ಗರ್ಭಪಾತದ ಹಕ್ಕು ಮಹಿಳೆಯದ್ದೇ ವಿನಾ ವೈದ್ಯಕೀಯ ಮಂಡಳಿಯದ್ದಲ್ಲ: ಬಾಂಬೆ ಹೈಕೋರ್ಟ್ ಚಾಟಿ

ಮಹಿಳೆಗೆ ಗರ್ಭಪಾತ ನಿರಾಕರಿಸುವುದು ಆಕೆ ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸಿದಂತೆ ಎಂದ ನ್ಯಾಯಾಲಯ.
pregnant woman and Bombay high court
pregnant woman and Bombay high court

ಮೂವತ್ಮೂರು ವಾರ ಮೀರಿದ ಗರ್ಭ ಧರಿಸಿದ್ದ  ಮಹಿಳೆಯೊಬ್ಬರ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್‌  ಅನುವು ಮಾಡಿಕೊಟ್ಟಿದ್ದು ಗರ್ಭಪಾತ ಮಾಡಿಸಿಕೊಳ್ಳದಂತೆ ಸಲಹೆ ನೀಡಿದ್ದ ವೈದ್ಯಕೀಯ ಮಂಡಳಿಯ ಶಿಫಾರಸನ್ನು ಅದು ತಿರಸ್ಕರಿಸಿತು [ಎಬಿಸಿ ಮತ್ತು ಮಹರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ವಯಸ್ಕ ವಿವಾಹಿತ ಮಹಿಳೆ ತಿಳಿವಳಿಕೆಯಿಂದಲೇ ಈನಿರ್ಧಾರ ಕೈಗೊಂಡಿದ್ದಾರೆ. ಇದು ಸುಲಭದ ಮಾತಲ್ಲ. ಕಾನೂನಿನ ಷರತ್ತುಗಳಿಗೆ ಒಳಪಟ್ಟಿದೆ ಎಂದ ಮೇಲೆ ಭ್ರೂಣ ತೆಗೆಸಿಕೊಳ್ಳಬೇಕೆ ಅಥವಾ ಗರ್ಭಧಾರಣೆ ಮುಂದುವರೆಸಬೇಕೆ ಎಂದು ಆಯ್ಕೆ ಮಾಡುವ ಹಕ್ಕು ಕೇವಲ ಅವರೊಬ್ಬರದ್ದೇ ಅಗಿದೆ. ಆಯ್ಕೆ ಮಾಡಿಕೊಳ್ಳುವ ಹಕ್ಕು ಅರ್ಜಿದಾರರದ್ದಾಗಿದ್ದು, ಅದು ವೈದ್ಯಕೀಯ ಮಂಡಳಿಯ ಹಕ್ಕಲ್ಲ. ಜೊತೆಗೆ ಕಾನೂನು ಪರಿಗಣನೆಯೊಳಗೆ ಬರುತ್ತಾರೆ ಎಂದು ಕಂಡಬಂದ ಮೇಲೆ ಅವರ ಹಕ್ಕುಗಳನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೂ ಹಕ್ಕಿಲ್ಲ” ಎಂದು ಅದು ಖಾರವಾಗಿ ಪ್ರತಿಕ್ರಿಯಿಸಿತು.

Also Read
ಸಮಾಜ ಈಗ ಕೇವಲ ʼಪರಿಪೂರ್ಣ ಮಕ್ಕಳನ್ನುʼ ಪಡೆಯಲು ಹೊರಟಿದೆಯೇ? ದೆಹಲಿ ಹೈಕೋರ್ಟ್ ಪ್ರಶ್ನೆ; ಮಹಿಳೆಯ ಗರ್ಭಪಾತಕ್ಕೆ ಅವಕಾಶ

“…ಅರ್ಜಿದಾರೆ ಮತ್ತು ಆಕೆಯ ಪತಿಯ ಸಾಮಾಜಿಕ- ಆರ್ಥಿಕ ಸ್ಥಿತಿಗತಿಯನ್ನು ವೈದ್ಯಕೀಯ ಮಂಡಳಿ ಪರಿಗಣಿಸಿಲ್ಲ. ವೈದ್ಯಕೀಯ ಮಂಡಳಿ ಹೇಳಿದಂತೆ ಅರ್ಜಿದಾರರು ಕೇಳಿದರೆ ಅರ್ಜಿದಾರರು ಅನುಭವಿಸಬೇಕಾದ ಬದುಕಿನ ಬಗ್ಗೆ ಊಹಿಸುವ ಪ್ರಯತ್ನವನ್ನೂ ಅದು ಮಾಡಿಲ್ಲ. ಗರ್ಭಪಾತದ ಅವಧಿ ಮೀರಿದೆ ಹಾಗಾಗಿ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ ಎಂಬ ಒಂದೇ ಅಂಶದ ಮೇಲೆ ವೈದ್ಯಕೀಯ ಮಂಡಳಿ ಕೆಲಸ ಮಾಡಿದೆ. ಅದು ನಮಗೆ ತಿಳಿದಿರುವಂತೆ ಒಂದು ಸರಳ ತಪ್ಪು. ಭ್ರೂಣದ ಗಂಭೀರ ಅಸಹಜತೆಯನ್ನು ಗಮನಿಸಿದಾಗ ಗರ್ಭಾವಸ್ಥೆ ಅಂತ್ಯಗೊಳಿಸುವ ಅವಧಿ ಅಪ್ರಸ್ತುತ ಎನಿಸುತ್ತದೆ” ಎಂದು ನ್ಯಾಯಾಲಯ ಹೇಳಿತು.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ 33 ವಾರಗಳ ಕಾಲ ಗರ್ಭಿಣಿಯಾಗಿದ್ದವರೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ನೀಡಿತ್ತು. ಅಲ್ಲದೆ, ಅಂತಹ ವಿಷಯಗಳಲ್ಲಿ ತಾಯಿಯ ಆಯ್ಕೆಯೇ ಅಂತಿಮ ಎಂಬ ಮಹತ್ವದ ತೀರ್ಪು ನೀಡಿತ್ತು.

Related Stories

No stories found.
Kannada Bar & Bench
kannada.barandbench.com