ಮರಾಠಿಯಲ್ಲಿ ತೀರ್ಪು ಪ್ರಕಟಿಸಲಾರಂಭಿಸಿದ ಬಾಂಬೆ ಹೈಕೋರ್ಟ್

ಅರ್ಥಮಾಡಿಕೊಳ್ಳುವ ಸೀಮಿತ ಉದ್ದೇಶಕ್ಕಾಗಿ ಅನುವಾದಿತ ತೀರ್ಪನ್ನು ಬಳಸಬಹುದೆ ವಿನಾ ನ್ಯಾಯಾಲಯದ ನಿರ್ದೇಶನಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಜಾರಿಗೊಳಿಸಲು ಅಲ್ಲ ಎಂದು ತೀರ್ಪಿನ ಪ್ರತಿಗಳಲ್ಲಿ ಸ್ಪಷ್ಟೀಕರಣ ನೀಡಲಾಗಿದೆ.
Bombay HC with Marathi
Bombay HC with Marathi

ತನ್ನ ಜಾಲತಾಣದಲ್ಲಿ ಮರಾಠಿ ಭಾಷೆಯಲ್ಲಿಯೇ ತೀರ್ಪುಗಳನ್ನು ಪ್ರಕಟಿಸಲು ಬಾಂಬೆ ಹೈಕೋರ್ಟ್‌ ಆರಂಭಿಸಿದೆ. ಮರಾಠಿಗೆ ಅನುವಾದಗೊಂಡಿರುವ ಈ ತೀರ್ಪಿನ ಪ್ರತಿಗಳನ್ನು ಪರಿಶೀಲಿಸಲು ನಾಗರಿಕರಿಗೆ ಪ್ರತ್ಯೇಕ ಮತ್ತು ವಿಶೇಷವಾದ ವಿಭಾಗವೊಂದನ್ನು ಜಾಲತಾಣದಲ್ಲಿ ರೂಪಿಸಲಾಗಿದೆ.

ತೀರ್ಪುಗಳನ್ನು ಜಾಲತಾಣದ ಮುಖಪುಟದಲ್ಲಿ ʼನಿವಾದಕ್‌ ನಿರ್ಣಯ್‌ʼ (ಆಯ್ದ ತೀರ್ಪುಗಳು) ವಿಭಾಗದಲ್ಲಿ ಈ ತೀರ್ಪುಗಳು ದೊರೆಯುತ್ತವೆ. ಸದ್ಯಕ್ಕೆ, ಫೆಬ್ರವರಿ 20ರಂದು ನೀಡಲಾದ ಮೂರು ತೀರ್ಪುಗಳನ್ನು ಪ್ರಕಟಿಸಲಾಗಿದೆ.

Orders in Marathi Language
Orders in Marathi Language
Also Read
ನಾಳೆ ಗಣರಾಜ್ಯೋತ್ಸವ ದಿನದಂದು ಪ್ರಾದೇಶಿಕ ಭಾಷೆಗಳಲ್ಲಿ 1,091 ಸುಪ್ರೀಂ ಕೋರ್ಟ್ ತೀರ್ಪುಗಳ ಬಿಡುಗಡೆ: ಸಿಜೆಐ

ಅರ್ಥಮಾಡಿಕೊಳ್ಳುವ ಸೀಮಿತ ಉದ್ದೇಶಕ್ಕಾಗಿ ಅನುವಾದಿತ ತೀರ್ಪನ್ನು ಬಳಸಬಹುದೆ ವಿನಾ ನ್ಯಾಯಾಲಯದ ನಿರ್ದೇಶನಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಜಾರಿಗೊಳಿಸಲು ಅಲ್ಲ ಎಂದು ತೀರ್ಪಿನ ಪ್ರತಿಗಳಲ್ಲಿ ಸ್ಪಷ್ಟೀಕರಣ ನೀಡಲಾಗಿದೆ.

Also Read
ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲಾರಂಭಿಸಿದ ಕೇರಳ ಹೈಕೋರ್ಟ್

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಜನವರಿ 25ರಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಹೊಸ ಸೇವೆ ಆರಂಭಿಸಿದ್ದರು. ಮರಾಠಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಇದುವರೆಗೆ 2,900 ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅನುವಾದಿಸಲಾಗಿತ್ತು.

ಕೆಲ ದಿನಗಳ ಹಿಂದೆ ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ಹೈಕೋರ್ಟ್‌ ತನ್ನ ಎರಡು ತೀರ್ಪುಗಳನ್ನು ರಾಜ್ಯಭಾಷೆಯಾದ ಮಲಯಾಳಂನಲ್ಲಿ ಪ್ರಕಟಿಸಿತ್ತು. ಇಂತಹ ಪ್ರಯತ್ನ ಕರ್ನಾಟಕದಲ್ಲೂ ನಡೆಯುತ್ತಿದ್ದು ಸದ್ಯದಲ್ಲಿಯೇ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ.

Related Stories

No stories found.
Kannada Bar & Bench
kannada.barandbench.com