ್ತರಾಗುತ್ತಿರುವ ನ್ಯಾ. ನಾರಿಮನ್ ಕುರಿತು ಸಿಜೆಐ

"ಏಳು ವರ್ಷಗಳ ಅಧಿಕಾರಾವಧಿ ಸಾಕಾಗುವುದಿಲ್ಲ. ಅವರ ಅಸಾಧಾರಣ ಪ್ರತಿಭೆ ಮತ್ತು ಸಮಗ್ರ ವ್ಯಕ್ತಿತ್ವ ಮುಂದಿನ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ" ಎಂದು ನ್ಯಾಯಮೂರ್ತಿ ನಾರಿಮನ್ ಬಗ್ಗೆ ನ್ಯಾಯವಾದಿ ವರ್ಗ ಶ್ಲಾಘಿಸಿತು.
Justice Rohinton Nariman
Justice Rohinton Nariman

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ತಮ್ಮ ಕೊನೆಯ ದಿನವಾದ ಇಂದು, ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರ ಮೇಲೆ ನ್ಯಾಯಿಕ ವರ್ಗ ಶ್ಲಾಘನೆಯ ಮಳೆ ಸುರಿಸಿತು.

ಸಂಪ್ರದಾಯದಂತೆ ನ್ಯಾ. ನಾರಿಮನ್ ಅವರು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಜೊತೆ ಪೀಠ ಹಂಚಿಕೊಂಡರು. ಪೀಠ ನ್ಯಾ. ಸೂರ್ಯಕಾಂತ್‌ ಅವರನ್ನು ಕೂಡ ಒಳಗೊಂಡಿತ್ತು. ನ್ಯಾ. ರಮಣ ಅವರಿಂದ ಹಿಡಿದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರವರೆಗೆ ಅನೇಕರು ನ್ಯಾ. ನಾರಿಮನ್‌ ಅವರ ಕೊಡುಗೆಗಳನ್ನು ಸ್ಮರಿಸಿದರು.

ನ್ಯಾ. ನಾರಿಮನ್ ಅವರು 35 ವರ್ಷಗಳ ಕಾಲ ವಕೀಲರಾಗಿದ್ದರು. ಅವರು ನ್ಯಾಯವಾದಿ ವರ್ಗದಿಂದ ನೇರವಾಗಿ ಪದೋನ್ನತಿ ಪಡೆದ ಐದನೇ ವಕೀಲರಾಗಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ 13,565 ಪ್ರಕರಣಗಳನ್ನು ಅವರು ವಿಲೇವಾರಿ ಮಾಡಿದ್ದಾರೆ! ವೈಯಕ್ತಿಕವಾಗಿ ನನ್ನ ಆಲೋಚನೆಗಳನ್ನು ವ್ಯಕ್ತಪಡಿಸುವಾಗ ನಾನು ಸ್ವಲ್ಪ ಭಾವುಕನಾಗಿದ್ದೇನೆ. ಅವರ ನಿವೃತ್ತಿಯ ನಂತರ, ನ್ಯಾಯಾಂಗ ಸಂಸ್ಥೆಯನ್ನು ಕಾಪಾಡುವ ಸಿಂಹಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ. ಸಮಕಾಲೀನ ನ್ಯಾಯಾಂಗ ವ್ಯವಸ್ಥೆಯ ಬಲವಾದ ಆಧಾರ ಸ್ತಂಭಗಳಲ್ಲಿ ಅವರು ಒಬ್ಬರಾಗಿದ್ದರು. ಅವರದ್ದು ಸಿದ್ಧಾಂತಗಳಿಂದ ಕೂಡಿದ್ದ, ನ್ಯಾಯಕ್ಕೆ ಬದ್ಧವಾಗಿದ್ದ ವ್ಯಕ್ತಿತ್ವ. ಕಾನೂನು ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಾಗಿ ಅವರು ನಿರಂತರ ಮುಂದುವರೆಯಲಿ ಎಂದು ನಾನು ನಿರೀಕ್ಷಿಸುತ್ತೇನೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ಧರ್ಮ, ಸಂವಿಧಾನ ಅಥವಾ ಯಾವುದೇ ವಿಚಾರದ ತುಲನಾತ್ಮಕ ಅಧ್ಯಯನವೇ ಆಗಿರಲಿ ಅವರ ಅಸಾಧಾರಣ ಅರಿವು ಮತ್ತು ಪರಿಪೂರ್ಣತೆ ಮುಂದಿನ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ.

ತುಷಾರ್ ಮೆಹ್ತಾ, ಸಾಲಿಸಿಟರ್ ಜನರಲ್

ನ್ಯಾ. ನಾರಿಮನ್ ಇದ್ದಾಗ ಇಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿರಲು ಒಂದು ಲಾಭ ಇದೆ. ನ್ಯಾಯಮೂರ್ತಿ ನಾರಿಮನ್ ಹೆಸರನ್ನು ಶಿಫಾರಸು ಮಾಡಿದ (ಮಾಜಿ ಸಿಜೆಐ) ನ್ಯಾ. ಆರ್‌ಎಂ ಲೋಧಾ ಅವರಿಗೆ ನಾವು ಕೃತಜ್ಞರಾಗಿರಬೇಕು. ಏಳು ವರ್ಷಗಳ ಅಧಿಕಾರಾವಧಿ ಸಾಕಾಗುವುದಿಲ್ಲ. ಅವರ ಅಧಿಕಾರಾವಧಿ ಪ್ರತಿಷ್ಠೆಯನ್ನು ತಂದಿದೆ ...

ವಿಕಾಸ್ ಸಿಂಗ್, ಹಿರಿಯ ನ್ಯಾಯವಾದಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ

Also Read
ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಏಕರೂಪವಾಗಿರಲಿ, ವಯೋಮಿತಿ ಹೆಚ್ಚಳವಾಗಲಿ: ನ್ಯಾ. ಎಂ ಎನ್ ವೆಂಕಟಾಚಲಯ್ಯ

ಪಾರ್ಸಿ ಅರ್ಚಕ ಸಮುದಾಯಕ್ಕೆ ಸೇರಿದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಎಲ್‌ಎಲ್‌ಎಂ ಪದವೀಧರರಾಗಿರುವ ನ್ಯಾ. ನಾರಿಮನ್ ಅವರ ಅನುಪಸ್ಥಿತಿ ತೀವ್ರವಾಗಿರಲಿದೆ. 37 ನೇ ವಯಸ್ಸಿನಲ್ಲಿ, ಅವರನ್ನು ಹಿರಿಯ ನ್ಯಾಯವಾದಿಯಾಗಿ ನ್ಯಾ. ವೆಂಕಟಾಚಲಯ್ಯ ಅವರು ನೇಮಿಸಿದರು ಮತ್ತು ಅವರನ್ನು ಹಿರಿಯರನ್ನಾಗಿ ಮಾಡಲು ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು. ಅವರು 500 ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿದ್ದಾರೆ ಮತ್ತು ಒಮ್ಮೆ ತೀರ್ಪು ಕಾಯ್ದಿರಿಸಿದ ನಂತರ, ತೀಕ್ಷ್ಣವಾಗಿದ್ದ ಅವರು ತೀರ್ಪು ನೀಡಲು ಎರಡು ಅಥವಾ ಮೂರು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಲಿಲ್ಲ

ಶಿವಾಜಿ ಜಾಧವ್, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ (SCAORA) ಅಧ್ಯಕ್ಷ

ಅವರು ದೇಶ ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅದ್ಭುತವಾಗಿ ಸೇವೆ ಮಾಡಿದ್ದಾರೆ. ನ್ಯಾ. ನಾರಿಮನ್ ಅತ್ಯಂತ ನ್ಯಾಯಯುತ ಮತ್ತು ಸಹಾನುಭೂತಿಯ ನ್ಯಾಯಮೂರ್ತಿಗಳ ಸಮಗ್ರ ದ್ಯೋತಕದಂತಿದ್ದರು. ಅವರು ಎಲ್ಲಾ ವಕೀಲರ ಬಗ್ಗೆ ಸಮಾನವಾದ ದಯೆ ಹೊಂದಿದವರಾಗಿದ್ದರು. ಮತ್ತು ಯುವ ವಕೀಲರಿಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಖಚಿತವಾಗಿ ಕಿರಿಯ ವಕೀಲರು ಅವರಿಂದ ಹೆಚ್ಚು ಕಲಿತಿದ್ದಾರೆ...

ದುಷ್ಯಂತ್ ದವೆ, ಎಸ್ಸಿಬಿಎ ನಿಕಟಪೂರ್ವ ಅಧ್ಯಕ್ಷ

"ಸುಪ್ರೀಂಕೋರ್ಟ್‌ನ ಕೆಫೆಟೇರಿಯಾ ಗುಂಪಿನಿಂದ ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅಲ್ಲಿ ಅವರು ಯಾವಾಗಲೂ ನಮ್ಮೊಂದಿಗೆ ಕಾಫಿಗೆ ಸೇರುತ್ತಿದ್ದರು"

ಸಿದ್ಧಾರ್ಥ್ ದವೆ, ಹಿರಿಯ ವಕೀಲ

ನ್ಯಾಯಮೂರ್ತಿ ನಾರಿಮನ್ 42 ವರ್ಷಗಳಿಗೂ ಹೆಚ್ಚು ಕಾಲ ವಕೀಲರ ಸಂಘದಲ್ಲಿದ್ದರು. ನ್ಯಾಯಮೂರ್ತಿಗಳಾಗಿ, ನಿಮ್ಮ ಕೊಡುಗೆ ಅಗಾಧವಾದುದು ಮತ್ತು ವಕೀಲ ವರ್ಗದಲ್ಲಿ ಉತ್ತಮವಾದದ್ದನ್ನು ಹೊರತಂದಿದ್ದೀರಿ... ನಿವೃತ್ತಿಯ ನಂತರ ನಿಮ್ಮ ಸ್ವಂತ ಬರಹದಿಂದ ನೀವು ನಿಮ್ಮ ಕೊಡುಗೆಯನ್ನು ಮುಂದುವರೆಸಬಹುದು

ಕೆ ವಿ ವಿಶ್ವನಾಥನ್ ಹಿರಿಯ ವಕೀಲ

ನೀವು ಐದು ಕ್ಷೇತ್ರಗಳಿಗೆ ಮಾದರಿಯಾಗಿದ್ದೀರಿ. ನಾವು ನಿಮ್ಮನ್ನು ಸ್ನೇಹಿತ, ವಕೀಲ, ನ್ಯಾಯಮೂರ್ತಿ ಹಾಗೂ ನ್ಯಾಯಶಾಸ್ತ್ರಜ್ಞರಾಗಿ ನೋಡಿದ್ದೇವೆ… ನೀವು ಏನೇ ಕೈಗೆತ್ತಿಕೊಂಡರೂ ಅದಕ್ಕೆ ಅತ್ಯುತ್ತಮವಾದದ್ದನ್ನೇ ನೀಡಿದ್ದೀರಿ.

ಪಿಎಸ್ ನರಸಿಂಹ ಹಿರಿಯ ನ್ಯಾಯವಾದಿ

ನ್ಯಾಯಮೂರ್ತಿ ನಾರಿಮನ್ ಅವರ ಔಪಚಾರಿಕ ಬೀಳ್ಕೊಡುಗೆ ಸಮಾರಂಭ ಇಂದು ಮಧ್ಯಾಹ್ನ 3: 30 ಕ್ಕೆ ಸುಪ್ರೀಂ ಕೋರ್ಟ್ ಅಂಗಳದಲ್ಲಿ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com