ಲಭ್ಯವಿರುವ ವ್ಯವಸ್ಥೆಯಲ್ಲೇ ಕೊಲಿಜಿಯಂ ಅತ್ಯುತ್ತಮವಾಗಿದ್ದು ಅದು ಮನಬಂದಂತೆ ಶಿಫಾರಸು ಮಾಡದು: ನ್ಯಾ. ಯು ಯು ಲಲಿತ್

ಕೊಲಿಜಿಯಂನ ನೇಮಕಾತಿ ಪ್ರಕ್ರಿಯೆ ಕಠಿಣ ಸ್ತರಗಳನ್ನು ಒಳಗೊಂಡಿದ್ದು ಸಾಕಷ್ಟು ನಿಯಂತ್ರಣಗಳಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.
CJI UU Lalit
CJI UU Lalit

ದೇಶದ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಹೆಸರುಗಳನ್ನು ಶಿಫಾರಸು ಮಾಡುವ ಕೊಲಿಜಿಯಂ ಸಂಪೂರ್ಣ ಚರ್ಚೆ ನಡೆಸಿ ಜೊತೆಗೆ ಎಲ್ಲಾ ಅಂಶಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಹೇಳಿದರು.

ಕ್ಯಾಂಪೇನ್ ಫಾರ್ ಜುಡಿಶಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (ಸಿಜೆಎಆರ್) ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು "ನ್ಯಾಯಾಂಗ ನೇಮಕಾತಿ ಮತ್ತು ಸುಧಾರಣೆ" ಎಂಬ ವಿಷಯದ ಕುರಿತು ಮಾತನಾಡಿದರು.

ಕೊಲಿಜಿಯಂ ವ್ಯವಸ್ಥೆ ಲಭ್ಯವಿರುವ ವ್ಯವಸ್ಥೆಯಲ್ಲಿಯೇ ಅತ್ಯುತ್ತಮವಾದುದಾಗಿದ್ದು ನಾವು ಈ ವ್ಯವಸ್ಥೆ ಉಳಿದು ಬೆಳೆಯುವಂತೆ ಮತ್ತು ನಮಗೆ ಸಾಧ್ಯವಾದಷ್ಟೂ ಉತ್ತಮ ಫಲಿತಾಂಶ ನೀಡುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

Also Read
ಗೌರಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ; ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದಗ್ರಹಣ

“ಟೀಕಾಕಾರರು ಆರೋಪಿಸುವಂತೆ ನ್ಯಾಯಾಂಗ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಮುಂದುವರಿಯುವಂತೆ ಮಾಡುವುದಕ್ಕಾಗಿ ಇದು ಯಾರೋ ರೂಪಿಸಿದ ವಿಚಿತ್ರ ಕಸರತ್ತಲ್ಲ. ಇದು ದೋಷರಹಿತ ಪ್ರಕ್ರಿಯೆ. ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕಾರ್ಯಾಂಗ ಅಥವಾ ಕೊಲಿಜಿಯಂಗಳಲ್ಲಿ ಯಾವುದು ಅತ್ಯುತ್ಮಮ ಎಂಬುದನ್ನು ಊಹಿಸಿಕೊಳ್ಳಿ” ಎಂದು ಅವರು ತಿಳಿಸಿದರು.  

ಕೊಲಿಜಿಯಂನ ನೇಮಕಾತಿ ಪ್ರಕ್ರಿಯೆ ಕಠಿಣ ಸ್ತರಗಳನ್ನು ಒಳಗೊಂಡಿದ್ದು ಸಾಕಷ್ಟು ನಿಯಂತ್ರಣಗಳಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.

"ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿ ನಡೆಯಬೇಕು ಎಂದಿದ್ದರೆ ಆಗ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ಇಲ್ಲವೇ ಅವರ ಅಭಿಪ್ರಾಯ ಪರಿಗಣಿಸಲಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮಟ್ಟದಲ್ಲಿ ನಾವು ಹೆಸರುಗಳನ್ನು ಶಿಫಾರಸು ಮಾಡುವಾಗ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಸಾಮಾನ್ಯವಾಗಿ ಅಲ್ಲಿ 5 ಮಂದಿ ಸಮಾಲೋಚಕ ನ್ಯಾಯಮೂರ್ತಿಗಳಿರುತ್ತಾರೆ. ಯಾರದೋ ಒಬ್ಬರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲವಾದ್ದರಿಂದ ಕೆಲವು ಮಾನದಂಡಗಳನ್ನು ಪಾಲಿಸಲಾಗುತ್ತದೆ. ಈ ಕಠೋರ ಪರಿಷ್ಕರಣೆ ಬಳಿಕ ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ. ಬಳಿಕ ಆ ಶಿಫಾರಸು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಅಲ್ಲಿ ಅದು ವಿವರಿಸಲು ಏನನ್ನಾದರೂ ಒಳಗೊಂಡಿರುವಂತಹ ಅಭಿಪ್ರಾಯಗಳನ್ನು ಪಡೆಯುತ್ತದೆ. ಅವರ ಆಕ್ಷೇಪಣೆಗಳು ಮತ್ತೆ ಕೊಲಿಜಿಯಂಗೆ ಬರುತ್ತವೆ” ಎಂದು ಅವರು ಹೇಳಿದರು.

Also Read
ಸರಿಯೋ ತಪ್ಪೋ ಕೊಲಿಜಿಯಂ ಕುರಿತ ಸುಪ್ರೀಂ ತೀರ್ಪಿಗೆ ಬದ್ಧವಾಗಿರಬೇಕು: ಸಚಿವ ರಿಜಿಜುಗೆ ನ್ಯಾ. ನಾರಿಮನ್ ಬುದ್ಧಿವಾದ

“ಒಂದು ನಿರ್ದಿಷ್ಟ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಬೇಕಾದ ಸಂದರ್ಭ ಎದುರಾದಾಗ ಅವರು ನೀಡಿದ ತೀರ್ಪುಗಳು ಗುಣಮಟ್ಟದಿಂದ ಕೂಡಿವೆಯೇ ಎಂಬುದನ್ನು ಗಮನಿಸುವುದಕ್ಕಾಗಿಯೇ ಆ ವ್ಯಕ್ತಿಯ 1,100 ತೀರ್ಪುಗಳನ್ನು ಅಧ್ಯಯನ ಮಾಡಲಾಗಿತ್ತು. ಆ ರೀತಿಯಾಗಿ ಪರಿಗಣನೆ ನಡೆಯುತ್ತದೆ. ಇದು ಹಲವು ವರ್ಷಗಳಿಂದ ನಡೆದು ಬಂದಿರುವ ರೂಢಿ. ಎಷ್ಟು ತೀರ್ಪುಗಳನ್ನು ನೀಡಲಾಗಿದೆ ಮತ್ತು ಎಷ್ಟು ಆದಾಯ ಆತನಿಗೆ ಬರುತ್ತದೆ ಎಂಬುದನ್ನು ಗಮನಿಸಲಾಗುತ್ತದೆ. ವಕೀಲರ ಸಂಘ ಮುಂತಾದ ಕಡೆಗಳಿಂದ ವೈಯಕ್ತಿಕ ನೆಲೆಯಲ್ಲಿ ದೂರುಗಳು ಬಂದರೆ ಆ ಕುರಿತು ಗುಪ್ತಚರ ದಳ, ರಾಜ್ಯ ಸರ್ಕಾರಗಳು ಶಿಫಾರಸು ಮಾಡುತ್ತವೆ. ಶಿಫಾರಸು ಸುಪ್ರೀಂ ಕೋರ್ಟ್‌ಗೆ ಬಂದಾಗ ಅದನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದು ಸರ್ವೋಚ್ಚ ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿದೆ” ಎಂದು ನ್ಯಾ. ಲಲಿತ್‌ ವಿವರಿಸಿದರು.

ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ದೌರ್ಬಲ್ಯಗಳಿದ್ದರೆ ಆಗ, ಸಂಬಂಧಿತ ರಾಜ್ಯದ ಸುಪ್ರೀಂ ಕೋರ್ಟ್‌ ಸಮಾಲೋಚಕ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ಹೈಕೋರ್ಟ್ ಕೊಲಿಜಿಯಂ  ಮಾಡಿದ್ದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೈಬಿಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಅವರು ಹೇಳಿದರು. ಕೊಲಿಜಿಯಂ ಒಪ್ಪದ ಹೆಸರೊಂದನ್ನು ಬಳಿಕ ಸರ್ಕಾರದ ಮನವಿ ಮೇರೆಗೆ ಒಪ್ಪಿಕೊಳ್ಳಲಾಗಿತ್ತು. ಆ ವ್ಯಕ್ತಿ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತದ್ವಿರುದ್ಧವಾದ ಪ್ರಕರಣಗಳೂ ಇವೆ. ಆದ್ದರಿಂದದಯವಿಟ್ಟುಇಡೀವಿಷಯಕ್ಕೆ ಒದಗಿರುವ ಗಂಭೀರತೆಯನ್ನು ಪರಿಗಣಿಸಿ” ಎಂದು ಮನವಿ ಮಾಡಿತು.

Related Stories

No stories found.
Kannada Bar & Bench
kannada.barandbench.com