ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯ ಏಷ್ಯಾದ ಬೃಹತ್ ಕಾನೂನು ಲೈಬ್ರೆರಿ: ವಿಶಿಷ್ಟ ಹಾಟ್‌ಲೈನ್‌ ಸಂಶೋಧನಾ ಕಣಜ

ಇಪ್ಪತ್ನಾಲ್ಕು ತಾಸೂ ಹಾಟ್ಲೈನ್ ರೂಪದಲ್ಲಿ ಕಾರ್ಯನಿರ್ವಹಿಸುವ ಗ್ರಂಥಾಲಯ ಸಂಶೋಧನಾ ಲೇಖನಗಳನ್ನು ಪುಸ್ತಕಗಳೊಂದಿಗೆ ಕೂಡಲೇ ಒದಗಿಸುತ್ತದೆ.
Supreme Court Judges Library
Supreme Court Judges Library

ಹಳೆಯ ಪಾರ್ಲಿಮೆಂಟ್‌ ಹೌಸ್‌ನ ಸಾಧಾರಣ ಪ್ರಿನ್ಸೆಸ್‌ ಕೊಠಡಿಯಿಂದ ಕೆಲಸ ಮಾಡಲಾರಂಭಿಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಗ್ರಂಥಾಲಯ ಈಗ ಬೃಹತ್‌ ವೃಕ್ಷವಾಗಿ ಬೆಳೆದಿದ್ದು ಏಷ್ಯಾದ ಅತಿದೊಡ್ಡ ಕಾನೂನು ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗ್ರಂಥಾಲಯ ಈಗ ನ್ಯಾಯಾಲಯದ ನೂತನ ಹೆಚ್ಚುವರಿ ಕಟ್ಟಡ ಸಂಕೀರ್ಣದ ಎ ಬ್ಲಾಕ್‌ನಲ್ಲಿ 12,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಅತ್ಯಾಧುನಿಕ ಸಂಕೀರ್ಣದಲ್ಲಿ ನೆಲೆಗೊಂಡಿದೆ.

ತಕ್ಷಣದ ಅಗತ್ಯಗಳನ್ನು ಈಡೇರಿಸುವುದಕ್ಕಾಗಿ ಸುಪ್ರೀಂಕೋರ್ಟ್‌ನ ಮುಖ್ಯ ಕಟ್ಟಡದಲ್ಲಿ ಗ್ರಂಥಾಲಯದ ಎರಡು ಮಹಡಿಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸ ಗ್ರಂಥಾಲಯ ಸಂಕೀರ್ಣವನ್ನು ಏಪ್ರಿಲ್ 24 ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಉದ್ಘಾಟಿಸಿದರು. ಪ್ರವೇಶದ್ವಾರದಲ್ಲಿ ನ್ಯಾಯದೇವತೆಯ ಬಿಳಿಯ ಪ್ರತಿಮೆ  ಸ್ವಾಗತಿಸುತ್ತದೆ. ಸಿಜೆಐ ಅವರ ವಿಶೇಷ ಮನವಿಯ ಮೇರೆಗೆ ಕಲಾವಿದ ವಿನೋದ್ ಗೋಸ್ವಾಮಿ ಅವರು ಶಿಲ್ಪವನ್ನು ಕಟೆದಿದ್ದಾರೆ.

“ಪ್ರಾಥಮಿಕ ಹಂತದಲ್ಲಿ ನ್ಯಾಯಮೂರ್ತಿಗಳ ಗ್ರಂಥಾಲಯವಾಗಿರುವುದರಿಂದ ನ್ಯಾಯಮೂರ್ತಿಗಳಿಗಷ್ಟೇ  ಸೇವೆ ಒದಗಿಸಲಾಗುತ್ತಿದೆ. ಇದು ಏಷ್ಯಾದ ಅತಿದೊಡ್ಡ ಕಾನೂನು ಗ್ರಂಥಾಲಯವಾಗಿದೆ. ಇದು ಗ್ರಂಥಾಲಯಗಳ ಗ್ರಿಡ್‌ ಆಗಿಯೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ 17 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ನ್ಯಾಯಾಲಯದೊಳಗೊಂದು ಗ್ರಂಥಾಲಯ ಇದೆ. ಪ್ರತಿ ನ್ಯಾಯಾಲಯದಲ್ಲಿ 2,500 ಪುಸ್ತಕಗಳಿವೆ. ಅಲ್ಲದೆ  34 ವಸತಿ ಗ್ರಂಥಾಲಯಗಳಿವೆ. ಪ್ರತಿ ವಸತಿ ಗ್ರಂಥಾಲಯದಲ್ಲಿ ಸುಮಾರು 2,500 ಪುಸ್ತಕಗಳನ್ನು ಇರಿಸಲಾಗಿದೆ" ಎಂದು ರೂಬೆನ್ ಅವರು ʼಬಾರ್  ಅಂಡ್‌ ಬೆಂಚ್‌ʼಗೆ ತಿಳಿಸಿದರು.

"ನಾವು ಹಾಟ್‌ಲೈನ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದು ನ್ಯಾಯಾಲಯಗಳೊಂದಿಗೆ ಸಂಪರ್ಕ ಹೊಂದಿರುತ್ತೇವೆ. 17 ನ್ಯಾಯಾಲಯಗಳಲ್ಲಿ ಪ್ರತಿ ಲೈಬ್ರರಿಯಿಂದ ಇಬ್ಬರು ಸದಸ್ಯರು ಇರುತ್ತಾರೆ. ನ್ಯಾಯಮೂರ್ತಿಗಳು ಮಾಹಿತಿ ಬಯಸಿದರೆ ಅದನ್ನು ಕೂಡಲೇ ಅಲ್ಲಿಯೇ ಅವರಿಗೆ ಒದಗಿಸಲಾಗುತ್ತದೆ.  ಪ್ರತಿ ನ್ಯಾಯಾಲಯದಲ್ಲಿ 363 ಪ್ರತ್ಯೇಕ ಕಾಯಿದೆಗಳಿವೆ. ಕೇಳಲಾದ ಮಾಹಿತಿಯನ್ನು ತಕ್ಷಣವೇ ಅವರಿಗೆ ಒದಗಿಸಲು ತರಬೇತಿ ನೀಡಲಾಗುತ್ತದೆ ಮತ್ತು ಅವರು ತಕ್ಷಣ ಅದನ್ನು ಮಾಡಲು ಸಾಧ್ಯವಾಗದಿದ್ದರೆ, 2 ರಿಂದ 5 ನಿಮಿಷಗಳಲ್ಲಿ ನ್ಯಾಯಾಲಯಕ್ಕೆ ಉತ್ತರಿಸಲಿದ್ದೇವೆ. ನ್ಯಾಯಾಲಯವನ್ನು ಕಾಯುವಂತೆ ಮಾಡಲು ಸಾಧ್ಯವಿಲ್ಲ. ನಾವು ನ್ಯಾಯಾಲಯದ ತಕ್ಷಣದ ಮಾಹಿತಿ ಸಾಧನವಾಗಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಬಳಿ ಗ್ರಂಥ ಇಲ್ಲ ಎಂದು ನಾವು ಹೇಳಲು ಸಾಧ್ಯವೇ ಇಲ್ಲ. ನಮ್ಮ ಬಳಿ ಇಲ್ಲದಿದ್ದರೆ ನಾವದನ್ನು ಅಂತ್‌ರ್‌ ಗ್ರಂಥಾಲಯದಿಂದ ಎರವಲು ಪಡೆದು ಅವರಿಗೆ ಒದಗಿಸುವಂತೆ ನೋಡಿಕೊಳ್ಳುತ್ತೇವೆ” ಎಂದು ರೊಬೆನ್‌ ಹೇಳಿದರು.

Also Read
ಮಹಾಯುದ್ಧದಿಂದ ಮಹತ್ವದ ಪ್ರಕರಣಗಳವರೆಗೆ: ಚರಿತ್ರೆಯನ್ನೇ ಉಸಿರಾಡುತ್ತಿರುವ ಮದ್ರಾಸ್ ಹೈಕೋರ್ಟ್

ನ್ಯಾಯಪೀಠಗಳು ಮುಂಜಾನೆ ಅಥವಾ ತಡರಾತ್ರಿ ಕೂಡ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕೂಡ ನ್ಯಾಯಮೂರ್ತಿಗಳು ಕೇಳುವ ಮಾಹಿತಿಯನ್ನು ಗ್ರಂಥಾಲಯ ಒದಗಿಸಲಿದೆ. ಅಪರಾಧಿ ಅಫ್ಜಲ್‌ ಗುರುವಿಗೆ ಸಂಬಂಧಿಸಿದ ಅಂತಿಮ ಮೇಲ್ಮನವಿ ಆಲಿಸಲು ಸುಪ್ರೀಂ ಕೋರ್ಟ್‌ ಮಧ್ಯರಾತ್ರಿ ವಿಚಾರಣೆ ನಡೆಸಿದಾಗ ನ್ಯಾಯಾಲಯಕ್ಕೆ ಗ್ರಂಥಾಲಯ ನೆರವಾಗಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಗ್ರಂಥಾಲಯ 3,78,000 ಬಗೆಯ ಮಾಹಿತಿ ಕೋಶವನ್ನು ಹೊಂದಿದ್ದು , ಇದರಲ್ಲಿ ಪುಸ್ತಕಗಳು, ಪತ್ರಿಕೆಗಳು ಮೊನೊಗ್ರಾಫ್‌ಗಳು, ಕಾನೂನು ನಿಯತಕಾಲಿಕಗಳು ಕಾಯಿದೆ ಕಾನೂನುಗಳು, ಸಮಿತಿ ವರದಿಗಳು, ರಾಜ್ಯಗಳ ವಿವಿಧ ಕಾನೂನುಗಳು ಸಂಸದೀಯ ಚರ್ಚೆ, ರಾಜ್ಯ ಕೈಪಿಡಿ, ಸ್ಥಳೀಯ ಕಾಯಿದೆಗಳ ಬಗೆಗಿನ ಮಾಹಿತಿ ದೊರೆಯಲಿದೆ.

ಗ್ರಂಥಾಲಯವು 131 ನಿಯತಕಾಲಿಕಗಳಿಗೆ ಚಂದಾದಾರನಾಗಿದೆ.. ಅದರಲ್ಲಿ 107 ಭಾರತೀಯ ಹಾಗೂ 24 ವಿದೇಶಿ ಪತ್ರಿಕೆಗಳಿವೆ. ಇದಲ್ಲದೆ, ಇದು 19 ಪತ್ರಿಕೆಗಳು ಮತ್ತು 8 ನಿಯತಕಾಲಿಕೆಗಳಿಗೆ ಚಂದಾದಾರಿಕೆ ಒದಗಿಸಲಿದೆ.

ನ್ಯಾಯಮೂರ್ತಿಗಳ ಗ್ರಂಥಾಲಯದ ಇನ್ನೊಂದು ವಿಶಿಷ್ಟ ಕಾರ್ಯವೆಂದರೆ ಮಾಧ್ಯಮಗಳು ಪ್ರಕಟಿಸುವ ಎಲ್ಲಾ ಕಾನೂನು ಸುದ್ದಿಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಅದು ಮಾಹಿತಿ ಒದಗಿಸಲಿದೆ. ಪ್ರತಿದಿನ ಮುಂಜಾನೆ 4 ಗಂಟೆಯಿಂದ ಈ ಕಾರ್ಯ ಆರಂಭವಾಗಲಿದೆ. ಮೂರು ತಂಡಗಳು ಬೆಳಿಗ್ಗೆ 6:30ರೊಳಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಸಿಜೆಐ ಅವರಿಗೆ ಒದಗಿಸಲಿವೆ. ಇದು ಸಾಫ್ಟ್‌ಕಾಪಿಗೆ ಸಂಬಂಧಿಸಿದ್ದಾಗಿದ್ದರೆ ಭೌತಿಕವಾಗಿಯೂ ಕೂಡ ಮಾಧ್ಯಮ ಮಾಹಿತಿಯನ್ನು 10:30ರ ಒಳಗೆ ಗ್ರಂಥಾಲಯ ಒದಗಿಸಲಿದೆ.

ಗ್ರಂಥಾಲಯದಲ್ಲಿ ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಹಾಗೂ ಹಿರಿಯ ನ್ಯಾಯವಾದಿ ದಿ. ಸೋಲಿ ಸೊರಾಬ್ಜಿ ಅವರ ಸ್ಮರಣಾರ್ಥ ಸೋಲಿ ಸೊರಾಬ್ಜಿ ಬಿಬ್ಲಿಯೊಥೆಕಾ ಎಂಬ ಪ್ರತ್ಯೇಕ ವಿಭಾಗ ಇದೆ. ಸೊರಾಬ್ಜಿಯವರ ಕುಟುಂಬ ಸದಸ್ಯರು ಗ್ರಂಥಾಲಯಕ್ಕೆಂದು 5,000 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿಶೇಷ ಗ್ರಂಥಾಲಯವಾಗಿರುವುದರಿಂದ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿರುವಂತಹ ಸಿಬ್ಬಂದಿಯನ್ನೇ ಇಲ್ಲಿ ಎಲ್ಲೆಡೆ  ಕಾಣಬಹುದು.

“ಇಲ್ಲಿರುವವರು ಗ್ರಂಥಪಾಲಕರಷ್ಟೇ ಅಲ್ಲ ವೃತ್ತಿಪರರು ಮತ್ತು ಸಂಶೋಧಕರೂ ಆಗಿದ್ದೇವೆ. ನ್ಯಾಯಮೂರ್ತಿಗಳ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ವಿದ್ಯಾರ್ಹತೆಗಳಿವೆ ಎಂದು ರುಬೆನ್‌ ಅವರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com