ಸಿಎಲ್ಎಟಿ 2021: ನಿವೃತ್ತ ಸಿಜೆಐ ರಾಜೇಂದ್ರ ಬಾಬು ನೇತೃತ್ವದಲ್ಲಿ ದೂರು ಪರಿಹಾರ ಸಮಿತಿ ರಚನೆ

ಸಿಎಲ್ಎಟಿ 2021 ಪರೀಕ್ಷೆ ಜುಲೈ 23 ರಂದು ನಡೆದಿತ್ತು. ಫಲಿತಾಂಶಗಳು ಜುಲೈ 28 ರಂದು ಪ್ರಕಟಿಸಲಾಗಿದೆ.
ಸಿಎಲ್ಎಟಿ 2021: ನಿವೃತ್ತ ಸಿಜೆಐ ರಾಜೇಂದ್ರ ಬಾಬು ನೇತೃತ್ವದಲ್ಲಿ ದೂರು ಪರಿಹಾರ ಸಮಿತಿ ರಚನೆ

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಸಿಎಲ್‌ಎಟಿ 2021 ಗೆ ಸಂಬಂಧಿಸಿದ ಅಹವಾಲು, ದೂರುಗಳನ್ನು ಪರಿಹರಿಸಲು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಾಬು ಅವರ ನೇತೃತ್ವದಲ್ಲಿ ಐದು ಸದಸ್ಯರ ದೂರು ಪರಿಹಾರ ಸಮಿತಿ ರಚಿಸಿದೆ.

ಸಮಿತಿ ಈ ಕೆಳಗಿನ ಸದಸ್ಯರು / ಸಂಚಾಲಕರನ್ನು ಒಳಗೊಂಡಿದೆ:

ಪ್ರೊ. ಶ್ರೀ ಕೃಷ್ಣದೇವರಾವ್, ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ;

ಪ್ರೊ. ಬಲರಾಜ್ ಚೌಹಾಣ್, ಮಾಜಿ ಉಪಕುಲಪತಿ ಆರ್‌ ಎಂ ಎಲ್ ಎನ್ ಎಲ್ ಯು ಮತ್ತು ಎಂಪಿಡಿಎನ್ಎಲ್ಯು;

ಪ್ರೊ. ರವಿ ಕುಮಾರ್, ನಿವೃತ್ತ ಪ್ರಾಧ್ಯಾಪಕ, ಐಐಟಿ ಬಾಂಬೆ;

ಪ್ರೊ. ಫೈಜಾನ್ ಮುಸ್ತಫಾ, ಉಪಕುಲಪತಿ ಎನ್‌ಎಎಲ್‌ಎಸ್‌ಎಆರ್‌ (ಸಂಚಾಲಕರು).

Also Read
ಸಿಎಲ್‌ಎಟಿ 2021 ಆನ್‌ಲೈನ್‌ ಅರ್ಜಿ ಸಲ್ಲಿಕೆ ಗಡುವನ್ನು ಮೇ 15ರವರೆಗೆ ವಿಸ್ತರಿಸಿದ ಎನ್‌ಎಲ್‌ಯುಸಿ

ಸಿಎಲ್‌ಎಟಿ 2021ಪರೀಕ್ಷೆ ಜುಲೈ 23 ರಂದು ನಡೆದಿತ್ತು. ಫಲಿತಾಂಶಗಳು ಜುಲೈ 28 ರಂದು ಪ್ರಕಟವಾಗಿವೆ

ಈ ಮೊದಲು, ಈ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ (ಸಿಎಲ್‌ಎಟಿ 2021) ರಚಿಸಲಾದ ಮೇಲ್ವಿಚಾರಣಾ ಸಮಿತಿಯು ಒಂದು ಪ್ರಶ್ನೆಯನ್ನು ತೆಗೆದುಹಾಕಲು ಮತ್ತು ಸಿಎಲ್‌ಎಟಿ ಪದವಿ ಪರೀಕ್ಷೆ ಪತ್ರಿಕೆಯ ಎರಡು ಉತ್ತರಗಳನ್ನು ತಿದ್ದುಪಡಿ ಮಾಡಲು ಶಿಫಾರಸು ಮಾಡಿತ್ತು.

ಪದವಿ ಕೋರ್ಸ್‌ ಪತ್ರಿಕೆಯಲ್ಲಿ 61 ಪ್ರಶ್ನೋತ್ತರಗಳ ಬಗ್ಗೆ ಒಟ್ಟು 1,026 ಆಕ್ಷೇಪಣೆಗಳು ಬಂದಿವೆ ಎಂದು ಸಿಎಲ್‌ಎಟಿ- 2021 ಸಂಚಾಲಕ ಪ್ರೊ. ವಿಜೇಂದರ್ ಕುಮಾರ್ ಅವರು ಸಹಿ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು (ಎನ್‌ಎಲ್‌ಯು) ಮೇಲ್ವಿಚಾರಣಾ ಸಮಿತಿಯ ಶಿಫಾರಸುಗಳನ್ನು ಈ ಹಿಂದೆ ಅಂಗೀಕರಿಸಿ ಸಿಎಲ್‌ಎಟಿ- 2021ಯ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com