ಕರ್ನಾಟಕ ಹೈಕೋರ್ಟ್‌ ನ್ಯಾ. ಜಿ ನರೇಂದರ್‌ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ ಕೊಲಿಜಿಯಂ

ನೆರಹೊರೆಯ ರಾಜ್ಯಗಳಿಗೆ ವರ್ಗಾವಣೆ ಮಾಡುವಂತೆ ಕೋರಿದ್ದ ನ್ಯಾಯಮೂರ್ತಿಗಳ ಕೋರಿಕೆಯನ್ನು ಕೊಲಿಜಿಯಂ ಮನ್ನಿಸಿದೆ. ಈ ಮೂಲಕ ಮೊದಲಿಗೆ ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದನ್ನು ಮಾರ್ಪಡಿಸಿದೆ.
Justice Narendar G and Karnataka High Court
Justice Narendar G and Karnataka High Court

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಜಿ ನರೇಂದರ್‌ ಅವರನ್ನು ನೆರೆಯ ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ವರ್ಗಾವಣೆ ಮಾಡಿ ಶಿಫಾರಸ್ಸು ಮಾಡಿದೆ.

ಆಗಸ್ಟ್‌ 3ರ ನಿರ್ಧಾರದ ಪ್ರಕಾರ ಕೊಲಿಜಿಯಂ ನ್ಯಾ. ನರೇಂದರ್‌ ಅವರನ್ನು ಒಡಿಶಾ ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಆದರೆ, ನ್ಯಾ. ನರೇಂದರ್‌ ಅವರು ತಮ್ಮನ್ನು 3 ರಿಂದ 4 ತಿಂಗಳು ಬೆಂಗಳೂರಿನಲ್ಲೇ ಉಳಿಸುವಂತೆ ಮತ್ತು ಬಳಿಕ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಅಥವಾ ಆಂಧ್ರ ಪ್ರದೇಶಕ್ಕೆ ವರ್ಗಾಯಿಸುವಂತೆ ಕೋರಿದ್ದರು.

“ನ್ಯಾ. ನರೇಂದರ್‌ ಅವರು ತಮ್ಮ ವರ್ಗಾವಣೆಯ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ. ಆಗಸ್ಟ್‌ 6ರಂದು ಕಳುಹಿಸಿರುವ ಮನವಿಯ ಮೂಲಕ 3 ರಿಂದ 4 ತಿಂಗಳು ಬೆಂಗಳೂರಿನಲ್ಲೇ ಉಳಿಸುವಂತೆ ಮತ್ತು ಬಳಿಕ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಅಥವಾ ಆಂಧ್ರ ಪ್ರದೇಶಕ್ಕೆ ವರ್ಗಾಯಿಸುವಂತೆ ಕೋರಿದ್ದರು” ಎಂದು ನಿರ್ಣಯದಲ್ಲಿ ಹೇಳಲಾಗಿದೆ.

3 ರಿಂದ 4 ತಿಂಗಳು ಬೆಂಗಳೂರಿನಲ್ಲೇ ಉಳಿಸುವಂತೆ ಕೋರಿದ್ದ ನ್ಯಾ. ನರೇಂದರ್‌ ಅವರ ಕೋರಿಕೆಗೆ ನಿರಾಕರಿಸಿರುವ ಕೊಲಿಜಿಯಂ ಅವರನ್ನು ನೆರೆಯ ರಾಜ್ಯಗಳಲ್ಲಿ ಒಂದಾದ ಆಂಧ್ರ ಪ್ರದೇಶಕ್ಕೆ ವರ್ಗಾಯಿಸಿದೆ.

ಈ ಮೂಲಕ ಆಗಸ್ಟ್‌ 3ರಂದು ಒಡಿಶಾ ಹೈಕೋರ್ಟ್‌ಗೆ ನ್ಯಾ. ನರೇಂದರ್‌ ಅವರನ್ನು ವರ್ಗಾಯಿಸಿದ್ದ ನಿರ್ಣಯದಲ್ಲಿ ಬದಲಾಯಿಸಿ ಅವರನ್ನು ಆಂಧ್ರ ಪ್ರದೇಶಕ್ಕೆ ವರ್ಗಾಯಿಸುವ ಮೂಲಕ ನಿರ್ಣಯದಲ್ಲಿ ಮಾರ್ಪಾಡು ಮಾಡಿದೆ.

Kannada Bar & Bench
kannada.barandbench.com