ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 401ರ ಅಡಿ ದೊರೆತಿರುವ ಪರಿಷ್ಕರಣಾ ಅಧಿಕಾರದಡಿ ಅಪರಾಧಿಯನ್ನು ಖುಲಾಸೆ ಮಾಡಿರುವುದನ್ನು ಶಿಕ್ಷೆಯಾಗಿ ಮಾರ್ಪಡಿಸುವುದರಿಂದ ಹೈಕೋರ್ಟ್ ಅಧಿಕಾರವನ್ನು ನಿರ್ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ತೀರ್ಪುಗಳನ್ನು ಪರಿಗಣಿಸಿದ ಬಳಿಕ ಮತ್ತು ಸಿಆರ್‌ಪಿಸಿ ಸೆಕ್ಷನ್ 401, ಕಲಂ 3ರ ಅಡಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಂಜೀವ್ ಖನ್ನಾ ನೇತೃತ್ವದ ವಿಭಾಗೀಯ ಪೀಠವು “ಅಪರಾಧಿಯ ಖುಲಾಸೆಯನ್ನು ಮಾರ್ಪಡಿಸುವುದರಿಂದ ಹೈಕೋರ್ಟ್ ಅನ್ನು ಸಿಆರ್‌ಪಿಸಿ ಸೆಕ್ಷನ್ 401, ಕಲಂ 3 ನಿಯಂತ್ರಿಸುತ್ತದೆ” ಎಂದು ಹೇಳಿದೆ.
“ವಾಸ್ತವಿಕ ಅಂಶಗಳನ್ನು ಪರಿಗಣಿಸಿ, ಸಂತ್ರಸ್ತರಿಗೆ ಸಿಆರ್‌ಪಿಸಿ ಸೆಕ್ಷನ್ 372ರ ನಿಬಂಧನೆಯ ಅಡಿ ಮೇಲ್ಮನವಿ ಸಲ್ಲಿಸುವ ಶಾಸನಬದ್ಧ ಹಕ್ಕು ಇರುತ್ತದೆ. ಪರಿಷ್ಕರಣಾ ಮನವಿಯನ್ನು ಸೆಕ್ಷನ್ 372ರ ಪ್ರಕಾರ ಮೇಲ್ಮನವಿ ಎಂದು ಪರಿಗಣಿಸುವಂತೆ ಪ್ರಕರಣವನ್ನು ಹೈಕೋರ್ಟ್‌ಗೆ ಮರಳಿಸುವುದು ಸೂಕ್ತ ಎಂದು ನಮಗನ್ನಿಸುತ್ತದೆ. ಅಲ್ಲದೇ, ಅರ್ಹತೆಯ ಆಧಾರದಲ್ಲಿ ಕಾನೂನಿನ ಅನುಸಾರ ಅದನ್ನು ನಿರ್ಧರಿಸಬಹುದಾಗಿದೆ. ಮೇಲ್ಮನವಿ ನ್ಯಾಯಾಲಯವು ಪರಿಷ್ಕರಣಾ ನ್ಯಾಯಾಲಯಕ್ಕಿಂತ ವಿಸ್ತೃತ ವ್ಯಾಪ್ತಿ ಮತ್ತು ಅಧಿಕಾರವನ್ನು ಹೊಂದಿರುವುದರಿಂದ ಹಾಗೂ ಸಂತ್ರಸ್ತರು ಮತ್ತು ಆರೋಪಿಗಳ ಹಿತಾಸಕ್ತಿಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ” ಎಂದು ನ್ಯಾಯಾಲಯವು ಹೇಳಿದೆ.
ಪ್ರಕರಣದ ಪೂರ್ಣ ವಿವರಗಳಿಗೆ ಬಾರ್ ಅಂಡ್ ಬೆಂಚ್ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ