ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ವಕೀಲರ ಪರಿಷತ್ತು, ವಕೀಲರ ಸಂಘಗಳಿಗೆ ಕರೆ ನೀಡಿದ ಬಿಸಿಐ

ಆಯುಷ್ ಸಚಿವಾಲಯ 2022ರ ಜೂನ್ 21ರಂದು ಭಾರತ ಸೇರಿದಂತೆ ಜಗತ್ತಿನೆಲ್ಲಡೆ ಆಯೋಜಿಸಿರುವ ಎಂಟನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ʼಮನುಕುಲಕ್ಕಾಗಿ ಯೋಗ: ಎಂಬ ವಿಷಯವನ್ನು ಆಯ್ದುಕೊಂಡಿದೆ.
ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ವಕೀಲರ ಪರಿಷತ್ತು, ವಕೀಲರ ಸಂಘಗಳಿಗೆ ಕರೆ ನೀಡಿದ ಬಿಸಿಐ
A1

ದೇಶದ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳು ಹಾಗೂ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಜೂನ್ 21ರಂದು ಯೋಗ ಶಿಬಿರಗಳನ್ನು ಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಕರೆ ನೀಡಿದೆ.

ನ್ಯಾಯಿಕ ಸಮುದಾಯವು ಯೋಗ ದಿನ ಆಚರಿಸುವಂತೆ ಕಾನೂನು ಸಚಿವ ಕಿರಣ್ ರಿಜಿಜು ಬಿಸಿಐಗೆ ಪತ್ರ ಬರೆದಿದ್ದರು. ಅದರಂತೆ ಬಿಸಿಐ ಯೋಗ ದಿನ ಆಚರಿಸಲು ನ್ಯಾಯಿಕ ಸಮುದಾಯವನ್ನು ಕೋರಿದೆ.

Also Read
[ಕಳಪೆ ಗುಣಮಟ್ಟ] ಬಿಸಿಐ ಗುರುತಿಸಿರುವ 500 ಕಾನೂನು ಶಿಕ್ಷಣ ಸಂಸ್ಥೆಗಳ ದಿಢೀರ್ ತಪಾಸಣೆ: ಸಚಿವ ರಿಜಿಜು

ಒತ್ತಡ ನಿಭಾಯಿಸಲು ಮಾತ್ರವಲ್ಲದೆ ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸಲು ಯೋಗ ಸಹಾಯ ಮಾಡುತ್ತದೆ. ಮಾನವ ಉನ್ನತಿಗಾಗಿ ಸಾಮರ್ಥ್ಯ ರೂಪಿಸಲು ದೇಹ, ಮನಸ್ಸು ಹಾಗೂ ಆತ್ಮವನ್ನು ಬೆಸೆಯುವ ಇದು ಪ್ರಯೋಗದ ಹಾದಿಯಾಗಿದೆ ಎಂದು ಗೌರವಾನ್ವಿತ ಕೇಂದ್ರ ಸಚಿವರು ನಂಬಿದ್ದಾರೆ. ಯೋಗ ವಿಶ್ವಕ್ಕೆ ಪರಿಚಯಿಸಿರುವ ದೈಹಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಅಂತರಾಷ್ಟ್ರೀಯ ಯೋಗ ದಿನ ಆಚರಿಸುವ ಮೂಲಕ ನ್ಯಾಯಿಕ ಬಂಧುಗಳು ಪ್ರದರ್ಶಿಸಬೇಕು ಎಂದು ಬಿಸಿಐ ತಿಳಿಸಿದೆ.

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಬಿಸಿಐಗೆ ವಿಶೇಷವಾಗಿ ಪತ್ರ ಬರೆದು ಮನವಿಮಾಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿಶ್ರೀಮಂತೋಸೇನ್ ಪತ್ರದಲ್ಲಿ ತಿಳಿಸಿದ್ದಾರೆ.

“ಕಾನೂನು ಸಮುದಾಯದವರಿಗೆ ದೀರ್ಘಾವಧಿ ಕೆಲಸದ ಪರಿಣಾಮದಿಂದ ಸೃಷ್ಟಿಯಾಗುವ ಒತ್ತಡ ನಿಭಾಯಿಸಲು ಯೋಗ ಸಹಕಾರಿಯಾಗುವುದಲ್ಲದೆ ಮನಸ್ಸು ಮತ್ತು ಆತ್ಮವನ್ನು ಜೋಡಿಸಲು ಅದು ಸಹಾಯ ಮಾಡುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com