ತನ್ನ ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರೊಂದಿಗೆ ಭಾರತ್‌ಪೇ ನಿರ್ಣಾಯಕ ಒಪ್ಪಂದ ಮಾಡಿಕೊಂಡಿದೆ. ಈ ಇತ್ಯರ್ಥದ ಪ್ರಕಾರ ಗ್ರೋವರ್ ಯಾವುದೇ ರೀತಿಯಲ್ಲಿ ಭಾರತ್ ಪೇ ಜೊತೆ ಸಂಬಂಧವನ್ನಾಗಲೀ, ಷೇರು ಪಾಲುದಾರಿಕೆಯನ್ನಾಗಲೀ ಹೊಂದುವಂತಿಲ್ಲ.
ಗ್ರೋವರ್ ನಿರ್ದಿಷ್ಟ ಪ್ರಮಾಣದ ಷೇರುಗಳನ್ನು ಕಂಪನಿಯ ಉಪಯೋಗಕ್ಕಾಗಿ ರೆಸಿಲೆಂಟ್ ಗ್ರೋತ್ ಟ್ರಸ್ಟ್‌ಗೆ ವರ್ಗಾಯಿಸಬೇಕಿದೆ. ಉಳಿದ ಷೇರುಗಳನ್ನು ಅವರ ಕುಟುಂಬದ ಟ್ರಸ್ಟ್ ನಿರ್ವಹಿಸಲಿದೆ.
ಬಹು ನ್ಯಾಯಾಲಯಗಳಲ್ಲಿ ದಾಖಲಾಗಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಮುಂದುವರಿಸದೆ ಇರಲು ಎರಡೂ ಕಡೆಯ ಪಕ್ಷಕಾರರು ನಿರ್ಧರಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಅಶ್ನೀರ್ ಗ್ರೋವರ್ ಅವರು “ಭಾರತ್‌ಪೇಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ಮಹತ್ತರ ಕೆಲಸ ಮಾಡುತ್ತಿರುವ ವ್ಯವಸ್ಥಾಪಕರು ಮತ್ತು ಮಂಡಳಿಯಲ್ಲಿ ನನಗೆ ನಂಬಿಕೆ ಇದೆ. ಕಂಪನಿಯ ಬೆಳವಣಿಗೆ ಮತ್ತು ಯಶಸ್ಸಿಗೆ ಹೊಂದಿಕೊಂಡು ಹೋಗುವುದನ್ನು ನಾನು ಮುಂದುವರಿಸುತ್ತೇನೆ. ನಾನು ಇನ್ನು ಮುಂದೆ ಯಾವುದೇ ರೀತಿಯಲ್ಲಿ ಭಾರತ್ ಪೇ ಜೊತೆ ಸಂಬಂಧ ಹೊಂದಿರುವುದಿಲ್ಲ ಅಥವಾ ನಾನು ಬಂಡವಾಳ ಕೋಷ್ಟಕದ ಭಾಗವಾಗಿರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.