ಬರುವ ವರ್ಷದ ಸಿಎಲ್ಎಟಿ ಪರೀಕ್ಷೆ ಮೇ 8, 2022ಕ್ಕೆ ನಿಗದಿ; 2023ನೇ ಸಾಲಿನ ಪರೀಕ್ಷಾ ದಿನಾಂಕವೂ ಘೋಷಣೆ

ಕೌನ್ಸೆಲಿಂಗ್ ಶುಲ್ಕವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 50,000ದಿಂದ ₹ 30,000ಕ್ಕೆ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ₹ 20,000ಕ್ಕೆ ಇಳಿಸಲು ಒಕ್ಕೂಟ ನಿರ್ಧರಿಸಿದೆ.
ಬರುವ ವರ್ಷದ ಸಿಎಲ್ಎಟಿ ಪರೀಕ್ಷೆ ಮೇ 8, 2022ಕ್ಕೆ ನಿಗದಿ; 2023ನೇ ಸಾಲಿನ ಪರೀಕ್ಷಾ ದಿನಾಂಕವೂ ಘೋಷಣೆ

ಮುಂದಿನ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) 2022ರ ಮೇ 8ರಂದು ನಡೆಯಲಿದೆ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್‌ಎಲ್‌ಯು) ತಿಳಿಸಿದೆ. ಸಿಎಲ್‌ಎಟಿ- 2023ರ ದಿನಾಂಕವನ್ನು ಕೂಡ ಇದೇ ವೇಳೆ ಘೋಷಿಸಲಾಗಿದ್ದು ಈ ಪರೀಕ್ಷೆ ಡಿಸೆಂಬರ್ 18, 2022ರಂದು ನಡೆಯಲಿದೆ.

ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ಎನ್‌ಎಎಲ್‌ಎಸ್‌ಎಆರ್) ವಿಶ್ವವಿದ್ಯಾಲಯದಲ್ಲಿ ಪ್ರೊ. ಫೈಜಾನ್ ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೌನ್ಸೆಲಿಂಗ್ ಶುಲ್ಕವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 50,000ದಿಂದ ₹ 30,000ಕ್ಕೆ ಇಳಿಕೆ ಮಾಡಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ₹ 20,000ಕ್ಕೆ ಶುಲ್ಕ ಇಳಿಸಲು ಒಕ್ಕೂಟ ನಿರ್ಧರಿಸಿದೆ.

Also Read
[ಸಿಎಲ್‌ಎಟಿ ಕೌನ್ಸೆಲಿಂಗ್‌ ಶುಲ್ಕ ಪ್ರಕರಣ] ಶುಲ್ಕ ಕಟ್ಟದೆ ಭಾಗವಹಿಸಲು ಅಭ್ಯರ್ಥಿಗಳಿಗೆ ಅನುಮತಿ; ಅರ್ಜಿ ವಿಲೇವಾರಿ

ಸಭೆಯಲ್ಲಿ, ಜೋಧ್‌ಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ (ಡಾ) ಪೂನಂ ಸಕ್ಸೇನಾ ಅವರನ್ನು ಎನ್‌ಎಲ್‌ಯುಗಳ ಒಕ್ಕೂಟದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಕೋವಿಡ್‌ ಕಾರಣದಿಂದಾಗಿ 2021ನೇ ಸಾಲಿನ ಸಿಎಲ್‌ಎಟಿ ಪರೀಕ್ಷೆಯನ್ನು ಹಲವುಬಾರಿ ಮುಂದೂಡಲಾಗಿತ್ತು. ಮೊದಲು ಈ ವರ್ಷದ ಮೇ 9ರಂದು ಪರೀಕ್ಷೆ ನಡೆಯಬೇಕಿತ್ತು. ಆದರೆ ಸಿಬಿಎಸ್‌ಇ ಪರೀಕ್ಷೆ ಮೇ 4ರಿಂದ ಆರಂಭವಾದ ಹಿನ್ನೆಲೆಯಲ್ಲಿ ಜೂನ್ 13ಕ್ಕೆ ಪರೀಕ್ಷೆ ಮರುನಿಗದಿಪಡಿಸಲಾಗಿತ್ತು. ಆದರೆ ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com