[ಚುಟುಕು] ಸಿಆರ್‌ಪಿಸಿ ಅಡಿ ಬಾಲಾಪರಾಧಿಗೆ ನಿರೀಕ್ಷಣಾ ಜಾಮೀನು: ಪರಿಶೀಲಿಸಲಿದೆ ಕಲ್ಕತ್ತಾ ಹೈಕೋರ್ಟ್ ವಿಸ್ತೃತ ಪೀಠ

Justice Arijit Banerjee and Justice Bivas Pattanayak

Justice Arijit Banerjee and Justice Bivas Pattanayak

ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನೊಬ್ಬ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 438ರ ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದನ್ನು ವಿಸ್ತೃತ ಪೀಠ ನಿರ್ಧರಿಸಲಿದೆ ಎಂದು ಕಲ್ಕತ್ತಾ ಹೈಕೋರ್ಟ್‌ ವಿಭಾಗೀಯ ಪೀಠ ತಿಳಿಸಿದೆ. ತಾನು ನೀಡುವ ತೀರ್ಪು ಈ ಹಿಂದೆ ಸಮನ್ವಯ ಪೀಠಗಳು ನೀಡಿದ್ದ ತೀರ್ಪಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ತಿಳಿಸಿರುವ ನ್ಯಾ. ಅರಿಜಿತ್‌ ಬ್ಯಾನರ್ಜಿ ಮತ್ತು ನ್ಯಾ. ಬಿಸ್ವಾಸ್‌ ಪಟ್ನಾಯಕ್‌ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಸಲ್ಲಿಸುವಂತೆ ಸೂಚಿಸಿತು. ಸಿಆರ್‌ಪಿಸಿ ಅಡಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ನಾಲ್ವರು ಅಪ್ರಾಪ್ತರು ಸಲ್ಲಿಸಿದ್ದ ಮೇಲ್ಮನವಿ ಇದಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com