ನಿರ್ಮಾಣ ಹಂತದಲ್ಲಿದೆ ಸುಪ್ರೀಂ ಕೋರ್ಟ್ ನೂತನ ಕಟ್ಟಡ: ಸಿಜೆಐ ಚಂದ್ರಚೂಡ್ ಮಾಹಿತಿ

ಪ್ರಸ್ತುತ ಇರುವ ಕಟ್ಟಡದ ಹಿಂಭಾಗದಲ್ಲಿ ನೂತನ ಕಟ್ಟಡ ತಲೆ ಎತ್ತಲಿದ್ದು ಸುಪ್ರೀಂ ಕೋರ್ಟ್ ವಕೀಲರ ಸಂಘ, ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಸಂಘ ಹಾಗೂ ಮಹಿಳಾ ವಕೀಲರ ಸಂಘದ ಬ್ಲಾಕ್‌ಗಳು ಕಟ್ಟಡದಲ್ಲಿರಲಿವೆ.
Supreme Court, CJI DY Chandrachud
Supreme Court, CJI DY Chandrachud
Published on

ಸುಪ್ರೀಂ ಕೋರ್ಟ್‌ ನೂತನ ಕಟ್ಟಡದ ನಿರ್ಮಾಣ ಕಾರ್ಯದ ಪ್ರಗತಿಯ ಕುರಿತು ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಗುರುವಾರ ಮಾಹಿತಿ ಹಂಚಿಕೊಂಡರು.  

ಪ್ರಸ್ತುತ ಕಟ್ಟಡದ ಹಿಂಭಾಗದಲ್ಲಿ ನೂತನ ಕಟ್ಟಡ ತಲೆ ಎತ್ತಲಿದ್ದು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ), ಸುಪ್ರೀಂ ಕೋರ್ಟ್‌ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಸಂಘ (ಎಸ್‌ಸಿಎಒಆರ್‌ಎ) ಹಾಗೂ ಮಹಿಳಾ ವಕೀಲರ ಸಂಘದ ಬ್ಲಾಕ್‌ಗಳು ಕಟ್ಟಡದಲ್ಲಿರಲಿವೆ ಎಂದು ಅವರು ಹೇಳಿದ್ದಾರೆ.

Also Read
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯ ಏಷ್ಯಾದ ಬೃಹತ್ ಕಾನೂನು ಲೈಬ್ರೆರಿ: ವಿಶಿಷ್ಟ ಹಾಟ್‌ಲೈನ್‌ ಸಂಶೋಧನಾ ಕಣಜ

“ದೇಶದ ಸುಪ್ರೀಂ ಕೋರ್ಟ್‌ಗೆ ಹೊಸ ಕಟ್ಟಡ ನಿರ್ಮಿಸುತ್ತಿದ್ದೇವೆ. ಇಡೀ ನೆಲ ಮಹಡಿಯಲ್ಲಿ ಎಸ್‌ಸಿಬಿಎ, ಎಸ್‌ಸಿಎಒಆರ್‌ಎ ಹಾಗೂ ಮಹಿಳಾ ವಕೀಲರ ಸಂಘ ಇತ್ಯಾದಿ ಬ್ಲಾಕ್‌ಗಳು ಇರಲಿವೆ. ಈಗಿರುವ ಕಟ್ಟಡದ ಹಿಂದೆಯೇ ಅದು ತಲೆ ಎತ್ತಲಿದೆ” ಎಂದು ಅವರು ವಿವರಿಸಿದ್ದಾರೆ.

ವಿಧಿ 370 ರದ್ದತಿ  ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಈ ವಿಚಾರ ಬಹಿರಂಗಪಡಿಸಿದರು. ನೂತನ ಸುಪ್ರೀಂ ಕೋರ್ಟ್ ಕಟ್ಟಡ ಕಾಮಗಾರಿ ಸ್ಥಳಕ್ಕೆ ಆಗಸ್ಟ್ 8ರಂದು ದಿಢೀರ್ ಭೇಟಿ ನೀಡಿದ್ದ ಸಿಜೆಐ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದರು.

Kannada Bar & Bench
kannada.barandbench.com