ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಸ್ಫೋಟ: ಒಬ್ಬ ವ್ಯಕ್ತಿಗೆ ಗಾಯ

ಸ್ಫೋಟಕ್ಕೆ ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಆದರೆ, ಪ್ರಾಥಮಿಕ ವರದಿಗಳು ಲ್ಯಾಪ್‌ಟಾಪ್‌ ಅಥವಾ ಟಿಫಿನ್ ಬಾಕ್ಸ್ ಸ್ಫೋಟ ಎಂದು ಹೇಳಿವೆ.
Rohini court
Rohini court Unknown

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ 10:40 ರ ಸುಮಾರಿಗೆ ಲಘು ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.ಈ ಘಟನೆ ಚೇಂಬರ್ ನಂ. 102ರಲ್ಲಿ ನಡೆದಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಸ್ಫೋಟದ ಬಳಿಕ ನ್ಯಾಯಾಲಯದ ಕಲಾಪ ಸ್ಥಗಿತಗೊಂಡಿತ್ತು.

ಸ್ಫೋಟಕ್ಕೆ ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಆದರೆ, ಪ್ರಾಥಮಿಕ ವರದಿಗಳು ಲ್ಯಾಪ್‌ಟಾಪ್ ಅಥವಾ ಟಿಫಿನ್ ಬಾಕ್ಸ್ ಸ್ಫೋಟ ಎಂದು ಹೇಳಿವೆ. ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ, ಪೊಲೀಸರು ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Also Read
ರೋಹಿಣಿ ಕೋರ್ಟ್ ಶೂಟೌಟ್: ಕೆಳಹಂತದ ನ್ಯಾಯಾಲಯಗಳಲ್ಲಿ ಅಪರಾಧಿಗಳ ವರ್ಚುವಲ್‌ ಹಾಜರಿಗೆ ಸುಪ್ರೀಂನಲ್ಲಿ ಮನವಿ

ಉತ್ತರ ದೆಹಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಕೀಲ ವಿನೀತ್ ಜಿಂದಾಲ್ ಅವರು ಘಟನೆ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು, “ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತಾ ಲೋಪ ಉಂಟಾಗಿರುವುದು ದಾವೆದಾರರು ಮತ್ತು ವಕೀಲರಿಗೆ ಬಹಳ ಕಳವಳಕಾರಿ. ದೆಹಲಿ ಹೈಕೋರ್ಟ್ ಭದ್ರತಾ ಲೋಪವನ್ನು ಗಮನಿಸುತ್ತಿದ್ದು ಪೊಲೀಸರಿಗೆ ನಿರ್ದೇಶನಗಳನ್ನು ನೀಡಿದೆ, ಆದರೆ ಭದ್ರತಾ ಸಮಸ್ಯೆ ಈಗಲೂ ಹಾಗೆಯೇ ಇದೆ. ದೆಹಲಿಯ ಜಿಲ್ಲಾ ನ್ಯಾಯಾಲಯಗಳು ನವೀಕರಿಸಿದ ಗ್ಯಾಜೆಟ್‌ಗಳೊಂದಿಗೆ ನಿಯೋಜಿತ ಭದ್ರತಾ ಘಟಕ ಹೊಂದಿರಬೇಕು, ಆಗ ಮಾತ್ರ ಜಿಲ್ಲಾ ನ್ಯಾಯಾಲಯಗಳ ಭದ್ರತೆ ಸಾಧ್ಯ. ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಭೇಟಿ ನೀಡುವ ನ್ಯಾಯಾಧೀಶರು ಮತ್ತು ದಾವೆದಾರರು ನ್ಯಾಯಾಲಯದಲ್ಲಿ ಸುರಕ್ಷಿತ ವಾತಾವರಣ ಹೊಂದಿರಬೇಕು. ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ, ನಡೆಯುತ್ತಿರುವ ಘಟನೆಗಳಿಂದಾಗಿ ದಾವೆದಾರರು, ವಕೀಲರು ಹಾಗೂ ನ್ಯಾಯಾಧೀಶರು ಸಹ ಭಯಭೀತರಾಗಿದ್ದಾರೆ” ಎಂದಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರೋಹಿಣಿ ನ್ಯಾಯಾಲಯದೊಳಗೆ ಗುಂಡಿನ ಚಕಮಕಿ ನಡೆದು ದರೋಡೆಕೋರ ಜಿತೇಂದರ್ ಗೋಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.
Kannada Bar & Bench
kannada.barandbench.com