ಅಕ್ರಮ ಆಸ್ತಿ ಗಳಿಕೆ: ದೆಹಲಿ ನ್ಯಾಯಾಧೀಶೆ ರಚನಾ ಲಖನ್‌ಪಾಲ್‌ ಅವರನ್ನು ಬಂಧಿಸಿದ ಸಿಬಿಐ

ಭ್ರಷ್ಟಾಚಾರ ತಡೆ ಕಾಯಿದೆಯಡಿ ಸಾರ್ವಜನಿಕ ಸೇವಕರು ಕ್ರಿಮಿನಲ್ ದುಷ್ಕೃತ್ಯ ಎಸಗಿದ ಆರೋಪದಡಿ ನವದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ (ಪಶ್ಚಿಮ) ರಚನಾ ಅವರನ್ನು, ಬಂಧಿಸಲಾಗಿದೆ.
ಅಕ್ರಮ ಆಸ್ತಿ ಗಳಿಕೆ: ದೆಹಲಿ ನ್ಯಾಯಾಧೀಶೆ ರಚನಾ ಲಖನ್‌ಪಾಲ್‌ ಅವರನ್ನು ಬಂಧಿಸಿದ ಸಿಬಿಐ
A1

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಧೀಶೆ ರಚನಾ ತಿವಾರಿ ಲಖನ್‌ಪಾಲ್ ಮತ್ತು ಅವರ ಪತಿ ಅಲೋಕ್ ಲಖನ್‌ಪಾಲ್ ಅವರನ್ನು ಸಿಬಿಐ ಬಂಧಿಸಿದೆ.

ಭ್ರಷ್ಟಾಚಾರ ತಡೆ ಕಾಯಿದೆಯಡಿ ಸಾರ್ವಜನಿಕ ಸೇವಕರು ಕ್ರಿಮಿನಲ್ ದುಷ್ಕೃತ್ಯ ಎಸಗಿದ ಆರೋಪದಡಿ ನವದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ (ಪಶ್ಚಿಮ) ರಚನಾ ಅವರನ್ನು ಬಂಧಿಸಲಾಗಿದೆ.

Also Read
ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ: ಇಬ್ಬರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದ ಜಾರ್ಖಂಡ್ ನ್ಯಾಯಾಲಯ

ವಕೀಲರಾಗಿದ್ದ ತಮ್ಮ ಪತಿ ಹೆಸರಿನಲ್ಲಿ ಜುಲೈ 2006ರಿಂದ ಸೆಪ್ಟೆಂಬರ್ 2016ರವರೆಗೆ ನ್ಯಾ. ರಚನಾ ಅಪಾರ ಆಸ್ತಿ ಕಬಳಿಸಿದ್ದಾರೆ. ಈ ಅವಧಿಯಲ್ಲಿ ಇಬ್ಬರೂ ₹ 2.99 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಎಫ್‌ಐಆರ್‌ ತಿಳಿಸಿದೆ. ತನಿಖೆ ವೇಳೆ ಮನೆಯಲ್ಲಿ ದಾಖಲೆಗಳಿಲ್ಲದೆ ₹ 9,40,990 ದೊರೆತಿದ್ದು ಅದರ ಬಗ್ಗೆ ರಚನಾ ಇಲಾಖೆಗೆ ತಿಳಿಸಿಲ್ಲ. ತಮ್ಮ ನೂತನ ಮನೆಯ ನಿಜವಾದ ಮೌಲ್ಯವನ್ನೂ ಅವರು ಮರೆಮಾಚಿದ್ದಾರೆ. ಅಲ್ಲದೆ ತಮ್ಮ ಮತ್ತು ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಸಂಪಾದನೆಯಲ್ಲಿ ರಚನಾ ಅವರ ಪತಿ ಅಲೋಕ್‌ ತೊಡಗಿದ್ದರು. ಸೆಕ್ಷನ್ 109ರ ಅಡಿಯಲ್ಲಿ ಅಪರಾಧಕ್ಕೆ ಕುಮ್ಮಕ್ಕು ನೀಡುವುದಕ್ಕೆ ಅವರು ಹೊಣೆಗಾರರಾಗಿದ್ದಾರೆ ಎಂದು ವಿವರಿಸಲಾಗಿದೆ.

2016ರಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಆಕೆ ಮತ್ತು ಅವರ ಪತಿಯನ್ನು ಬಂಧಿಸಲಾಗಿತ್ತು. ನಂತರ ನ್ಯಾ. ರಚನಾ ಜಾಮೀನು ಪಡೆದಿದ್ದರು.

Related Stories

No stories found.
Kannada Bar & Bench
kannada.barandbench.com