ಪ್ರಶಾಂತ್ ಭೂಷಣ್ ಟ್ವೀಟ್‌ಗಳನ್ನು ಪರಿಶೀಲಿಸಲು ಬಿಸಿಡಿಯಿಂದ ಸಮನ್ಸ್, ಭೂಷಣ್ ವಕೀಲಿಕೆಗೆ ಗಂಡಾಂತರ!

ಭೂಷಣ್ ಅವರಿಗೆ ಪರಿಷತ್ತಿನ ಮುಂದೆ ಅಕ್ಟೋಬರ್ 23ರಂದು ಸಂಜೆ 4 ಗಂಟೆಗೆ ಹಾಜರಾಗುವಂತೆ ಸೂಚಿಸಿರುವ ದೆಹಲಿ ವಕೀಲರ ಪರಿಷತ್ತು ನೋಟಿಸ್ ಗೆ 15 ದಿನಗಳೊಳಗಾಗಿ ಪ್ರತಿಕ್ರಿಯಿಸುವಂತೆ ತಿಳಿಸಿದೆ.
Bhushan was asked to pay ₹1 as fine for contempt of court
Bhushan was asked to pay ₹1 as fine for contempt of court

ನ್ಯಾಯಾಂಗ ಟೀಕೆಯಿಂದ ನಿಂದನಾ ಶಿಕ್ಷೆಗೆ ಗುರಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಟ್ವೀಟ್ ಗಳನ್ನು ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿರುವ ದೆಹಲಿ ವಕೀಲರ ಪರಿಷತ್ತು (ಬಿಸಿಡಿ) ನಿಂದನಾ ಪ್ರಕರಣದಲ್ಲಿನ ದೋಷಿ ಮತ್ತು ಶಿಕ್ಷೆಗೆ ಒಳಗಾಗಿರುವ ಭೂಷಣ್ ಅವರ ನಡತೆಯು ವೃತ್ತಿಪರ ದುರ್ನಡತೆಗೆ ಕಾರಣವಾದರೆ ವಕೀಲರ ಪರಿಷತ್ತಿನ ಸ್ಥಾನದಿಂದ ಅನರ್ಹವಾಗಲಿದ್ದಾರೆ ಎಂದು ಹೇಳಿದೆ. ಸೆಪ್ಟೆಂಬರ್ ಆರಂಭದಲ್ಲಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಈ ಸಂಬಂಧ ನಿರ್ಣಯ ಕೈಗೊಂಡಿತ್ತು.

ಈ ಸಂಬಂಧ ಭೂಷಣ್ ಅವರಿಗೆ ಬಿಸಿಡಿ ಸೆಪ್ಟೆಂಬರ್ 21ರಂದು ಸಮನ್ಸ್ ಜಾರಿಗೊಳಿಸಿದ್ದು, ಅಕ್ಟೋಬರ್ 23ರ ಸಂಜೆ 4 ಗಂಟೆಗೆ ಹಾಜರಾಗುವಂತೆ ಸೂಚಿಸಿದೆ. ಭೂಷಣ್ ಅವರು ಭೌತಿಕವಾಗಿ ಅಥವಾ ವರ್ಚುವಲ್ ವಿಚಾರಣೆಯಲ್ಲಿ ಭಾಗಿಯಾಗಬಹುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ವಕೀಲರ ಕಾಯಿದೆ-1961ರ ಸೆಕ್ಷನ್ 24A ಮತ್ತು 35ರ ಅಡಿ ತಮ್ಮ ಟ್ವೀಟ್ ಮತ್ತು ಆ ಬಳಿಕ ಘಟಿಸಿದ ನ್ಯಾಯಾಂಗ ನಿಂದನೆ ತೀರ್ಪಿಗೆ ಸಂಬಂಧಿಸಿದಂತೆ ಏಕೆ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ 15 ದಿನಗಳ ಒಳಗೆ ಭೂಷಣ್ ಅವರು ಪ್ರತಿಕ್ರಿಯಿಸಬೇಕಿದೆ.

Also Read
ನಾನು ತೀರ್ಪು ಒಪ್ಪಿಕೊಳ್ಳುತ್ತೇನೆ ಎಂದರ್ಥವಲ್ಲ; ನ್ಯಾ. ಅರುಣ್ ಮಿಶ್ರಾ ಪೀಠ ನಿಂದನಾ ಪ್ರಕರಣ ಆಲಿಸಬಾರದಿತ್ತು: ಭೂಷಣ್

ಸೆಕ್ಷನ್ 24Aರ ಅನ್ವಯ ನೋಂದಣಿ ರದ್ದುಪಡಿಸಲಾಗುತ್ತದೆ. ಸೆಕ್ಷನ್ 35 ದುರ್ನಡತೆ ತೋರುವ ವಕೀಲರಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದೆ. ಸೆಕ್ಷನ್ 35ರ ಅನ್ವಯ ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿಯು ವೃತ್ತಿಪರ ವಿಚಾರದಲ್ಲಿ ವಕೀಲರು ದೋಷಿ ಎಂದು ಸಾಬೀತಾದರೆ ವಕೀಲರ ಪರಿಷತ್ತಿನಿಂದ ಅಂಥವರನ್ನು ಅಮಾನತುಗೊಳಿಸಲಾಗುತ್ತದೆ.

15 ದಿನಗಳ ಒಳಗೆ ಭೂಷಣ್ ಅವರು ಪ್ರತಿಕ್ರಿಯಿಸದಿದ್ದಲ್ಲಿ ಅವರಿಗೆ ಪ್ರತಿಕ್ರಿಯಿಸಲು ಇಚ್ಛೆಯಿಲ್ಲ ಎಂದು ಭಾವಿಸಲಾಗುವುದು. ಪರಿಷತ್ತಿನ ಮುಂದೆ ಭೂಷಣ್ ಅವರು ಹಾಜರಾಗಲಿಲ್ಲದಿದ್ದರೂ ಏಕಮುಖ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com