ಏರ್ ಇಂಡಿಯಾ ತೆಕ್ಕೆಗೆ ಏರ್ ಏಷ್ಯಾ ಇಂಡಿಯಾ: ಸಿಸಿಐ ಅನುಮೋದನೆ

ಏರ್ ಏಷ್ಯಾ ಇಂಡಿಯಾವು ಟಾಟಾ ಮತ್ತು ಏರ್ ಏಷ್ಯಾ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದ್ದು ಏರ್ ಏಷ್ಯಾ ಇಂಡಿಯಾ ಪ್ರಸ್ತುತ 83.67% ಬಂಡವಾಳ ಹೊಂದಿದೆ.
ಏರ್ ಇಂಡಿಯಾ ತೆಕ್ಕೆಗೆ ಏರ್ ಏಷ್ಯಾ ಇಂಡಿಯಾ: ಸಿಸಿಐ ಅನುಮೋದನೆ
A1
Published on

ಏರ್ ಏಷ್ಯಾ ಇಂಡಿಯಾದ ಸಂಪೂರ್ಣ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಏರ್‌ ಇಂಡಿಯಾಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಅನುಮೋದನೆ ನೀಡಿದೆ.

ಏರ್‌ ಇಂಡಿಯಾ ಏಷ್ಯಾದ ಸಂಪೂರ್ಣ ಷೇರು ಬಂಡವಾಳವನ್ನು ಟಾಟಾ ಸನ್ಸ್‌ ಪ್ರೈ ಲಿಮಿಟೆಡ್‌ನ ಪರೋಕ್ಷ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಏರ್‌ ಇಂಡಿಯಾ ಲಿಮಿಟೆಡ್‌ ಸ್ವಾಧೀನಪಡಿಸಿಕೊಳ್ಳುವುದು ಎಂದು ಸಿಸಿಐನ ಪತ್ರಿಕಾ ಪ್ರಕಟಣೆ ತಿಳಿಸಿದೆ.

Also Read
ಏರ್‌ ಇಂಡಿಯಾ ಹೂಡಿಕೆ ಹಿಂತೆಗೆತ ಪ್ರಶ್ನಿಸಿದ್ದ ಉದ್ಯೋಗಿಗಳ ಒಕ್ಕೂಟದ ಮನವಿ ವಜಾ ಮಾಡಿದ ಮದ್ರಾಸ್‌ ಹೈಕೋರ್ಟ್‌

ಹರಾಜಿನಲ್ಲಿ ₹18,000 ಕೋಟಿ ಮೊತ್ತಕ್ಕೆ ಟಾಟಾ ಸನ್ಸ್‌ 2021ರ ಅಕ್ಟೋಬರ್‌ನಲ್ಲಿ ಏರ್‌ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿತ್ತು. ಏರ್ ಏಷ್ಯಾ ಇಂಡಿಯಾವು ಟಾಟಾ ಮತ್ತು ಏರ್ ಏಷ್ಯಾ ಇನ್ವೆಸ್ಟ್‌ಮೆಂಟ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದ್ದು ಇದರಲ್ಲಿ ಟಾಟಾ ಸನ್ಸ್‌ ಪಾಲು 83.67% ಆಗಿದ್ದು, ಏರ್‌ ಇಂಡಿಯಾದ ಶೇ 16.33 ಪಾಲು ಹೊಂದಿದೆ.

ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಲು ಸಿಸಿಐ ಅನುಮೋದನೆ ಅಗತ್ಯವಾಗಿರುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ-ವಿರೋಧಿ ಪ್ರಕ್ರಿಯೆಗಳನ್ನು ಪರಿಶೀಲಿಸುವಾಗ ಸ್ಪರ್ಧೆಯನ್ನು ಬೆಳೆಸಲು ಪೂರ್ವ-ಅವಶ್ಯಕತೆಯನ್ನು ಪರಿಗಣಿಸಲಾಗುತ್ತದೆ.

ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ಓದಿ:

Attachment
PDF
press_release_CCI_Air_Asia.pdf
Preview
Kannada Bar & Bench
kannada.barandbench.com