ವೀಸಾ ಹಗರಣ: ಕಾರ್ತಿ ಚಿದಂಬರಂಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ದೆಹಲಿ ನ್ಯಾಯಾಲಯ

ರಾಜಕಾರಣಿ ಕಾರ್ತಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್‌ ಇದೇ ವೇಳೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದರು.
ವೀಸಾ ಹಗರಣ: ಕಾರ್ತಿ ಚಿದಂಬರಂಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ದೆಹಲಿ ನ್ಯಾಯಾಲಯ
A1
Published on

ಚೀನಾದ 250 ಮಂದಿ ನಾಗರಿಕರಿಗೆ ವೀಸಾ ಕೊಡಿಸಲು ₹50 ಲಕ್ಷ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ (ಎಂಪಿ) ಕಾರ್ತಿ ಚಿದಂಬರಂ ಅವರಿಗೆ ಬಂಧನದಿಂದ ದೆಹಲಿ ನ್ಯಾಯಾಲಯ ಗುರುವಾರ ಮಧ್ಯಂತರ ರಕ್ಷಣೆ ನೀಡಿದೆ [ಕಾರ್ತಿ ಚಿದಂಬರಂ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ರಾಜಕಾರಣಿ ಕಾರ್ತಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್‌ ಇದೇ ವೇಳೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ನೀಡಿದರು. ಮೇ 30ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಸಿಬಿಐ ದಾಖಲಿಸಿರುವ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ʼಜಾರಿ ಪ್ರಕರಣದ ಮಾಹಿತಿ ವರದಿʼ (ಇಸಿಐಆರ್) ದಾಖಲಿಸಿದೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ ಎಂದು ಕಾರ್ತಿ ಅರ್ಜಿಯಲ್ಲಿ ತಿಳಿಸಿದ್ದರು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶ್‌ಮುಖ್ ಪ್ರಮುಖ ಸಂಚುಕೋರ ಎಂದ ಜಾರಿ ನಿರ್ದೇಶನಾಲಯ

ಶೋಧ ಕಾರ್ಯದ ವೇಳೆ ತಮ್ಮ ವಿರುದ್ಧ ದೋಷಾರೋಪ ಮಾಡಿಲ್ಲ ಜೊತೆಗೆ ದೋಷಾರೋಪ ಮಾಡುವಂತಹ ಸಾಕ್ಷ್ಯಗಳೂ ಆಗ ಸಿಕ್ಕಿಲ್ಲ ಎಂದು ಅವರು ಹೇಳಿದ್ದರು.

ಕಾರ್ತಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ವಕೀಲರಾದ ಅಶ್ರದೀಪ್‌ ಸಿಂಗ್‌ ಖುರಾನಾ ಹಾಗೂ ಅಕ್ಷತ್‌ ಗುಪ್ತಾ ವಾದ ಮಂಡಿಸಿದ್ದರು.

Kannada Bar & Bench
kannada.barandbench.com