ನ್ಯಾಯಮೂರ್ತಿಗಳು ತೀರ್ಪು ನೀಡುವುದಕ್ಕಿಂತ ಹೆಚ್ಚು ಕಾಲವನ್ನು ನ್ಯಾಯಮೂರ್ತಿಗಳ ನೇಮಕಾತಿಗೆ ವ್ಯಯಿಸುತ್ತಾರೆ: ರಿಜಿಜು

ನಾವು ಸಂವಿಧಾನದ ಆಶಯವನ್ನು ಪಾಲಿಸುವುದೇ ಆದರೆ, ನ್ಯಾಯಮೂರ್ತಿಗಳನ್ನು ನೇಮಿಸುವುದು ಕೇಂದ್ರ ಸರ್ಕಾರದ ಕೆಲಸವಾಗುತ್ತದೆ ಎಂದು ರಿಜಿಜು ಹೇಳಿದರು.
Kiren Rijiju, Union Law Minister
Kiren Rijiju, Union Law Minister

ಕೊಲಿಜಿಯಂ ವ್ಯವಸ್ಥೆ ತುಂಬಾ ಅಪಾರದರ್ಶಕವಾಗಿದ್ದು, ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ನ್ಯಾಯಾಂಗದೊಳಗಿನ ರಾಜಕೀಯವು ಸಾಮಾನ್ಯರಿಗೆ ತಿಳಿಯುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಕಟಿಸುವ ತನ್ನ ಮುಖವಾಣಿ ʼಪಾಂಚಜನ್ಯʼ  ವಾರಪತ್ರಿಕೆ ಆಯೋಜಿಸಿದ್ದ ʼಸಬರಮತಿ ಸಂವಾದʼ ಹೆಸರಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ಕೊಲಿಜಿಯಂ ಇಲ್ಲದಿದ್ದಾಗ ಕಿರಿಯ ನ್ಯಾಯಮೂರ್ತಿಗಳನ್ನು ಸಿಜೆಐ ಆಗಿ ನೇಮಿಸಲಾಗಿತ್ತು: ಇತಿಹಾಸ ನೆನಪಿಸಿದ ನ್ಯಾ. ಓಕ್‌

ಸಾಂವಿಧಾನಿಕ ನ್ಯಾಯಾಲಯದ ನ್ಯಾಯಮೂರ್ತಿಗಳು ವಿಚಾರಣೆ ಮತ್ತು ತೀರ್ಪು ನೀಡುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕಳೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

Also Read
ಸಿಜೆಐ ನಡೆಗೆ ಆಕ್ಷೇಪಿಸಿದ್ದು ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಜೀರ್: ಸುಪ್ರೀಂ ಕೊಲಿಜಿಯಂ

ಸಚಿವರ ಮಾತಿನ ಪ್ರಮುಖಾಂಶಗಳು

  • ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ದೇಶದ ಜನರಿಗೆ ಖುಷಿ ಇಲ್ಲ. ನಾವು ಸಂವಿಧಾನದ ಆಶಯವನ್ನು ಪಾಲಿಸುವುದೇ ಆದರೆ, ನ್ಯಾಯಮೂರ್ತಿಗಳನ್ನು ನೇಮಿಸುವುದು ಕೇಂದ್ರ ಸರ್ಕಾರದ ಕೆಲಸವಾಗಿರುತ್ತದೆ.

  • ಜಗತ್ತಿನಲ್ಲಿ ಎಲ್ಲಿಯೂ ನ್ಯಾಯಮೂರ್ತಿಗಳೇ ಮತ್ತೊಬ್ಬ ನ್ಯಾಯಮೂರ್ತಿಗಳನ್ನು ನೇಮಿಸುವುದಿಲ್ಲ. ನ್ಯಾಯಮೂರ್ತಿಗಳು ಪ್ರಕರಣಗಳ ನಿರ್ಣಯಕ್ಕಿಂತ ನೇಮಕಾತಿಗಳ ಬಗ್ಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ನ್ಯಾಯಮೂರ್ತಿಗಳ ನೇಮಕಕ್ಕೆ ನಡೆಯುವ ಸಮಾಲೋಚನಾ ಪ್ರಕ್ರಿಯೆ ತೀವ್ರವಾಗಿರುತ್ತದೆ. ಜನರಿಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ ನ್ಯಾಯಾಂಗದ ಒಳಗೇನು ನಡೆಯುತ್ತದೆ ಎಂಬ ರಾಜಕೀಯ ಕಾಣುವುದಿಲ್ಲ. ನ್ಯಾಯಮೂರ್ತಿಗಳನ್ನು ನೇಮಿಸುವಾಗ ನ್ಯಾಯಾಂಗ ಪ್ರಕ್ರಿಯೆ ತುಂಬಾ ಅಪಾರದರ್ಶಕವಾಗಿದೆ.

  • ನ್ಯಾಯಾಂಗ ಸಕ್ರಿಯವಾದಿತ್ವದ (ಜುಡಿಷಿಯಲ್‌ ಆಕ್ಟಿವಿಸಂ) ಕುರಿತು ಮಾತನಾಡುತ್ತಾ ಅವರು, ತನ್ನ ವ್ಯಾಪ್ತಿ ಮೀರಿ ನ್ಯಾಯಾಂಗ ಆದೇಶ ಹೊರಡಿಸಿದಾಗ ಉದಾಹರಣೆಗೆ ಕಾರ್ಯಾಂಗಕ್ಕೆ ಏನಾದರೂ ಮಾಡುವಂತೆ ಸೂಚಿಸುವ ನ್ಯಾಯಾಧೀಶರಿಗೆ ಪ್ರಾಯೋಗಿಕ ತೊಂದರೆಗಳು ಮತ್ತು ಆರ್ಥಿಕ ಅಡಚಣೆಗಳ ಅರಿವಿರುವುದಿಲ್ಲ ಎಂದರು.

  • ಪ್ರತಿಯೊಂದು ಅಂಗವೂ ತನಗೆ ವಹಿಸಲಾದ ಕರ್ತವ್ಯಗಳತ್ತ ಗಮನ ಕೇಂದ್ರೀಕರಿಸಬೇಕು. ಇಲ್ಲದಿದ್ದರೆ ನಾವು ಕಾರ್ಯಾಂಗದ ಸಕ್ರಿಯವಾದಿತ್ವವನ್ನು ಮಾಡುತ್ತಿದ್ದೇವೆ ಎಂಬ ದೂಷಣೆಗೊಳಗಾಗುತ್ತೇವೆ.

  • ನ್ಯಾಯಮೂರ್ತಿಗಳು ಮಾಡುವ ಮೌಖಿಕ ಅವಲೋಕನಗಳು ನ್ಯಾಯಮೂರ್ತಿಗಳು ನಿರ್ದಿಷ್ಟ ವಿಚಾರದ ಬಗ್ಗೆ ಏನನನ್ನು ಯೋಚಿಸುತ್ತಾರೆ ಎಂಬುದನ್ನು ಹೇಳುತ್ತದೆ. ಸಮಾಜ ಅನೇಕ ಬಾರಿ ಅದನ್ನು ವಿರೋಧಿಸುತ್ತದೆ.

  • ಮೌಖಿಕ ಅವಲೋಕನಗಳನ್ನು ಮಾಡುವ ಬದಲು ಅದನ್ನು ತಮ್ಮ ಆದೇಶಗಳ ಮೂಲಕ ವ್ಯಕ್ತಪಡಿಸಬೇಕು ಎಂದು ನ್ಯಾಯಾಧೀಶರುಗಳಿಗೆ ನಾನು ಸೌಹಾರ್ದಯುತವಾಗಿ ಹೇಳುತ್ತಿರುತ್ತೇನೆ.  

  • ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳು ಮಾಡುವ ಮೌಖಿಕ ಅವಲೋಕನಗಳನ್ನು ನಿಯಂತ್ರಿಸಲು ನ್ಯಾಯಾಂಗವು ತನ್ನದೇ ಆದ ಆಂತರಿಕ ಕಾರ್ಯವಿಧಾನವನ್ನು ಜಾರಿಗೆ ತರಬೇಕು.

  • ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಮೂರ್ತಿಗಳ ನಿಂದನೆ ನಡೆಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನನಗೆ ಪತ್ರ ಬರೆದು ಅಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಳಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಪತ್ರಕ್ಕೆ ಉತ್ತರಿಸಿಲ್ಲ, ಏಕೆಂದರೆ ಹಾಗೆ ಉತ್ತರಿಸಿದ ಬಳಿಕ ನಾನು ಕ್ರಮ ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಹಾಗೆ ಮಾಡಿದಾಗ ಉಂಟಾಗುವ ಪರಿಣಾಮಗಳ ಬಗ್ಗೆ ನಾನು ಯೋಚಿಸಬೇಕಾಗುತ್ತದೆ...

  • ನ್ಯಾಯಮೂರ್ತಿಗಳು ʼಸಮಾಜ ಸ್ನೇಹಿʼಯಲ್ಲದ ತೀರ್ಪು ನೀಡಿದರೆ, ಸಂಸತ್ತಿನಲ್ಲಿ ಅದನ್ನು ಪರಿಶೀಲಿಸುವ ಯಾವುದೇ ಕಾರ್ಯವಿಧಾನ ಇಲ್ಲ.

  • ಕಳೆದ ಎಂಟು ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ನ್ಯಾಯಾಂಗಕ್ಕೆ ಹಾನಿಯಾಗುವ ಏನನ್ನೂ ಮಾಡಿಲ್ಲ, ಅಥವಾ ಯಾವುದೇ ರೀತಿಯಲ್ಲಿ ನ್ಯಾಯಾಂಗವನ್ನು ಪ್ರಶ್ನಿಸುವ ಅಥವಾ ದುರ್ಬಲಗೊಳಿಸುವ ಯತ್ನ ನಡೆಸಿಲ್ಲ.

  • ನಾವು ಏನನ್ನದಾದರೂ ತಿದ್ದುಪಡಿ ಮಾಡಲು ಬಯಸುವುದಾದರೆ ದೇಶದ ಭಾವನೆಗಳನ್ನು ಆ ತಿದ್ದುಪಡಿಗೆ ಸೇರಿಸಬೇಕು ಏಕೆಂದರೆ ದೇಶವೊಂದಕ್ಕೆ ತನ್ನ ಜನರ ಬೆಂಬಲ ಬೇಕಾಗುತ್ತದೆ. ನಾವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಹೊರಟಾಗ ಸುಪ್ರೀಂ ಕೋರ್ಟ್‌ ಅದನ್ನು ರದ್ದುಪಡಿಸಿತು. ನಾವು ಮುಂದೆಯೂ ಅದನ್ನು ರಚಿಸಲು ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ.

[ಕಾರ್ಯಕ್ರಮದ ಪೂರ್ಣ ದೃಶ್ಯಾವಳಿಗಳನ್ನು ಇಲ್ಲಿ ವೀಕ್ಷಿಸಿ]

Related Stories

No stories found.
Kannada Bar & Bench
kannada.barandbench.com