Chief Justices Court
Chief Justices Court

ಜೀವಮಾನವಿಡೀ ಮನೆಗೆಲಸ ಸೇರಿ ವಿವಿಧ ನೆರವು ಪಡೆಯಲು ವಿಶ್ರಾಂತ ಸಿಜೆಐಗಳಿಗೆ ಅವಕಾಶ: ನಿವೃತ್ತಿ ಬಳಿಕ 5 ವರ್ಷ ಭದ್ರತೆ

ಇದಲ್ಲದೆ ನಿವೃತ್ತ ಸಿಜೆಐ ತಮ್ಮ ನಿವೃತ್ತಿಯ ದಿನದಿಂದ ಆರು ತಿಂಗಳವರೆಗೆ ದೆಹಲಿಯಲ್ಲಿ (ನಿಯೋಜಿತ ಅಧಿಕೃತ ನಿವಾಸವನ್ನು ಹೊರತುಪಡಿಸಿ) ಬಾಡಿಗೆ ರಹಿತವಾದ ಟೈಪ್-VIl ವಸತಿ ಪಡೆಯಲು ಅರ್ಹರು.
Published on

ನಿವೃತ್ತರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ತಮ್ಮ ಜೀವಮಾನವಿಡೀ ಮನೆಗೆಲಸದ ಸಹಾಯಕ, ಚಾಲಕ ಹಾಗೂ ಕಾರ್ಯದರ್ಶಿ ಸಹಾಯಕರನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ ನಿವೃತ್ತ ಸಿಜೆಐಗಳು ನಿವೃತ್ತಿಯ ದಿನದಿಂದ 5 ವರ್ಷಗಳ ಕಾಲ ತಮ್ಮ ನಿವಾಸದಲ್ಲಿ ಪ್ರತಿಕ್ಷಣವೂ ಭದ್ರತಾ ಸಿಬ್ಬಂದಿ ಸೌಲಭ್ಯ ಪಡೆಯಬಹುದಾಗಿದೆ.

ಈ ಬದಲಾವಣೆಗಳನ್ನು ತರಲೆಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿಯಮಾವಳಿ 159ಕ್ಕೆ ತಿದ್ದುಪಡಿ ಮಾಡಿದೆ.

Also Read
ಸುಪ್ರೀಂ ಕೋರ್ಟ್‌ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್; ವಕೀಲ ವರ್ಗದಿಂದ ನೇರ ಪದೋನ್ನತಿ ಪಡೆದ ಎರಡನೇ ಸಿಜೆಐ

ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ, ನಿವೃತ್ತ ಸಿಜೆಐ ತಮ್ಮ ನಿವೃತ್ತಿಯ ದಿನದಿಂದ ಆರು ತಿಂಗಳವರೆಗೆ ದೆಹಲಿಯಲ್ಲಿ (ನಿಯೋಜಿತ ಅಧಿಕೃತ ನಿವಾಸವನ್ನು ಹೊರತುಪಡಿಸಿ) ಬಾಡಿಗೆ ರಹಿತವಾದ ಟೈಪ್-VIl ವಸತಿ ಪಡೆಯಲು ಅರ್ಹರು.

ಸುಪ್ರೀಂ ಕೋರ್ಟ್‌ನ ಉಳಿದ ನ್ಯಾಯಮೂರ್ತಿಗಳಿಗೆ ಅವರು ನಿವೃತ್ತರಾದ 1 ವರ್ಷದ ಅವಧಿಗೆ ಇದೇ ರೀತಿಯ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡಲೆಂದು ಇತ್ತೀಚೆಗೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ ನಿಯಮಾವಳಿಗೆ ತಿದ್ದುಪಡಿ ಮಾಡಿತ್ತು.

Kannada Bar & Bench
kannada.barandbench.com