ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸಿ ಎಂ ಪೂಣಚ್ಚ ನೇಮಕಾತಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪೂಣಚ್ಚ ಅವರ ಹೆಸರನ್ನು 2021ರ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಆದರೆ, ಆ ಕಡತವನ್ನು ಕೇಂದ್ರ ಸರ್ಕಾರವು ಕೊಲಿಜಿಯಂಗೆ ಮರಳಿಸಿತ್ತು.
Justice Cheppudira Monnappa Poonacha
Justice Cheppudira Monnappa Poonacha

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲ ಸಿ ಎಂ ಪೂಣಚ್ಚ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಎರಡು ವರ್ಷಗಳ ಅವಧಿಗೆ ಪೂಣಚ್ಚ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪೂಣಚ್ಚ ಅವರ ಹೆಸರನ್ನು 2021ರ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಆದರೆ, ಆ ಕಡತವನ್ನು ಕೇಂದ್ರ ಸರ್ಕಾರವು ಕೊಲಿಜಿಯಂಗೆ ಮರಳಿಸಿತ್ತು. ಆದರೆ, ಕೊಲಿಜಿಯಂ ಮತ್ತೊಮ್ಮೆ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು.

ಸದ್ಯ ಮುಖ್ಯ ನ್ಯಾಯಮೂರ್ತಿ ಸೇರಿ 44 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದು, ಪೂಣಚ್ಚ ಅವರ ನೇಮಕಾತಿಯಿಂದ ನ್ಯಾಯಮೂರ್ತಿಗಳ ಸಂಖ್ಯೆ 45ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿ ಹುದ್ದೆಗಳು ಮಂಜೂರಾಗಿವೆ.

Related Stories

No stories found.
Kannada Bar & Bench
kannada.barandbench.com