ಪತಿ ಸಾವಿನ ಬಳಿಕ ಪತ್ನಿ ದತ್ತು ಪಡೆ ಮಗು ತೀರಿಹೋದ ತಂದೆಯ ಆಸ್ತಿಯಲ್ಲಿ ಪಾಲು ಕೋರಲಾಗದು: ಬಾಂಬೆ ಹೈಕೋರ್ಟ್‌

ದತ್ತು ಪಡೆದಿರುವ ಪುತ್ರ ಮತ್ತು ಸ್ವಂತ ಪುತ್ರಿಯ ಪಾಲಿನಲ್ಲಿ ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠವು ಬದಲಾವಣೆ ಮಾಡಿದೆ.
Aurangabad Bench, Bombay High Court
Aurangabad Bench, Bombay High Court
Published on

ಪತಿಯ ಸಾವಿನ ಬಳಿಕ ಪತ್ನಿ ಮಗುವನ್ನು ದತ್ತು ಪಡೆದುಕೊಂಡರೆ ಆ ದತ್ತು ಪಡೆದುಕೊಂಡ ಮಗುವು ಸಾವನ್ನಪ್ಪಿದ ತಂದೆಯ ಆಸ್ತಿಯಲ್ಲಿ ಪಾಲು ಕೋರಲಾಗದು. ಏಕೆಂದರೆ ದತ್ತು ಮಗುವು ಸಾವನ್ನಪ್ಪಿದ ತಂದೆಯ ಮಗು ಎಂದು ಪರಿಗಣಿಸಲ್ಪಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠವು ಈಚೆಗೆ ಮಹತ್ವದ ಆದೇಶ ನೀಡಿದೆ (ರಾಜೇಶ್‌ ಪವಾರ್‌ ವರ್ಸಸ್‌ ಪಾರ್ವತಿಬಾಯಿ ಬೆಂಡೆ).

ಪವಾರ್‌ ಮತ್ತು ಶಿವಾಜಿ ತೋಂಗ್‌ ನಡುವಿನ ಆಸ್ತಿ ಕ್ರಯಪತ್ರವು ಕಾನೂನು ಮಾನ್ಯತೆ ಹೊಂದಿಲ್ಲ ಎಂದು ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜೇಶ್‌ ಪವಾರ್‌ ಮತ್ತು ಅವರ ಕುಟುಂಬ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀಕಾಂತ್‌ ಕುಲಕರ್ಣಿ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಮೇಲಿನ ಆದೇಶದ ಹಿನ್ನೆಲೆಯಲ್ಲಿ ದತ್ತು ಪಡೆದಿರುವ ಪುತ್ರ ಮತ್ತು ಸ್ವಂತ ಪುತ್ರಿಯ ಪಾಲಿನಲ್ಲಿ ನ್ಯಾಯಾಲಯವು ಬದಲಾವಣೆ ಮಾಡಿದೆ.

Also Read
ಹಿಂದೂ ಉತ್ತರಾಧಿಕಾರ ಕಾಯಿದೆಗೂ ಮುನ್ನ ಮರಣಿಸಿದ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯ ಮೇಲೆ ಪುತ್ರಿಗೆ ಹಕ್ಕಿದೆ: ಸುಪ್ರೀಂ

ಹಿಂದೂ ದತ್ತುಗಳು ಮತ್ತು ನಿರ್ವಹಣಾ ಕಾಯಿದೆ 1956 ಜಾರಿಯಾದ ಬಳಿಕ ಪತಿ ಸಾವಿನ ಬಳಿಕ ಪತ್ನಿಯು ಮಗುವನ್ನು ದತ್ತು ಪಡೆದರೆ ಆ ಮಗುವು ನಿಧನರಾದ ತಂದೆಯ ಪುತ್ರನ ಸ್ಥಾನಮಾನ ಪಡೆಯುವುದಿಲ್ಲ. ಹೀಗಾಗಿ, ದತ್ತು ಪಡೆದ ಪುತ್ರ ಅಥವಾ ಮೊದಲನೇ ಪ್ರತಿವಾದಿಯು ತಂದೆ ಸಾವನ್ನಪ್ಪುವುದಕ್ಕೂ ಮುನ್ನ ದತ್ತು ಪಡೆಯದಿರುವುದರಿಂದ ತಂದೆಯ ಪರವಾಗಿ ದಾವೆಯ ಭಾಗವಾಗಿರುವ ಆಸ್ತಿಯಲ್ಲಿ ಪಾಲು ಕೋರಲಾಗದು” ಎಂದು ಪೀಠ ಆದೇಶ ಮಾಡಿದೆ.

Kannada Bar & Bench
kannada.barandbench.com