ಇಬ್ಬರು ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ, ಸಮುದಾಯದ ಒಪ್ಪಿಗೆ ಅಗತ್ಯವಿಲ್ಲ: ಕಾಶ್ಮೀರ ಹೈಕೋರ್ಟ್

ಇಬ್ಬರು ವಯಸ್ಕರು ವಿವಾಹವಾಗಲು ನಿರ್ಧರಿಸಿದ್ದಾಗ ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಒಪ್ಪಿಗೆಯನ್ನು ಮಾತ್ರ ಪ್ರಾಥಮಿಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ಏಕ ಸದಸ್ಯ ಪೀಠ.
ಇಬ್ಬರು ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ, ಸಮುದಾಯದ ಒಪ್ಪಿಗೆ ಅಗತ್ಯವಿಲ್ಲ: ಕಾಶ್ಮೀರ ಹೈಕೋರ್ಟ್
A1

ಇಬ್ಬರು ವಯಸ್ಕರು ಒಮ್ಮತದಿಂದ ಒಬ್ಬರನ್ನೊಬ್ಬರು ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡಾಗ, ಅವರ ಕುಟುಂಬದ ಸದಸ್ಯರ ಒಪ್ಪಿಗೆ ಅಗತ್ಯವಿಲ್ಲ ಎಂದು ಜಮ್ಮು,ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಕುಲ್ಸುಮ್ ಬಾನೋ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನಡುವಣ ಪ್ರಕರಣ].

ಇಬ್ಬರು ವಯಸ್ಕರು ವಿವಾಹವಾಗಲು ನಿರ್ಧರಿಸಿದ್ದಾಗ ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಒಪ್ಪಿಗೆಯನ್ನು ಮಾತ್ರ ಪ್ರಾಥಮಿಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾ. ಎಂ ಎ ಚೌಧರಿ ಅವರಿದ್ದ ಏಕ ಸದಸ್ಯ ಪೀಠ ಹೇಳಿತು.

Also Read
ರಾಜ್ಯ ಸರ್ಕಾರದ ʼಒಂದು ಕುಟುಂಬ ಒಂದು ಸರ್ಕಾರಿ ಕೆಲಸʼ ಯೋಜನೆ ಎತ್ತಿ ಹಿಡಿದ ಸಿಕ್ಕಿಂ ಹೈಕೋರ್ಟ್

“ಇಬ್ಬರು ವಯಸ್ಕರು ಒಮ್ಮತದಿಂದ ಒಬ್ಬರನ್ನೊಬ್ಬರು ಜೀವನ ಸಂಗಾತಿಗಳನ್ನಾಗಿ ಆರಿಸಿಕೊಂಡಾಗ, ಅದು ಅವರ ಆಯ್ಕೆಯ ಸಾಕಾರವಾಗಿದ್ದು ಭಾರತ ಸಂವಿಧಾನದ 19 ಮತ್ತು 21 ನೇ ವಿಧಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ. ಅಂತಹ ಹಕ್ಕು ಸಾಂವಿಧಾನಿಕ ಕಾನೂನಿನ ಸಮ್ಮತಿ ಪಡೆದಿದ್ದು ಒಮ್ಮೆ ಅದನ್ನು ಗುರುತಿಸಿದ ಮೇಲೆ, ಆ ಹಕ್ಕನ್ನು ರಕ್ಷಿಸುವ ಅಗತ್ಯವಿದೆ. ಅದು ಜಾತಿ ಗೌರವ ಅಥವಾ ಸಮೂಹ ಚಿಂತನೆಯ ಪರಿಕಲ್ಪನೆಗೆ ತುತ್ತಾಗುವಂತಿಲ್ಲ. ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಯಾಗಲು ಒಪ್ಪಿಕೊಂಡ ನಂತರ ಕುಟುಂಬ ಅಥವಾ ಸಮುದಾಯ ಇಲ್ಲವೇ ಕುಲದ ಒಪ್ಪಿಗೆ ಅಗತ್ಯವಿಲ್ಲ ಮತ್ತು ಅವರ ಸಮ್ಮತಿಗೆ ಧರ್ಮನಿಷ್ಠೆಯಿಂದ ಪ್ರಾಧಾನ್ಯತೆ ನೀಡಬೇಕು,” ಎಂದು ನ್ಯಾಯಾಧೀಶರು ಹೇಳಿದರು.

ಮುಸ್ಲಿಂ ಸಂಪ್ರದಾಯದಂತೆ ಆದರೆ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಹುಡುಗಿ ಮತ್ತು ಹುಡುಗ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ತಮ್ಮ ಕುಟುಂಬ ಸದಸ್ಯರು ಹಲ್ಲೆ ನಡೆಸಬಹುದು ಎಂದು ಆತಂಕಗೊಂಡು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com