ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ನಿಯಮಾವಳಿ- 2022 ಪ್ರಕಟಿಸಿದ ಕೇಂದ್ರ

ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ಕಾಯಿದೆಯ ನಿಯಮಗಳು ದೈಹಿಕ ಮತ್ತು ಜೈವಿಕ ಮಾದರಿ ಸಂಗ್ರಹ ಮಾಡುವುದನ್ನು ವಿವರಿಸಲಿದ್ದು ಕಾಯಿದೆಯನ್ನು ಎರಡು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಲಾಗಿದೆ.
Criminal Procedure (Identification) Rules, 2022
Criminal Procedure (Identification) Rules, 2022

ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ಕಾಯಿದೆಯ ಸಂಭವನೀಯ ದುರುಪಯೋಗದ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ನಿಯಮಾವಳಿ- 2022 ಅನ್ನು ಸೋಮವಾರ ಪ್ರಕಟಿಸಿದೆ.

Also Read
ಅಪರಾಧ ಪ್ರಕ್ರಿಯಾ (ಪತ್ತೆ ಹಚ್ಚುವಿಕೆ) ಮಸೂದೆ ಲೋಕಸಭೆಯಲ್ಲಿ ಮಂಡನೆ; ತನಿಖೆಗೆ ಸಹಕಾರಿ, ಶಿಕ್ಷೆ ಪ್ರಮಾಣ ಹೆಚ್ಚಳ

ಅಪರಾಧಿಗಳ ದೈಹಿಕ ಮಾಪನದ ಮಾಹಿತಿ ಸಂಗ್ರಹಿಸಲು ಈ ಮಸೂದೆ ಕಾನೂನಾತ್ಮಕ ಸಮ್ಮತಿ ನೀಡುತ್ತದೆ. ಮಸೂದೆಯಲ್ಲಿ ತಿಳಿಸಿರುವಂತೆ ಇದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ, ತನಿಖೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತಗೊಳಿಸಲು ಸಹಾಯ ಮಾಡುತ್ತದೆ.

  • ಭಾರತೀಯ ದಂಡ ಸಂಹಿತೆಯ  ಅಧ್ಯಾಯ X ಅಥವಾ ಅಧ್ಯಾಯ IXA ಅಡಿಯ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿತನಾದ ವ್ಯಕ್ತಿಯ ದೈಹಿಕ ಅಥವಾ ಜೈವಿಕ ಮಾದರಿಯ ಸಂಗ್ರಹವನ್ನು ಪೊಲೀಸ್ ಸೂಪರಿಂಟೆಂಡೆಂಟ್ ಶ್ರೇಣಿಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಯ ಪೂರ್ವ ಲಿಖಿತ ಒಪ್ಪಿಗೆಯೊಂದಿಗೆ  ಮಾಡಬೇಕು.

  • ಸೆಕ್ಷನ್ 144 ಮತ್ತು 145ರ ಅಡಿಯಲ್ಲಿ ನಿಷೇಧಾಜ್ಞೆಯ ಆದೇಶಗಳ ಉಲ್ಲಂಘನೆಯ ಆರೋಪ ಹೊರಿಸಲಾದ ಅಥವಾ ಸಿಆರ್‌ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಬಂಧಿಸಲಾದ ವ್ಯಕ್ತಿಗಳ ದೈಹಿಕ ಅಥವಾ ಜೈವಿಕ ಮಾದರಿಗಳನ್ನು ಮತ್ತಾವುದೇ ಅಪರಾಧದ ಆರೋಪ ಹೊರಿಸದೆ ಅಥವಾ ಬಂಧಿಸದೆ ತೆಗೆದುಕೊಳ್ಳುವಂತಿಲ್ಲ.

  • ಸೆಕ್ಷನ್ 107, 108, 109, ಅಥವಾ 110ರ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗೆ ಸಿಆರ್‌ಪಿಸಿ ಸೆಕ್ಷನ್ 117ರ ಅಡಿಯಲ್ಲಿ ಉತ್ತಮ ನಡವಳಿಕೆ ಅಥವಾ ಶಾಂತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಖಾತರಿ ನೀಡುವಂತೆ ಸೂಚಿಸದ ಹೊರತು ಆತನ ಜೈವಿಕ ಅಥವಾ ದೈಹಿಕ ಮಾದರಿಗಳನ್ನು ಸಂಗ್ರಹಿಸುವಂತಿಲ್ಲ.

ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ಕಾಯಿದೆಯ ನಿಯಮಗಳು ದೈಹಿಕ ಮತ್ತು ಜೈವಿಕ ಮಾದರಿ ಸಂಗ್ರಹ ಮಾಡುವುದನ್ನು ವಿವರಿಸಲಿದ್ದು  ಕಾಯಿದೆಯನ್ನು ಮದ್ರಾಸ್ ಹೈಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆರೋಪಿತ ವ್ಯಕ್ತಿಗಳ ಘನತೆ ಮತ್ತು ಖಾಸಗಿತನವನ್ನು ಈ ಕಾಯಿದೆಯು ಉಲ್ಲಂಘಿಸುತ್ತದೆ ಎನ್ನುವುದು ಇದರ ವಿರುದ್ಧ ಇರುವ ಪ್ರಮುಖ ಆಕ್ಷೇಪ. ಅದರಲ್ಲಿಯೂ ಭಾರತದಲ್ಲಿ ಮಾಹಿತಿ ಸಂರಕ್ಷಣಾ ಕಾಯಿದೆಯು ಇಲ್ಲದಿರುವ ಹೊತ್ತಲ್ಲಿ ಇದು ಗಂಭೀರ ದುರುಪಯೋಗಕ್ಕೆ ಕಾರಣವಾಗಬಹುದು ಎನ್ನುವ ಆತಂಕವನ್ನು ಅರ್ಜಿದಾರರು ಎತ್ತಿದ್ದಾರೆ. ಈ ಸಂಬಂಧ ಕೇಂದ್ರದಿಂದ ಎರಡೂ ನ್ಯಾಯಾಲಯಗಳು ಪ್ರತಿಕ್ರಿಯೆ ಕೇಳಿವೆ.

Related Stories

No stories found.
Kannada Bar & Bench
kannada.barandbench.com