ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪೋಷಕರಿಗೆ ನೀಡಲಿರುವ ರಿಯಾಯ್ತಿ ಕುರಿತು ಶಾಲೆಗಳು ಖಚಿತಪಡಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಶಾಲೆಗಳಿಗೆ ಸೂಚಿಸಿದೆ.
ಕೋವಿಡ್- 19 ಸಾಂಕ್ರಾಮಿಕ ರೋಗದ ನಡುವೆಯೇ ಪಶ್ಚಿಮ ಬಂಗಾಳದ ಖಾಸಗಿ ಅನುದಾನರಹಿತ ಶಾಲೆಗಳು ಶಾಲಾ ಶುಲ್ಕ ಸಂಗ್ರಹಿಸುವ ಕುರಿತಾಗಿ ವಿನೀತ್ ರುಯಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ನ್ಯಾಯಮೂರ್ತಿಗಳಾದ ಸಂಜೀಬ್ ಬ್ಯಾನರ್ಜಿ ಮತ್ತು ಮೌಶುಮಿ ಭಟ್ಟಾಚಾರ್ಯ ಅವರಿದ್ದ ನ್ಯಾಯಪೀಠ ಸಾಮಾನ್ಯ ರೀತಿಯ ರಿಯಾಯ್ತಿಗಳನ್ನು ಸೂಚಿಸಿದ್ದ 12 ಶಾಲೆಗಳಿಗೆ ನಿರ್ದಿಷ್ಟ ರಿಯಾಯ್ತಿ ನೀಡುವಂತೆ ನಿರ್ದೇಶಿಸಿತು.
ಪೋಷಕರು ಶುಲ್ಕ ಕಟ್ಟದ ಕಾರಣಕ್ಕೆ ಯಾವೊಬ್ಬ ವಿದ್ಯಾರ್ಥಿಯನ್ನೂ ಪರೀಕ್ಷೆ ಬರೆಯದಂತೆ ತಡೆಯುವಂತಿಲ್ಲ ಎಂದು ಕೋರ್ಟ್ ಭರವಸೆ ನೀಡಿತು.
"... ಸಾಂಕ್ರಾಮಿಕ ರೋಗದ ನಂತರ ಉದ್ಭವಿಸಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ಪೋಷಕರು ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಯಾವುದೇ ವಿದ್ಯಾರ್ಥಿಯ ಒಂದು ವರ್ಷದ ವಿದ್ಯಾಭ್ಯಾಸ ನಷ್ಟವಾಗಬಾರದು.”
ಕಲ್ಕತ್ತಾ ಹೈಕೋರ್ಟ್
ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಲಾಗಿದೆ.