ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಆರಿಜ್‌ ಖಾನ್‌ಗೆ ಗಲ್ಲು ಶಿಕ್ಷೆ, ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದ ದೆಹಲಿ ನ್ಯಾಯಾಲಯ

ಸಾಕೇತ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಸಂಜೀವ್‌ ಯಾದವ್‌ ಅವರು ಈಚೆಗೆ ಆರಿಜ್‌ ಖಾನ್‌ನನ್ನು ಅಪರಾಧಿ ಎಂದು ಘೋಷಿಸಿದ್ದರು.
Batla House Encounter , Delhi Police
Batla House Encounter , Delhi Police

ಪೊಲೀಸ್‌ ಇನ್‌ಸ್ಪೆಕ್ಟರ್‌ ಹತ್ಯೆಗೆ ಕಾರಣವಾಗಿದ್ದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಈಚೆಗೆ ಅಪರಾಧಿ ಎಂದು ಘೋಷಿತನಾಗಿದ್ದ ಆರೀಜ್‌ ಖಾನ್‌ಗೆ ದೆಹಲಿ ನ್ಯಾಯಾಲಯವು ಮರಣದಂಡನೆಯ ಶಿಕ್ಷೆ ವಿಧಿಸಿದೆ. ಇದು "ಅಪರೂಪದಲ್ಲಿಯೇ ಅಪರೂಪದ ಪ್ರಕರಣದ" ವರ್ಗಕ್ಕೆ ಸೇರಿದ್ದು, ಖಾನ್‌ಗೆ ಮರಣದಂಡನೆ ಶಿಕ್ಷೆ ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 186 (ಸರ್ಕಾರಿ ಸೇವೆಗೆ ಅಡ್ಡಿ)/ 333 ಉದ್ದೇಶಪೂರ್ವಕವಾಗಿ ಸರ್ಕಾರಿ ಅಧಿಕಾರಿಯನ್ನು ಗಾಯಗೊಳಿಸುವುದು)/ 353 ಸರ್ಕಾರಿ ಅಧಿಕಾರಿಯ ಮೇಲೆ ದೌರ್ಜನ್ಯ)/ 302 (ಕೊಲೆ)/ 307 (ಕೊಲೆ ಯತ್ನ)/ 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ 27 (ಶಸ್ತ್ರಾಸ್ತ್ರ ಬಳಕೆಗೆ ಶಿಕ್ಷೆ) ಹಾಗೂ ಐಪಿಸಿಯ ಸೆಕ್ಷನ್‌ 174ಎ ಅಡಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಸಾಕೇತ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಸಂಜೀವ್‌ ಯಾದವ್‌ ಅವರು ಈಚೆಗೆ ಖಾನ್‌ನನ್ನು ಅಪರಾಧಿ ಎಂದು ಘೋಷಿಸಿದ್ದರು.

ಪ್ರಾಸಿಕ್ಯೂಷನ್‌ ಸಲ್ಲಿಸಿರುವ ಸಾಕ್ಷ್ಯಗಳ ದಾಖಲೆ, ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ದಾಖಲೆ ರೂಪದ ಸಾಕ್ಷ್ಯಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆರಿಜ್‌ ಖಾನ್‌ ಅಪರಾಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಹೇಳಿದೆ.

2008ರ ಸೆಪ್ಟೆಂಬರ್‌ 19ರ ಬೆಳಿಗ್ಗೆ 11ಗಂಟೆ ವೇಳೆಗೆ ದೆಹಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನ ಪ್ಲಾಟ್‌ ನಂ. 108, ಎಲ್‌-18ರಲ್ಲಿ ಆರಿಜ್‌ ತನ್ನ ಸಹಚರ ಹಾಗೂ ಈಗಾಗಲೇ ಅಪರಾಧಿ ಎಂದು ಘೋಷಿತನಾಗಿರುವ ಶಹಜಾದ್‌ ಜೊತೆಗೂಡಿ ಉದ್ದೇಶಪೂರ್ವಕವಾಗಿ ಬಂದೂಕಿನಿಂದ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೋಹನ್‌ ಚಂದ್‌ ಶರ್ಮಾ ಅವರ ಮೇಲೆ ಉದ್ದೇಶಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಸಮಾನ ಉದ್ದೇಶದಿಂದ ದಾಳಿಗೈದು ಸಾವಿಗೆ ಕಾರಣರಾಗಿದ್ದಾರೆ. ಅವರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಲ್ಲದೇ ಅವರ ಮೇಲೆ ದೌರ್ಜನ್ಯ ಎಸಗಿ, ಕ್ರಿಮಿನಲ್‌ ಗುಂಪಿನ ಮೂಲಕ ಇತರೆ ಪೊಲೀಸ್‌ ಅಧಿಕಾರಿಗಳಿಗೆ ಗಂಭೀರ ಹಲ್ಲೆ ಮಾಡಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್‌ ನಿರೂಪಿಸಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ಟೂಲ್‌ಕಿಟ್‌ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಮೊರೆ ಹೋದ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿ

ಸರಣಿ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಬಾಟ್ಲಾ ಹೌಸ್‌ನ ಡ್ರಾಯಿಂಗ್‌ ಕೊಠಡಿಯಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಕೂಡಿಹಾಕಿದ ಕಾರಣ ಅವರು ಆತ್ಮರಕ್ಷಣೆಯ ಉದ್ದೇಶದಿಂದ ಗುಂಡು ಹಾರಿಸುವಂತೆ ಪ್ರಚೋದನೆ ಉಂಟುಮಾಡಲಾಗಿತ್ತು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ. ಶೂಟೌಟ್‌ ಸಂದರ್ಭದಲ್ಲಿ ಮೋಹನ್‌ ಚಂದ್‌ ಶರ್ಮಾ ಮತ್ತು ಇತರೆ ಪೊಲೀಸ್‌ ಸಿಬ್ಬಂದಿಗೆ ಗುಂಡು ತಗುಲಿದ್ದವು. ಡ್ರಾಯಿಂಗ್‌ ಕೋಣೆಯಲ್ಲಿದ್ದ ಉಗ್ರವಾದಿಯೊಬ್ಬನಿಗೂ ಇದೇ ವೇಳೆ ಗುಂಡೇಟು ತಗುಲಿತ್ತು. ಆರಿಜ್‌ ಸೇರಿದಂತೆ ಇಬ್ಬರು ಘಟನೆ ನಡೆದ ಫ್ಲ್ಯಾಟ್‌ನ ಮುಖ್ಯದ್ವಾರದಿಂದ ಪಲಾಯನಾಗೈದಿದ್ದರು. 2009ರಲ್ಲಿ ಘೋಷಿತ ಅಪರಾಧಿ ಎನಿಸಿಕೊಂಡಿದ್ದ ಆರಿಜ್ ಖಾನ್‌ನನ್ನು 2018ರಲ್ಲಿ ಬಂಧಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com