[ಕ್ಯಾನ್ಫಿನಾ ಹಗರಣ] ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಲು ಷೇರು ದಲ್ಲಾಳಿ ಕೇತನ್ ಪಾರೇಖ್‌ಗೆ ಅನುಮತಿ

ಜನವರಿ 27, 2022 ರಿಂದ 2022 ರ ಫೆಬ್ರವರಿ ಅಂತ್ಯದವರೆಗೆ ಪಾರೇಖ್ ಅವರ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಆದೇಶಿಸಿತು.
Ketan Parekh and Supreme Court
Ketan Parekh and Supreme Court
Published on

ತಮ್ಮ ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ಕ್ಯಾನ್ಫಿನಾ ಮ್ಯೂಚುವಲ್ ಫಂಡ್ ಹಗರಣದಲ್ಲಿ ದೋಷಿಯಾಗಿರುವ ಷೇರು ದಲ್ಲಾಳಿ ಕೇತನ್ ಪಾರೇಖ್ ಅವರು ಇಂಗ್ಲೆಂಡ್‌ಗೆ ತೆರಳಲು ಸುಪ್ರೀಂಕೋರ್ಟ್‌ ಸೋಮವಾರ ಅನುಮತಿ ನೀಡಿದೆ.

ಜನವರಿ 27, 2022 ರಿಂದ 2022 ರ ಫೆಬ್ರವರಿ ಅಂತ್ಯದವರೆಗೆ ಪಾರೇಖ್ ಅವರ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ಪೀಠ ಆದೇಶಿಸಿತು. ಏಳನೇ ಬಾರಿಗೆ ಅವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡಲಾಗುತ್ತಿದೆ.

Also Read
ಪ್ರೊ. ಭಗವಾನ್‌ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ವಿಳಂಬ: ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌

"ತಮ್ಮ ಮಗಳ ವೈದ್ಯಕೀಯ ಅಗತ್ಯ ಪೂರೈಸಲು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅರ್ಜಿದಾರರು ಬಯಸುತ್ತಾರೆ. ಅರ್ಜಿದಾರರಿಗೆ ಹಲವಾರು ಸಂದರ್ಭಗಳಲ್ಲಿ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಹಿಂದಿನ ಆರು ಸಂದರ್ಭಗಳಲ್ಲಿ ಅವರು ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಈಗ ಅವಕಾಶ ನೀಡುವ ಮೂಲಕ ಸಮತೋಲಿತ ನ್ಯಾಯ ಒದಗಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಅರ್ಜಿದಾರರು ಜನವರಿ 27, 2022 ರಿಂದ ಫೆಬ್ರವರಿ 2022 ರ ಅಂತ್ಯದವರೆಗೆ ವಿದೇಶಕ್ಕೆ ಪ್ರಯಾಣಿಸಬಹುದು” ಎಂದು ನ್ಯಾಯಾಲಯ ಹೇಳಿತು. ವಿದೇಶಕ್ಕೆ ತೆರಳಲು ಈ ಹಿಂದೆ ವಿಧಿಸಿದ್ದ ಷರತ್ತು ಈ ಪ್ರಕರಣಕ್ಕೂ ಅನ್ವಯವಾಗಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ರೂ. 47 ಕೋಟಿ ಸಾರ್ವಜನಿಕ ಹಣ ದುರುಪಯೋಗ ಮಾಡಿಕೊಂಡ 1992ರ ಮ್ಯೂಚುವಲ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ 2008ರಲ್ಲಿ ಪಾರೇಖ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. ನಂತರ ಅವರಿಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿತ್ತು.

Kannada Bar & Bench
kannada.barandbench.com