ದೇಶವನ್ನು ತೊರೆಯದಂತೆ ಅಕಾರ್‌ ಪಟೇಲ್‌ಗೆ ನಿರ್ದೇಶಿಸಿದ ಸಿಬಿಐ ನ್ಯಾಯಾಲಯ; ಸಿಬಿಐ ನಿರ್ದೇಶಕರ ಕ್ಷಮಾಪಣೆಗೆ ತಡೆ

ಎಸಿಎಂಎಂ ನ್ಯಾಯಾಧೀಶರು ಗುರುವಾರ ಲುಕ್‌ಔಟ್‌ ಸುತ್ತೋಲೆಯನ್ನು ಬದಿಗೆ ಸರಿಸಿದ್ದ ಆದೇಶದ ವಿರುದ್ಧ ಸಿಬಿಐ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
CBI and Aakar Patel
CBI and Aakar Patel

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಭಾರತ ಘಟಕದ ಮಾಜಿ ಅಧ್ಯಕ್ಷ ಆಕಾರ್‌ ಪಟೇಲ್‌ ಅವರಿಗೆ ತನ್ನ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಅಲ್ಲದೆ, ಸಿಬಿಐ ನಿರ್ದೇಶಕರು ಆಕಾರ್‌ ಪಟೇಲ್‌ ಅವರಿಗೆ ಕ್ಷಮಾಪಣೆ ಪತ್ರ ಬರೆಯಬೇಕು ಎಂದು ಸೂಚಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪವನ್‌ ಕುಮಾರ್‌ ಅವರ ಆದೇಶಕ್ಕೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಸ್ನೇಹಿ ಮನ್‌ ಅವರು ತಡೆಯಾಜ್ಞೆ ನೀಡಿದ್ದಾರೆ.

ಆಕಾರ್ ಪಟೇಲ್‌ ಅವರ ವಿರುದ್ಧ ಹೊರಡಿಸಲಾಗಿದ್ದ ಲುಕ್‌ಔಟ್‌ ಸುತ್ತೋಲೆಯನ್ನು ಎಸಿಎಂಎಂ ನ್ಯಾಯಾಧೀಶರು ಗುರುವಾರ ಬದಿಗೆ ಸರಿಸಿದ್ದರು. ಇದರ ವಿರುದ್ಧ ಸಿಬಿಐ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇ‍ಷ ನ್ಯಾಯಾಲಯ ನಡೆಸಿತು.

Also Read
ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಆಕಾರ್‌; ನ್ಯಾಯಾಲಯದ ಆದೇಶದ ಹೊರತಾಗಿಯೂ ಮತ್ತೆ ಪ್ರಯಾಣಕ್ಕೆ ತಡೆ

ಪಟೇಲ್‌ ಅವರನ್ನು ಏಪ್ರಿಲ್‌ 6ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕಕ್ಕೆ ಹೋಗುವುದರಿಂದ ತಡೆಯಲಾಗಿತ್ತು. ಇದರ ವಿರುದ್ಧ ಅವರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com