ಬಿಸಿಐ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿದ ಉಪಾಧ್ಯಕ್ಷ ಸದಾಶಿವ ರೆಡ್ಡಿ

“ಬಿಸಿಐನ ₹150 ಕೋಟಿಯನ್ನು ಮಿಶ್ರಾ ನಿಯಂತ್ರಣದಲ್ಲಿರುವ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ. ಪಾರದರ್ಶಕ ಪ್ರಕ್ರಿಯೆ ಅನುಸರಿಸದೇ ಮಿಶ್ರಾ ಕುಟುಂಬದ ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ” ಎಂದು ರೆಡ್ಡಿ ಆಪಾದಿಸಿದ್ದಾರೆ.
Manan Kumar Mishra
Manan Kumar Mishra
Published on

ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ನಾಯಕತ್ವಕ್ಕೆ ವಿರೋಧಿಸಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಬಿಸಿಐ ಉಪಾಧ್ಯಕ್ಷ ವೈ ಆರ್‌ ಸದಾಶಿವ ರೆಡ್ಡಿ ಆಗ್ರಹಿಸಿದ್ದಾರೆ.

ಆಗಸ್ಟ್‌ 22ರಂದು ಈ ಸಂಬಂಧ ಮಿಶ್ರಾಗೆ ಪತ್ರ ಬರೆದಿರುವ ಸದಾಶಿವ ರೆಡ್ಡಿ ಅವರು ಬಿಸಿಐನ ₹150 ಕೋಟಿ ನಿಧಿಯನ್ನು ಮಿಶ್ರಾ ನಿಯಂತ್ರಣದಲ್ಲಿರುವ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ. ಯಾವುದೇ ತೆರನಾದ ಪಾರದರ್ಶಕ ಪ್ರಕ್ರಿಯೆ ಅನುಸರಿಸದೇ ಮಿಶ್ರಾ ಕುಟುಂಬದ ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಅಲ್ಲದೇ, ಈಚೆಗೆ ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪದವಿ ಪ್ರಮಾಣ ವಿರೋಧಿಸಿ ಹೇಳಿಕೆ ಬಿಡುಗಡೆ ಮಾಡಿದ್ದ ಮಿಶ್ರಾ ಕ್ರಮವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“… ಬಿಸಿಐ ತನ್ನ ಘನತೆಯನ್ನು ಬಿಟ್ಟು ಬಲುದಾರ ಸಾಗಿದೆ… ಹೀಗಾಗಿ, ತಕ್ಷಣ ನೀವು ತಮ್ಮ ಸ್ಥಾನಕ್ಕೆ 15 ದಿನಗಳಲ್ಲಿ ರಾಜೀನಾಮೆ ಸಲ್ಲಿಸಬೇಕು” ಎಂದು ರೆಡ್ಡಿ ಆಗ್ರಹಿಸಿದ್ದು, ದಶಕಕ್ಕೂ ಹೆಚ್ಚು ಕಾಲ ಮಿಶ್ರಾ ಜೊತೆ ಕಳೆದಿರುವ ರೆಡ್ಡಿ ಅವರು ಮಿಶ್ರಾ ರಾಜೀನಾಮೆಗೆ ಕೆಲವು ಆಧಾರಗಳನ್ನೂ ಒದಗಿಸಿದ್ದಾರೆ.

“ಬಿಸಿಐ ಟ್ರಸ್ಟ್‌ ಅನ್ನು ಉದ್ದೇಶಪೂರ್ವಕವಾಗಿ ಬಳಕೆಗೆ ಯೋಗ್ಯವಲ್ಲದಂತೆ ಮಾಡಲಾಗಿದೆ. ಇದರ ಬದಲಿಗೆ ʼಬಿಸಿಐ ಟ್ರಸ್ಟ್‌ ಪರ್ಲ್‌-ಫಸ್ಟ್‌ʼ ಅನ್ನು 2020ರ ಸೆಪ್ಟೆಂಬರ್‌ 17ರಂದು ಆರಂಭಿಸಲಾಗಿದ್ದು, ಇದಕ್ಕೆ ಮಿಶ್ರಾ ಅವರು ತನಗೆ ಬೇಕಾದ ಟ್ರಸ್ಟಿಗಳನ್ನು ನೇಮಿಸಿದ್ದಾರೆ. ಇದರ ಜೊತೆಗೆ ವಕೀಲರು ದೇಣಿಗೆ ನೀಡಿರುವುದೂ ಸೇರಿ ₹150 ಕೋಟಿಯನ್ನು ಅಲ್ಲಿಗೆ ವರ್ಗಾಯಿಸಲು ನಿರ್ಣಯವನ್ನೂ ಕೈಗೊಳ್ಳಲಾಗಿದೆ” ಎಂದು ಪತ್ರದಲ್ಲಿ ರೆಡ್ಡಿ ಆರೋಪಿಸಿದ್ದಾರೆ.

YR Sadasiva Reddy
YR Sadasiva Reddy

“ವಕೀಲರ ಕಾಯಿದೆ 1961ರ ಅಡಿ ಶಾಸನಬದ್ಧ ನಿಯಂತ್ರಕರ ನಿಧಿಯನ್ನು ಅಧ್ಯಕ್ಷರು ನೋಂದಾಯಿಸಿರುವ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಲು ಯಾವುದೇ ಸೆಕ್ಷನ್‌ ಅನುಮತಿಸುವುದಿಲ್ಲ. ಬಿಸಿಐನ ಯಾವೊಬ್ಬ ಸದಸ್ಯರೂ ಟ್ರಸ್ಟ್‌ ಡೀಡ್‌ ಅನ್ನು ನೋಡಿಲ್ಲ. ಹೊಸ ಕಾನೂನು ಕಾಲೇಜುಗಳನ್ನು ಆರಂಭಿಸಲು ಅನುಮತಿ ಕೋರುವ ಅಥವಾ ಅವುಗಳ ಪುನರ್‌ನವೀಕರಣಕ್ಕೆ ಬರುವ ಕಾನೂನು ಕಾಲೇಜುಗಳಿಗೆ ಖಾಸಗಿ ಟ್ರಸ್ಟ್‌ಗೆ ₹25 ಲಕ್ಷದಿಂದ ₹1 ಕೋಟಿವರೆಗೆ ದೇಣಿಗೆ ನೀಡಲು ಸೂಚಿಸಲಾಗಿದೆ” ಎಂದು ಆರೋಪಿಸಲಾಗಿದೆ.

“.. ಇದು ಸತ್ಯವಾದರೆ ಅಧ್ಯಕ್ಷರ ಕಚೇರಿಯಿಂದ ಇದು ಸತ್ಯವಲ್ಲ ಎಂದು ಹೇಳುವ ಯಾವುದೇ ವಿಚಾರ ಹೊರಬಂದಿಲ್ಲ… ಇದೊಂದು ಗಂಭೀರ ವಿಚಾರವಾಗಿದ್ದು, ಒಪ್ಪಿಗೆ ಅಥವಾ ಪುನರ್‌ ನವೀಕರಣವು ವಕೀಲರ ಕಾಯಿದೆ ಅಡಿ ನಿಯಂತ್ರಕ ಅಧಿಕಾರವಾಗಿದೆ. ಇದು ನಿಧಿ ಸಂಗ್ರಹಿಸಲು ಇರುವ ಪರವಾನಗಿಯಲ್ಲ. ಬಿಸಿಐನಲ್ಲಿ ಉದ್ಯೋಗದಲ್ಲಿರುವ ಸಿಬ್ಬಂದಿಯು ವೈಯಕ್ತಿಕವಾಗಿ ಮಿಶ್ರಾಗೆ ಸಂಬಂಧಿಸಿದ್ದು, ಅವರ ಕುಟುಂಬ ಸದಸ್ಯರಿಗೆ ಸಂಪರ್ಕ ಹೊಂದಿದವರೇ ಆಗಿದ್ದಾರೆ. ನೇಮಕಾತಿಗೆ ಸಂಬಂಧಿಸಿದಂತೆ ಜಾಹೀರಾತು, ಆಯ್ಕೆ ಸಮಿತಿ, ಮೆರಿಟ್‌ ಪಟ್ಟಿಯನ್ನು ಬಿಸಿಐ ಸಭೆಯಲ್ಲಿ ಇಡಲಾಗಿಲ್ಲ” ಎಂದು ಆರೋಪಿಸಲಾಗಿದೆ.

2026ರ ಆಗಸ್ಟ್‌ 13ರಂದು ಎಲ್ಲಾ ವಕೀಲರ ಪರಿಷತ್‌ಗಳಿಗೆ ಹೈದರಾಬಾದ್‌ನ ನಾಲ್ಸಾರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ನೋಂದಣಿ ಮಾಡದಂತೆ ಮಿಶ್ರಾ ಕಚೇರಿಯಿಂದ ಹೊರಡಿಸಲಾಗಿರುವ ಪತ್ರಕ್ಕೆ ತೀವ್ರ ವಿರೋಧ ದಾಖಲಿಸಲಾಗಿದೆ. ಬಿಸಿಐ ಸಭೆಯಲ್ಲಿ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸದೇ, ಈ ಸಂಬಂಧ ನಿರ್ಣಯ ಕೈಗೊಳ್ಳದೇ ಆದೇಶ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

“ಈ ಒಂದು ನಡೆಯು ಬಿಸಿಐನ ಘನತೆಗೆ ಅದರ ಇತಿಹಾಸದಲ್ಲೇ ಆಗದ ಅಪಚಾರ ಮಾಡಿದೆ. ಸುಪ್ರೀಂ ಕೋರ್ಟ್‌ ಬಾರ್‌ ಅಸೋಶಿಯೇಷನ್‌ ಮತ್ತು ಸುಪ್ರೀಂ ಕೋರ್ಟ್‌ ಈ ನಿರ್ಣಯಕ್ಕೆ ವಿರೋಧಿಸಿದ ಕೆಲವೇ ತಾಸುಗಳಲ್ಲಿ ಅದನ್ನು ಹಿಂಪಡೆಯಲಾಗಿದ್ದರೂ 'ಅಭಿಪ್ರಾಯ ಹೊಂದಿದ್ದಕ್ಕಾಗಿ ಪ್ರತೀಕಾರ' ಎಂದು ಪತ್ರದಲ್ಲಿ ವ್ಯಾಖ್ಯಾನಿಸಲಾಗಿದೆ. ರಾಜ್ಯ ವಕೀಲರ ಪರಿಷತ್‌ನಲ್ಲಿ ಭಿನ್ನ ಬಣಗಳನ್ನು ಸೃಷ್ಟಿಸಿರುವುದಕ್ಕಾಗಿ ಮಿಶ್ರಾ ಅವರ ವಿರುದ್ಧ ಕಿಡಿಕಾರಿರುವ ರೆಡ್ಡಿ ಅವರು ಅಧ್ಯಕ್ಷ ಅವಧಿ ಎರಡೇ ವರ್ಷಕ್ಕೆ ಸೀಮಿತವಾಗಿದ್ದರೂ 2012ರಿಂದ 14 ವರ್ಷಗಳವರೆಗೆ ಅಧಿಕಾರ ನಡೆಸಿದದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ಒಬ್ಬರೇ ಆಡಳಿತ ನಡೆಸುವ ಚುನಾಯಿತ ಕಚೇರಿಯು, ಯಾವುದೇ ನಿಜವಾದ ಅರ್ಥದಲ್ಲಿ, ಚುನಾಯಿತ ಕಚೇರಿಯಾಗಿ ಉಳಿಯುವುದಿಲ್ಲ ಎಂದು ರೆಡ್ಡಿ ಆಪಾದಿಸಿದ್ದಾರೆ.

ಈ ವಿಚಾರಗಳನ್ನು ಪರಿಗಣಿಸುವ ದೃಷ್ಟಿಯಿಂದ ಬಿಸಿಐ ವಿಶೇಷ ಸಭೆ ನಡೆಸಬೇಕು. ಬಿಸಿಐ ಮತ್ತು ಬಿಸಿಐ ಟ್ರಸ್ಟ್‌ ಪರ್ಲ್‌-ಫಸ್ಟ್‌ನ ಲೆಕ್ಕಪತ್ರಗಳ ವಿಶೇಷ ಆಡಿಟ್‌ ಅನ್ನು ಮಹಾಲೆಕ್ಕಪರಿಶೋಧಕರು (ಸಿಎಜಿ) ಪಟ್ಟಿ ಮಾಡಿರುವ ಸ್ವತಂತ್ರ ಸಂಸ್ಥೆಯಿಂದ ನಡೆಸಬೇಕು ಎಂದು ರೆಡ್ಡಿ ಕೋರಿದ್ದಾರೆ.

ಕಾನೂನು ಕಾಲೇಜುಗಳು ನೀಡುತ್ತಿರುವ ದೇಣಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಬೇಕು. ಯುವ ವಕೀಲರು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ವಕೀಲರ ಪರಿಷತ್‌, ಮಿಶ್ರಾ ಅವರ ತವರು ರಾಜ್ಯದ ವಕೀಲರ ಪರಿಷತ್‌ಯಾದಿಯಾಗಿ ಎಲ್ಲರೂ ಸಾರ್ವಜನಿಕವಾಗಿ ಮಿಶ್ರಾ ರಾಜೀನಾಮೆ ಕೇಳಿದ್ದಾರೆ. ಒಂದು ವೃತ್ತಿಯ ನಿಯಂತ್ರಕನನ್ನು ಅದು ನಿಯಂತ್ರಿಸುವ ವೃತ್ತಿಯು ಸಾರ್ವಜನಿಕವಾಗಿ ತಿರಸ್ಕರಿಸಿದಾಗ.. ಅದರ ಅಧ್ಯಕ್ಷರ ಮುಂದುವರಿಕೆಯ ಪ್ರಶ್ನೆಯು ಮುಂದೆ ವೈಯಕ್ತಿಕ ಆದ್ಯತೆಯ ವಿಷಯವಲ್ಲ. ಬದಲಿಗೆ ಅದು ಸಾಂಸ್ಥಿಕ ಉಳಿವಿನ ಪ್ರಶ್ನೆಯಾಗಿದೆ” ಎಂದು ರೆಡ್ಡಿ ಪತ್ರದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ನಾಯಕತ್ವಕ್ಕೆ ವಿರೋಧಿಸಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಬಿಸಿಐ ಉಪಾಧ್ಯಕ್ಷ ವೈ ಆರ್‌ ಸದಾಶಿವ ರೆಡ್ಡಿ ಆಗ್ರಹಿಸಿದ್ದಾರೆ.

ಆಗಸ್ಟ್‌ 22ರಂದು ಈ ಸಂಬಂಧ ಮಿಶ್ರಾಗೆ ಪತ್ರ ಬರೆದಿರುವ ಸದಾಶಿವ ರೆಡ್ಡಿ ಅವರು ಬಿಸಿಐನ 150 ಕೋಟಿ ನಿಧಿಯನ್ನು ಮಿಶ್ರಾ ನಿಯಂತ್ರಣದಲ್ಲಿರುವ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ. ಯಾವುದೇ ತೆರನಾದ ಪಾರದರ್ಶಕ ಪ್ರಕ್ರಿಯೆ ಅನುಸರಿಸದೇ ಮಿಶ್ರಾ ಕುಟುಂಬದ ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಅಲ್ಲದೇ, ಈಚೆಗೆ ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪದವಿ ಪ್ರಮಾಣ ವಿರೋಧಿಸಿ ಹೇಳಿಕೆ ಬಿಡುಗಡೆ ಮಾಡಿದ್ದ ಮಿಶ್ರಾ ಕ್ರಮವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“… ಬಿಸಿಐ ತನ್ನ ಘನತೆಯನ್ನು ಬಿಟ್ಟು ಬಲುದಾರ ಸಾಗಿದೆ… ಹೀಗಾಗಿ, ತಕ್ಷಣ ನೀವು ತಮ್ಮ ಸ್ಥಾನಕ್ಕೆ 15 ದಿನಗಳಲ್ಲಿ ರಾಜೀನಾಮೆ ಸಲ್ಲಿಸಬೇಕು” ಎಂದು ರೆಡ್ಡಿ ಆಗ್ರಹಿಸಿದ್ದು, ದಶಕಕ್ಕೂ ಹೆಚ್ಚು ಕಾಲ ಮಿಶ್ರಾ ಜೊತೆ ಕಳೆದಿರುವ ರೆಡ್ಡಿ ಅವರು ಮಿಶ್ರಾ ರಾಜೀನಾಮೆಗೆ ಕೆಲವು ಆಧಾರಗಳನ್ನೂ ಒದಗಿಸಿದ್ದಾರೆ.

“ಬಿಸಿಐ ಟ್ರಸ್ಟ್‌ ಅನ್ನು ಉದ್ದೇಶಪೂರ್ವಕವಾಗಿ ಬಳಕೆಗೆ ಯೋಗ್ಯವಲ್ಲದಂತೆ ಮಾಡಲಾಗಿದೆ. ಇದರ ಬದಲಿಗೆ ʼಬಿಸಿಐ ಟ್ರಸ್ಟ್‌ ಪರ್ಲ್‌-ಫಸ್ಟ್‌ʼ ಅನ್ನು 2020ರ ಸೆಪ್ಟೆಂಬರ್‌ 17ರಂದು ಆರಂಭಿಸಲಾಗಿದ್ದು, ಇದಕ್ಕೆ ಮಿಶ್ರಾ ಅವರು ತನಗೆ ಬೇಕಾದ ಟ್ರಸ್ಟಿಗಳನ್ನು ನೇಮಿಸಿದ್ದಾರೆ. ಇದರ ಜೊತೆಗೆ ವಕೀಲರು ದೇಣಿಗೆ ನೀಡಿರುವುದೂ ಸೇರಿ 150 ಕೋಟಿಯನ್ನು ಅಲ್ಲಿಗೆ ವರ್ಗಾಯಿಸಲು ನಿರ್ಣಯವನ್ನೂ ಕೈಗೊಳ್ಳಲಾಗಿದೆ” ಎಂದು ಪತ್ರದಲ್ಲಿ ರೆಡ್ಡಿ ಆರೋಪಿಸಿದ್ದಾರೆ.

“ವಕೀಲರ ಕಾಯಿದೆ 1961ರ ಅಡಿ ಶಾಸನಬದ್ಧ ನಿಯಂತ್ರಕರ ನಿಧಿಯನ್ನು ಅಧ್ಯಕ್ಷರು ನೋಂದಾಯಿಸಿರುವ ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಲು ಯಾವುದೇ ಸೆಕ್ಷನ್‌ ಅನುಮತಿಸುವುದಿಲ್ಲ. ಬಿಸಿಐನ ಯಾವೊಬ್ಬ ಸದಸ್ಯರೂ ಟ್ರಸ್ಟ್‌ ಡೀಡ್‌ ಅನ್ನು ನೋಡಿಲ್ಲ. ಹೊಸ ಕಾನೂನು ಕಾಲೇಜುಗಳನ್ನು ಆರಂಭಿಸಲು ಅನುಮತಿ ಕೋರುವ ಅಥವಾ ಅವುಗಳ ಪುನರ್‌ನವೀಕರಣಕ್ಕೆ ಬರುವ ಕಾನೂನು ಕಾಲೇಜುಗಳಿಗೆ ಖಾಸಗಿ ಟ್ರಸ್ಟ್‌ಗೆ ₹25 ಲಕ್ಷದಿಂದ ₹1 ಕೋಟಿವರೆಗೆ ದೇಣಿಗೆ ನೀಡಲು ಸೂಚಿಸಲಾಗಿದೆ” ಎಂದು ಆರೋಪಿಸಲಾಗಿದೆ.

“.. ಇದು ಸತ್ಯವಾದರೆ ಅಧ್ಯಕ್ಷರ ಕಚೇರಿಯಿಂದ ಇದು ಸತ್ಯವಲ್ಲ ಎಂದು ಹೇಳುವ ಯಾವುದೇ ವಿಚಾರ ಹೊರಬಂದಿಲ್ಲ… ಇದೊಂದು ಗಂಭೀರ ವಿಚಾರವಾಗಿದ್ದು, ಒಪ್ಪಿಗೆ ಅಥವಾ ಪುನರ್‌ ನವೀಕರಣವು ವಕೀಲರ ಕಾಯಿದೆ ಅಡಿ ನಿಯಂತ್ರಕ ಅಧಿಕಾರವಾಗಿದೆ. ಇದು ನಿಧಿ ಸಂಗ್ರಹಿಸಲು ಇರುವ ಪರವಾನಗಿಯಲ್ಲ. ಬಿಸಿಐನಲ್ಲಿ ಉದ್ಯೋಗದಲ್ಲಿರುವ ಸಿಬ್ಬಂದಿಯು ವೈಯಕ್ತಿಕವಾಗಿ ಮಿಶ್ರಾಗೆ ಸಂಬಂಧಿಸಿದ್ದು, ಅವರ ಕುಟುಂಬ ಸದಸ್ಯರಿಗೆ ಸಂಪರ್ಕ ಹೊಂದಿದವರೇ ಆಗಿದ್ದಾರೆ. ನೇಮಕಾತಿಗೆ ಸಂಬಂಧಿಸಿದಂತೆ ಜಾಹೀರಾತು, ಆಯ್ಕೆ ಸಮಿತಿ, ಮೆರಿಟ್‌ ಪಟ್ಟಿಯನ್ನು ಬಿಸಿಐ ಸಭೆಯಲ್ಲಿ ಇಡಲಾಗಿಲ್ಲ” ಎಂದು ಆರೋಪಿಸಲಾಗಿದೆ.

2026ರ ಆಗಸ್ಟ್‌ 13ರಂದು ಎಲ್ಲಾ ವಕೀಲರ ಪರಿಷತ್‌ಗಳಿಗೆ ಹೈದರಾಬಾದ್‌ನ ನಾಲ್ಸಾರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ನೋಂದಣಿ ಮಾಡದಂತೆ ಮಿಶ್ರಾ ಕಚೇರಿಯಿಂದ ಹೊರಡಿಸಲಾಗಿರುವ ಪತ್ರಕ್ಕೆ ತೀವ್ರ ವಿರೋಧ ದಾಖಲಿಸಲಾಗಿದೆ. ಬಿಸಿಐ ಸಭೆಯಲ್ಲಿ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸದೇ, ಈ ಸಂಬಂಧ ನಿರ್ಣಯ ಕೈಗೊಳ್ಳದೇ ಆದೇಶ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

“ಈ ಒಂದು ನಡೆಯು ಬಿಸಿಐನ ಘನತೆಗೆ ಅದರ ಇತಿಹಾಸದಲ್ಲೇ ಆಗದ ಅಪಚಾರ ಮಾಡಿದೆ. ಸುಪ್ರೀಂ ಕೋರ್ಟ್‌ ಬಾರ್‌ ಅಸೋಶಿಯೇಷನ್‌ ಮತ್ತು ಸುಪ್ರೀಂ ಕೋರ್ಟ್‌ ಈ ನಿರ್ಣಯಕ್ಕೆ ವಿರೋಧಿಸಿದ ಕೆಲವೇ ತಾಸುಗಳಲ್ಲಿ ಅದನ್ನು ಹಿಂಪಡೆಯಲಾಗಿದ್ದರೂ 'ಅಭಿಪ್ರಾಯ ಹೊಂದಿದ್ದಕ್ಕಾಗಿ ಪ್ರತೀಕಾರ' ಎಂದು ಪತ್ರದಲ್ಲಿ ವ್ಯಾಖ್ಯಾನಿಸಲಾಗಿದೆ. ರಾಜ್ಯ ವಕೀಲರ ಪರಿಷತ್‌ನಲ್ಲಿ ಭಿನ್ನ ಬಣಗಳನ್ನು ಸೃಷ್ಟಿಸಿರುವುದಕ್ಕಾಗಿ ಮಿಶ್ರಾ ಅವರ ವಿರುದ್ಧ ಕಿಡಿಕಾರಿರುವ ರೆಡ್ಡಿ ಅವರು ಅಧ್ಯಕ್ಷ ಅವಧಿ ಎರಡೇ ವರ್ಷಕ್ಕೆ ಸೀಮಿತವಾಗಿದ್ದರೂ 2012ರಿಂದ 14 ವರ್ಷಗಳವರೆಗೆ ಅಧಿಕಾರ ನಡೆಸಿದದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ಒಬ್ಬರೇ ಆಡಳಿತ ನಡೆಸುವ ಚುನಾಯಿತ ಕಚೇರಿಯು, ಯಾವುದೇ ನಿಜವಾದ ಅರ್ಥದಲ್ಲಿ, ಚುನಾಯಿತ ಕಚೇರಿಯಾಗಿ ಉಳಿಯುವುದಿಲ್ಲ ಎಂದು ರೆಡ್ಡಿ ಆಪಾದಿಸಿದ್ದಾರೆ.

ಈ ವಿಚಾರಗಳನ್ನು ಪರಿಗಣಿಸುವ ದೃಷ್ಟಿಯಿಂದ ಬಿಸಿಐ ವಿಶೇಷ ಸಭೆ ನಡೆಸಬೇಕು. ಬಿಸಿಐ ಮತ್ತು ಬಿಸಿಐ ಟ್ರಸ್ಟ್‌ ಪರ್ಲ್‌-ಫಸ್ಟ್‌ನ ಲೆಕ್ಕಪತ್ರಗಳ ವಿಶೇಷ ಆಡಿಟ್‌ ಅನ್ನು ಮಹಾಲೆಕ್ಕಪರಿಶೋಧಕರು (ಸಿಎಜಿ) ಪಟ್ಟಿ ಮಾಡಿರುವ ಸ್ವತಂತ್ರ ಸಂಸ್ಥೆಯಿಂದ ನಡೆಸಬೇಕು ಎಂದು ರೆಡ್ಡಿ ಕೋರಿದ್ದಾರೆ.

ಕಾನೂನು ಕಾಲೇಜುಗಳು ನೀಡುತ್ತಿರುವ ದೇಣಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಬೇಕು. ಯುವ ವಕೀಲರು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ವಕೀಲರ ಪರಿಷತ್‌, ಮಿಶ್ರಾ ಅವರ ತವರು ರಾಜ್ಯದ ವಕೀಲರ ಪರಿಷತ್‌ಯಾದಿಯಾಗಿ ಎಲ್ಲರೂ ಸಾರ್ವಜನಿಕವಾಗಿ ಮಿಶ್ರಾ ರಾಜೀನಾಮೆ ಕೇಳಿದ್ದಾರೆ. ಒಂದು ವೃತ್ತಿಯ ನಿಯಂತ್ರಕನನ್ನು ಅದು ನಿಯಂತ್ರಿಸುವ ವೃತ್ತಿಯು ಸಾರ್ವಜನಿಕವಾಗಿ ತಿರಸ್ಕರಿಸಿದಾಗ.. ಅದರ ಅಧ್ಯಕ್ಷರ ಮುಂದುವರಿಕೆಯ ಪ್ರಶ್ನೆಯು ಮುಂದೆ ವೈಯಕ್ತಿಕ ಆದ್ಯತೆಯ ವಿಷಯವಲ್ಲ. ಬದಲಿಗೆ ಅದು ಸಾಂಸ್ಥಿಕ ಉಳಿವಿನ ಪ್ರಶ್ನೆಯಾಗಿದೆ” ಎಂದು ರೆಡ್ಡಿ ಪತ್ರದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

Attachment
PDF
Letter to BCI Chairman
Preview
Kannada Bar & Bench
kannada.barandbench.com