ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಿತು ರಾಜ್ ಅವಸ್ಥಿ ಅವರ ನೇಮಕಾತಿಯೂ ಸೇರಿದಂತೆ ದೇಶಾದ್ಯಂತ ವಿವಿಧ 13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ.
ಐವರು ಮುಖ್ಯ ನ್ಯಾಯಮೂರ್ತಿಗಳನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಎಂಟು ಹೈಕೋರ್ಟ್‌ಗಳಿಗೆ ಹಿರಿಯ ನ್ಯಾಯಮೂರ್ತಿಗಳಾಗಿದ್ದವರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಪದನೋನ್ನತಿ ನೀಡಲಾಗಿದೆ
ಮುಖ್ಯ ನ್ಯಾಯಮೂರ್ತಿಗಳಾಗಿ ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆಗೊಂಡ ನ್ಯಾಯಮೂರ್ತಿಗಳ ಪಟ್ಟಿ ಇಂತಿದೆ:
ನ್ಯಾ. ಅಖಿಲ್ ಖುರೇಷಿ – ತ್ರಿಪುರದಿಂದ ರಾಜಸ್ಥಾನ
ನ್ಯಾ. ಇಂದ್ರಜಿತ್ ಮಹಂತಿ – ರಾಜಸ್ಥಾನದಿಂದ ತ್ರಿಪುರ
ನ್ಯಾ. ಮೊಹಮ್ಮದ್ ರಫೀಕ್ – ಮಧ್ಯಪ್ರದೇಶದಿಂದ ಹಿಮಾಚಲ ಪ್ರದೇಶ
ನ್ಯಾ. ಅರುಪ್ ಕುಮಾರ್ ಗೋಸ್ವಾಮಿ – ಆಂಧ್ರಪ್ರದೇಶದಿಂದ ಚತ್ತೀಸಗಢ
ನ್ಯಾ. ಬಿಸ್ವನಾಥ್ ಸೋಮದ್ದರ್ – ಮೇಘಾಲಯದಿಂದ ಸಿಕ್ಕಿಂ
ಎಂಟು ಹಿರಿಯ ನ್ಯಾಯಮೂರ್ತಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ಆ ಪಟ್ಟಿ ಇಂತಿದೆ:
ನ್ಯಾ. ರಿತು ರಾಜ್ ಅವಸ್ಥಿ – ಕರ್ನಾಟಕ ಹೈಕೋರ್ಟ್
ನ್ಯಾ. ರಾಜೇಶ್ ಬಿಂದಾಲ್ – ಅಲಾಹಾಬಾದ್
ನ್ಯಾ. ಪ್ರಕಾಶ್ ಶ್ರೀವಾಸ್ತವ – ಕಲ್ಕತ್ತಾ
ನ್ಯಾ. ಪಿ ಕೆ ಮಿಶ್ರಾ – ಆಂಧ್ರ ಪ್ರದೇಶ
ನ್ಯಾ. ಸತೀಶ್ ಚಂದ್ರ ಶರ್ಮಾ – ತೆಲಂಗಾಣ
ನ್ಯಾ. ಅರವಿಂದ್ ಕುಮಾರ್ – ಗುಜರಾತ್
ನ್ಯಾ. ಆರ್ ವಿ ಮಳಿಮಠ – ಮಧ್ಯಪ್ರದೇಶ
ನ್ಯಾ. ರಂಜಿತ್ ವಿ ಮೋರೆ – ಮೇಘಾಲಯ
ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿತ್ತು.