ಕೋಕಾ ಕೋಲಾದಿಂದ ₹2,500 ಕೋಟಿ ಜಿಎಸ್‌ಟಿ ವಸೂಲಿಗೆ ಬಾಂಬೆ ಹೈಕೋರ್ಟ್ ತಡೆ

ಸುಮಾರು ಏಳು ತೆರಿಗೆ ನಿರ್ಧರಣಾ ವರ್ಷಗಳಲ್ಲಿ ತಾನು ಕಡಿಮೆ ಪ್ರಮಾಣದಲ್ಲಿ ಸರಕುಗಳ ಪೂರೈಕೆ ಮಾಡಿರುವುದಾಗಿ ಕೋಕಾ ಕೋಲಾ ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಜಿಎಸ್‌ಟಿ ವಸೂಲಿಗೆ ನಿರ್ಧರಿಸಲಾಗಿತ್ತು.
Coca Cola
Coca Cola
Published on

ಬಹುರಾಷ್ಟ್ರೀಯ ತಂಪು ಪಾನೀಯ ತಯಾರಿಕೆ ಕಂಪೆನಿ ಹಿಂದೂಸ್ಥಾನ್‌ ಕೋಕಾ ಕೋಲಾ ಬಿವರೇಜಸ್ ಪ್ರೈವೇಟ್ ಲಿಮಿಟೆಡ್‌ನಿಂದ ಸುಮಾರು ₹2,500 ಕೋಟಿ ಜಿಎಸ್‌ಟಿ ವಸೂಲಿ ಮಾಡುವ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ [ಕಂಪೆನಿ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ಪ್ರೈವೇಟ್ ಲಿಮಿಟೆಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸುಮಾರು ಏಳು ತೆರಿಗೆ ನಿರ್ಧರಣಾ ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸರಕುಗಳ ಪೂರೈಕೆ ಮಾಡಿರುವುದಾಗಿ ಕೋಕಾ ಕೋಲಾ ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಜಿಎಸ್‌ಟಿ ವಸೂಲಿಗೆ ನಿರ್ಧರಿಸಲಾಗಿತ್ತು.

Also Read
ಕೋಕ್- ಕುಕ್ ʼಕೋಲಾʼಹಲ: ಮಧ್ಯಸ್ಥಿಕೆಯ ಮಾರ್ಗ ತೋರಿದ ದೆಹಲಿ ಹೈಕೋರ್ಟ್

ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದಿನ ವಹಿವಾಟು ಆಧರಿಸಿ ವಿತರಕರಿಗೆ ಹೆಚ್ಚಿನ ರಿಯಾಯಿತಿ ನೀಡುವ ಕಂಪನಿಯ ಕ್ರಮ ಜಿಎಸ್‌ಟಿ ನಿಯಮಾವಳಿಗಳನ್ನು ಉಲ್ಲಂಘಿಸುವ ಮತ್ತು ತೆರಿಗೆ ಹೊಣೆಗಾರಿಕೆಗಳನ್ನು ತಪ್ಪಿಸುವ ಪ್ರಯತ್ನವಾಗಿದೆ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದರು.

ಕಂದಾಯ ಅಧಿಕಾರಿಗಳ ತಾರ್ಕಿಕತೆ ಪ್ರಾಥಮಿಕವಾಗಿ ತಪ್ಪಾಗಿದೆ ಎಂದ ನ್ಯಾಯಮೂರ್ತಿಗಳಾದ ಬಿ ಪಿ ಕೊಲಾಬ್‌ವಾಲಾ ಮತ್ತು ಫಿರ್ದೋಷ್ ಪಿ. ಪೂನಿವಾಲಾ ಅವರಿದ್ದ ಪೀಠ ಕಂಪನಿಗೆ ಮಧ್ಯಂತರ ಪರಿಹಾರ ನೀಡಿತು.

Also Read
ಕೋಕಾ ಕೋಲಾ, ಪೆಪ್ಸಿಕೋ ಬಾಟ್ಲಿಂಗ್ ಘಟಕಗಳಿಗೆ ₹ 25 ಕೋಟಿ ದಂಡ: ಎನ್‌ಜಿಟಿ ಆದೇಶಕ್ಕೆ ಸುಪ್ರೀಂ ತಡೆ

"ಮೇಲ್ನೋಟಕ್ಕೆ ಈ ತಾರ್ಕಿಕತೆ ಸರಿಯೆಂದು ನಮಗೆ ಅನಿಸುತ್ತಿಲ್ಲ" ಎಂದ ನ್ಯಾಯಾಲಯ ಏಪ್ರಿಲ್ 1ರಂದು ನೀಡಿದ ಆದೇಶದಲ್ಲಿ ತೆರಿಗೆ ವಸೂಲಿಗೆ ತಡೆ ನೀಡಿದೆ.

ಪೂರೈಕೆಯ ಮೌಲ್ಯದ ಲೆಕ್ಕಾಚಾರವು ಯಾವುದೇ ರಿಯಾಯಿತಿಯನ್ನು ಒಳಗೊಂಡಿರಬಾರದು ಎಂದು ಹೇಳುವ ಸಿಜಿಎಸ್‌ಟಿ ಕಾಯಿದೆಯ ಸೆಕ್ಷನ್ 15(3)(a) ರ ಆದಾಯದ ವ್ಯಾಖ್ಯಾನ  ದೋಷಪೂರಿತವಾಗಿದ್ದು ಮತ್ತು ಕಾಯಿದೆಯ ಸೆಕ್ಷನ್ 15(1) ರ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಹಿಂದೂಸ್ಥಾನ್‌ ಕೋಕಾ ಕೋಲಾ ಕೋರಿಕೆಯಂತೆ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿತು.

Kannada Bar & Bench
kannada.barandbench.com