[ಭೀಮಾ ಕೋರೆಗಾಂವ್] ಗೌತಮ್ ನವಲಾಖಾ ಗೃಹ ಬಂಧನದ ಕೋರಿಕೆ ಪುರಸ್ಕರಿಸಿದ ಸುಪ್ರೀಂ; ಒಂದು ತಿಂಗಳ ಅವಧಿಗೆ ಸಮ್ಮತಿ

ಗೃಹಬಂಧನದಲ್ಲಿರುವಾಗ ನವಲಖಾ ಅವರು ಕಂಪ್ಯೂಟರ್, ಇಂಟರ್ನೆಟ್ ಅಥವಾ ಇತರ ಯಾವುದೇ ಸಂವಹನ ಸಾಧನ ಬಳಸಲು ಅನುಮತಿ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
Gautam Navlakha, Supreme Court
Gautam Navlakha, Supreme Court

ಒಂದು ತಿಂಗಳ ಕಾಲ ತಮ್ಮನ್ನು ಜೈಲಿನಿಂದ ಗೃಹ ಬಂಧನಕ್ಕೆ ವರ್ಗಾಯಿಸಲು ಕೋರಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಗೌತಮ್‌ ನವಲಾಖಾ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪುರಸ್ಕರಿಸಿದೆ.

ಗೃಹಬಂಧನದಲ್ಲಿರುವ ವೇಳೆ ಭದ್ರತೆ ಒದಗಿಸುವುದಕ್ಕಾಗಿ ನವಲಖಾ ₹ 2.4 ಲಕ್ಷ ಮೊತ್ತವನ್ನು ಠೇವಣಿ ಇಡಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಆದೇಶಿಸಿದೆ.

ಒಂದು ತಿಂಗಳ ಅವಧಿಗೆ ಗೃಹಬಂಧನದಲ್ಲಿರಿಸಲು ಅನುಮತಿ ನೀಡಬೇಕು ಎಂದು ನಾವು ಭಾವಿಸುತ್ತೇವೆ. ಗೃಹಬಂಧನ ದುರುಪಯೋಗವಾಗದಂತೆ ಮೇಲ್ವಿಚಾರಣೆ ನಡೆಸಲು ಶಸ್ತ್ರಸಜ್ಜಿತ ಬೆಂಗಾವಲು ಇರಬೇಕು” ಎಂದು ಪೀಠ ಆದೇಶಿಸಿದೆ.

Also Read
ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಹಿಜಾಬ್ ಪ್ರಕರಣ, ಕಪ್ಪನ್ ಜಾಮೀನು ಅರ್ಜಿ, ನವಲಖಾ ಮೇಲ್ಮನವಿಗಳ ವಿಚಾರಣೆ

ಗೃಹಬಂಧನದಲ್ಲಿರುವಾಗ ನವಲಾಖಾ ಅವರು ಕಂಪ್ಯೂಟರ್, ಇಂಟರ್ನೆಟ್ ಅಥವಾ ಇತರ ಯಾವುದೇ ಸಂವಹನ ಸಾಧನವನ್ನು ಬಳಸಲು ಅನುಮತಿ ನೀಡಬಾರದು.. ಆದರೂ ದಿನಕ್ಕೊಮ್ಮೆ 10 ನಿಮಿಷಗಳ ಕಾಲ ಪೊಲೀಸರ ಸಮ್ಮುಖದಲ್ಲಿ ಫೋನ್‌ ಬಳಸಲು ಅವರಿಗೆ ಅನುಮತಿ ಇರುತ್ತದೆ. ಅದರ ಹೊರತಾಗಿ ಅವರು ತಮ್ಮ ಸಂಗಾತಿಗಳು ಸೇರಿದಂತೆ ಬೇರಾವುದೇ ಫೋನ್‌ ಬಳಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಅಂತರ್ಜಾಲ ಸಂಪರ್ಕವಿಲ್ಲದ ದೂರದರ್ಶನ, ಪತ್ರಿಕೆಗಳನ್ನು ಓದಲು ಅನುಮತಿ ಇದೆ. ಮುಂಬೈ/ನವಿ ಮುಂಬೈ ಪ್ರದೇಶ ಬಿಟ್ಟು ಅವರು ಹೊರಗೆ ತೆರಳುವಂತಿಲ್ಲ. ದಿನಕ್ಕೆ ಮೂರು ಗಂಟೆಗಳ ಅವಧಿಗೆ ಅವರು ಕುಟುಂಬ ಸದಸ್ಯರನ್ನು ಭೇಟಿ ಮಾಡಬಹುದು ಪ್ರವೇಶ ದ್ವಾರದಲ್ಲಿ ಮತ್ತು ನಿವಾಸದ ಕೊಠಡಿಗಳ ಹೊರಗೆ ಸಿಸಿಟಿವಿ ಇರಬೇಕು. ಅವು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವು ಆಫ್‌ ಆಗಬಾರದು ಎಂದು ನ್ಯಾಯಾಲಯ ಸೂಚಿಸಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಗೃಹಬಂಧನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು, ʼ ಸುಪ್ರೀಂ ಕೋರ್ಟ್‌ ಮೊರೆ ಹೋಗುವಂತೆʼ ಸೂಚಿಸಿ ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ನವಲಾಖಾ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com