ಇದು ಬ್ರೇಕಪ್‌ನಲ್ಲಿ ಕೊನೆಯಾಗುವ ಲೈಂಗಿಕ ಸಂಬಂಧ: ಅತ್ಯಾಚಾರ ಕುರಿತ ಎಫ್ಐಆರ್ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಪಕ್ಷಕಾರರ ನಡುವೆ ನಡೆದಿರುವ ವಾಟ್ಸಾಪ್ ಸಂದೇಶವನ್ನು ಆಧರಿಸಿ ನ್ಯಾಯಾಲಯ ಸಂತ್ರಸ್ತೆಯ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿತು.
Rajasthan High court

Rajasthan High court

ಸಮ್ಮತಿಯ ಲೈಂಗಿಕ ಕ್ರಿಯೆ ಕಾರಣಕ್ಕೆ ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ ಅತ್ಯಾಚಾರ ಆರೋಪಿಯೊಬ್ಬನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸಿದೆ. [ರಾಧಾಕೃಷ್ಣನ್ ಮೀನಾ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].

ಅತ್ಯಾಚಾರದ ಯಾವುದೇ ಕೃತ್ಯ ನಡೆದಿಲ್ಲ ಎಂದ ನ್ಯಾ ಫರ್ಜಂದ್‌ ಅಲಿ, ಸಂತ್ರಸ್ತೆ ಎರಡು ವರ್ಷಗಳ ಕಾಲ ಅರ್ಜಿದಾರರೊಂದಿಗೆ ಲೈಂಗಿಕ ಸಂಬಂಧ ಮುಂದುವರೆಸಿದ್ದರು ಎಂದು ಹೇಳಿದರು.

Also Read
ಕಳೆದ ವರ್ಷ ದೇಶದ ವಿಚಾರಣಾ ನ್ಯಾಯಾಲಯಗಳು ವಿಧಿಸಿದ ಮರಣದಂಡನೆ ಶಿಕ್ಷೆಯ ಸಂಖ್ಯೆ144; ಶೇ. 54 ಲೈಂಗಿಕ ಅಪರಾಧ ಪ್ರಕರಣಗಳು

ಎಫ್‌ಐಆರ್‌ ದಾಖಲಿಸುವಲ್ಲಿ ವಿಳಂಬ ಮತ್ತು ಪಕ್ಷಕಾರರ ನಡುವೆ ನಡೆದಿರುವ ವಾಟ್ಸಾಪ್‌ ಸಂದೇಶವನ್ನು ಆಧರಿಸಿ ನ್ಯಾಯಾಲಯ ಸಂತ್ರಸ್ತೆಯ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿತು.“ಬ್ರೇಕಪ್‌ನಲ್ಲಿ ಅಂತ್ಯ ಕಾಣುವ ಹುಡುಗ ಹುಡುಗಿಯ ಲೈಂಗಿಕ ಸಂಬಂಧದ ವಾಡಿಕೆಯ ಪ್ರಕರಣ ಇದು” ಎಂದು ಅದು ಅಭಿಪ್ರಾಯಪಟ್ಟಿತು.

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಅರ್ಜಿದಾರರು ಈ ಎಫ್‌ಐಆರ್‌ ಅನ್ನು ಉತ್ಪ್ರೇಕ್ಷಿತ ಎಂದು ಆರೋಪಿಸಿ ರದ್ದುಗೊಳಿಸಲು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com