ಬೆಂಗಳೂರಿನ ಎನ್‌ಎಲ್‌ಎಸ್‌ಐಯುನಲ್ಲಿ ಲೂಥ್ರಾ ಶೈಕ್ಷಣಿಕ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ ಸಿಜೆಐ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ಅವರ ಪತ್ನಿ ಕಲ್ಪನಾ ದಾಸ್‌ ಅವರು ಇಂದಿನಿಂದ ನಾಲ್ಕು ದಿನ ಮೈಸೂರು ಪ್ರವಾಸ ಆರಂಭಿಸಿದ್ದಾರೆ.
CJI DY Chandrachud at the Rajiv K Luthra Foundation Stone Ceremony
CJI DY Chandrachud at the Rajiv K Luthra Foundation Stone Ceremony
Published on

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜೀವ್‌ ಕೆ ಲೂಥ್ರಾ ಅಧ್ಯಯನ ಘಟಕಕ್ಕೆ ಈಚೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶಿಲಾನ್ಯಾಸ ನೆರವೇರಿಸಿದ್ದಾರೆ.

ಶೈಕ್ಷಣಿಕ ಘಟಕದ ಮೂಲಕ ಹಾಲಿ ಇರುವ ತರಗತಿ ಮತ್ತು ಸೆಮಿನಾರ್‌ ಕೊಠಡಿ ಮರು ವಿನ್ಯಾಸ ಮತ್ತು ಹೊಸ ತರಗತಿಗಳನ್ನು ರೂಪಿಸಲು ರಾಜೀವ್‌ ಕೆ ಲೂಥ್ರಾ ಫೌಂಡೇಶನ್‌ ಅನುದಾನವನ್ನು ಬಳಸಲಾಗುತ್ತದೆ.

ಸೆಪ್ಟೆಂಬರ್‌ 22ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ, ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಮನನ್‌ ಮಿಶ್ರಾ, ರಾಜೀವ್‌ ಕೆ ಲೂಥ್ರಾ ಫೌಂಡೇಶನ್‌ನ ಪ್ರಧಾನ ಟ್ರಸ್ಟಿ ಗಾಯತ್ರಿ ಲೂಥ್ರಾ, ಭಾರತದಲ್ಲಿನ ಲೂಥ್ರಾ ಅಂಡ್‌ ಲೂಥ್ರಾ ಕಾನೂನು ಕಚೇರಿಯ ನಿರ್ವಹಣಾ ಪಾಲುದಾರರಾದ ಹ್ಯಾರಿ ಚಾವ್ಲಾ, ಲೂಥ್ರಾ ಅಂಡ್‌ ಲೂಥ್ರಾ ಲೆಕ್ಕ ಪರಿಶೋಧಕರ ನಿರ್ವಹಣಾ ಪಾಲುದಾರ ಅಮಿತ್‌ ಲೂಥ್ರಾ ಉಪಸ್ಥಿತರಿದ್ದರು.

Rajiv K Luthra Foundation Stone Ceremony
Rajiv K Luthra Foundation Stone Ceremony

ದಿವಂಗತ ರಾಜೀವ್‌ ಕೆ ಲೂಥ್ರಾ ಸ್ಮರಣಾರ್ಥ ರಾಜೀವ್‌ ಕೆ ಲೂಥ್ರಾ ಫೌಂಡೇಶನ್‌ ಸ್ಥಾಪಿಸಲಾಗಿದೆ. ಇಬ್ಬರು ಶ್ರೇಷ್ಠ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ಫೌಂಡೇಶನ್‌ ಕ್ರಮಕೈಗೊಂಡಿದೆ. ಅಲ್ಲದೇ, ರಾಜೀವ್‌ ಲೂಥ್ರಾ ನೆನಪಿನಲ್ಲಿ ಐದು ವರ್ಷಗಳ ಕಾಲ ವಾರ್ಷಿಕ ಉಪನ್ಯಾಸ ಸರಣಿಯನ್ನು ಆಯೋಜಿಸಲು ಅನುದಾನ ಬಳಕೆಯಾಗಲಿದೆ.

ಸಿಜೆಐ ಮೈಸೂರು ಪ್ರವಾಸ ಇಂದಿನಿಂದ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ಅವರ ಪತ್ನಿ ಕಲ್ಪನಾ ದಾಸ್‌ ಅವರು ಇಂದಿನಿಂದ ನಾಲ್ಕು ದಿನ ಮೈಸೂರು ಪ್ರವಾಸ ಆರಂಭಿಸಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಸಂಜೆ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿಲಿರುವ ನ್ಯಾಯಮೂರ್ತಿ ಮತ್ತು ಅವರ ಕುಟುಂಬವು ಅಲ್ಲೇ ಎರಡು ದಿನ ತಂಗಲಿದ್ದು, ಭಾನುವಾರ ದೆಹಲಿಗೆ ನಿರ್ಗಮಿಸಲಿದ್ದಾರೆ.

Kannada Bar & Bench
kannada.barandbench.com