ಮೂರು ತಿಂಗಳಲ್ಲಿ ಶೇ.79ರಷ್ಟು ಪ್ರಕರಣ ಇತ್ಯರ್ಥಪಡಿಸಿದ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್‌ ಸಾಧನೆ ಶೇ.74

ಮಾರ್ಚ್‌ನಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 2,97,622 ಪ್ರಕರಣ ಸ್ವೀಕರಿಸಲ್ಪಿಟ್ಟಿದ್ದು, ಬಾಕಿ ಪ್ರಕರಣ ಸೇರಿದಂತೆ 4,17,935 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಹೀಗಾಗಿ ಅದೊಂದೇ ತಿಂಗಳಲ್ಲಿ ಗರಿಷ್ಠ ಶೇ.140.42ರಷ್ಟು ಸಾಧನೆಯಾಗಿದೆ.
Karnataka HC
Karnataka HC

ಕೋವಿಡ್‌ ಆತಂಕದ ನಂತರ ನ್ಯಾಯಾಲಯದ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದ್ದು, ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲಿ ಮೂರು ಪೀಠಗಳನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಕ್ರಮವಾಗಿ ಸರಾಸರಿ ಶೇ.74 ಮತ್ತು ಶೇ.79ರಷ್ಟು ಪ್ರಕರಣಗಳು ಇತ್ಯರ್ಥಗೊಂಡಿವೆ.

ಬೆಂಗಳೂರು ಪ್ರಧಾನ ಪೀಠ ಹಾಗೂ ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಜನವರಿಯಲ್ಲಿ ಒಟ್ಟು 8,440 ಪ್ರಕರಣಗಳು ದಾಖಲಾಗಿದ್ದು, 5,963 ಪ್ರಕರಣಗಳು ಇತ್ಯರ್ಥವಾಗಿರುವುದರಿಂದ ಶೇ. 70.65 ಸಾಧನೆಯಾಗಿದೆ. ಫೆಬ್ರವರಿಯಲ್ಲಿ 10,106 ಮನವಿಗಳು ವಿಚಾರಣೆಗೆ ಸ್ವೀಕೃತವಾಗಿದ್ದು, 7,060 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಶೇ. 69.86 ರಷ್ಟು ಸಾಧನೆಯಾಗಿದೆ. ಮಾರ್ಚ್‌ನಲ್ಲಿ 9,590 ಪ್ರಕರಣ ದಾಖಲಾಗಿದ್ದು, 8,087 ಪ್ರಕರಣಗಳನ್ನು ಇತ್ಯರ್ಥಪಡಿಸಿ ಅತಿಹೆಚ್ಚು ಶೇ. 84.33ರಷ್ಟು ಸಾಧನೆ ಮಾಡಲಾಗಿದೆ.

ಇದೇ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕ್ರಮವಾಗಿ 85,989, 1,93,030 ಮತ್ತು 2,97,622 ಪ್ರಕರಣಗಳು ಸ್ವೀಕರಿಸಲ್ಪಿಟ್ಟಿದ್ದು, ಅನುಕ್ರಮವಾಗಿ 55,456, 64,621 ಮತ್ತು 4,17,935 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಂತೆಯೇ ಜನವರಿಯಲ್ಲಿ ಶೇ. 64.49, ಫೆಬ್ರವರಿಯಲ್ಲಿ ಶೇ. 33.47 ಮತ್ತು ಕಳೆದ ಮಾರ್ಚ್‌ನಲ್ಲಿ ಗರಿಷ್ಠ ಶೇ. 140.42 ರಷ್ಟು ಸಾಧನೆಯಾಗಿದೆ.

Also Read
ಯೂಟ್ಯೂಬ್‌ನಲ್ಲಿ ಹಿಜಾಬ್ ಕಲಾಪ: ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್‌

ದೇಶಾದ್ಯಂತ ಬಾಕಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬ ಚರ್ಚೆ ನಡೆಯುತ್ತಿರುತ್ತದೆ. ಕೋವಿಡ್‌ ಕಾಲಘಟ್ಟವು ಈ ಬಾಧೆಯನ್ನು ಹೆಚ್ಚಿಸಿದೆ. ನ್ಯಾಯಾಂಗದಲ್ಲಿ ಡಿಜಿಟಲ್‌ ಸೌಲಭ್ಯದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ನಡುವೆಯೇ ಕರ್ನಾಟಕ ಹೈಕೋರ್ಟ್‌ “ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021” ಅನ್ನು ಜಾರಿ ಮಾಡಿದೆ. ಈ ಮೂಲಕ ನ್ಯಾಯಾಲಯದ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ.

Related Stories

No stories found.
Kannada Bar & Bench
kannada.barandbench.com