ಡಿಸೆಂಬರ್ 18ರಂದು ಸಿಎಲ್ಎಟಿ- 2023 ಪರೀಕ್ಷೆ

2023-2024ರ ಶೈಕ್ಷಣಿಕ ವರ್ಷಕ್ಕೆ ಪರೀಕ್ಷೆಯನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ.
CLAT 2023
CLAT 2023

2023- 2024ನೇ ಶೈಕ್ಷಣಿಕ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಈ ವರ್ಷ ಡಿಸೆಂಬರ್ 18ರಂದು ನಡೆಯಲಿರುವುದಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್‌ಎಲ್‌ಯು) ತಿಳಿಸಿದೆ.

ಮುಂಬರುವ ಶೈಕ್ಷಣಿಕ ವರ್ಷಕ್ಕೆ ಕೇವಲ ಒಮ್ಮೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ, ಒಕ್ಕೂಟ ಹೇಳಿದೆ.

Also Read
ಭಾರತೀಯ ಸೇನೆಯ ಜೆಎಜಿ ವಿಭಾಗದ ಹುದ್ದೆಗೆ ಸಿಎಲ್‌ಎಟಿ-ಪಿಜಿ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌

"ಪ್ರತಿ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಒಮ್ಮೆ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುವ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಯಾವುದೇ ಹೆಚ್ಚುವರಿ, ಎರಡನೇ ಅಥವಾ ಬೇರಾವುದೇ ಸಿಎಲ್‌ಎಟಿ ಪರೀಕ್ಷೆ ನಡೆಸುವುದಿಲ್ಲ" ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ .

2023-24 ರಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ನವೆಂಬರ್ 13ರೊಳಗೆ ಸಿಎಲ್‌ಎಟಿ 2023 ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು. ಮೇ 2023ರಲ್ಲಿ XII ತರಗತಿಯ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಸಹ ಸಿಎಲ್‌ಎಟಿ 2023 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಸಿಎಲ್‌ಎಟಿ ಪರೀಕ್ಷೆ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com